Advertisement

ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ 

11:11 AM Oct 29, 2017 | |

ಮಂಗಳೂರು/ಬೆಳ್ತಂಗಡಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. 

Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಸಚಿವಡಿ.ವಿ. ಸದಾನಂದ ಗೌಡ ಅವರು ಶಾಲು ಹೊದಿಸಿ ಸ್ವಾಗತಿಸಿದರೆ, ಕೇಂದ್ರ ಸಚಿವ  ಅನಂತ್‌ ಕುಮಾರ್‌ ಅವರು ಹಾರ ಹಾಕಿದರು. ಸಚಿವರಾಗದ ಯು.ಟಿ.ಖಾದರ್‌, ಮೇಯರ್‌ ಕವಿತಾ ಸನಿಲ್‌ ,ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಮತ್ತು ಕೆಲ ಬಿಜೆಪಿ  ನಾಯಕರು ಉಪಸ್ಥಿತರಿದ್ದು ಆತ್ಮೀಯವಾಗಿ ಬರಮಾಡಿಕೊಂಡರು. 

ವಿಮಾನ ನಿಲ್ದಾಣದಿಂದ ಐಎಎಫ್ ಹೆಲಿಕ್ಯಾಪ್ಟರ್‌ ನಲ್ಲಿ ಬಂದಿಳಿದು ವಿಶೇಷ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದ ಮೋದಿ  ಅವರಿಗೆ ಧರ್ಮಸ್ಥಳದ ದೇಗುಲದ ಪ್ರವೇಶ ದ್ವಾರದಲ್ಲಿ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸ್ವಾಗತಿಸಿದರು.

ದೇವಾಲಯದ ಎದುರು ಕಾರಿನಲ್ಲಿ ಇಳಿಯುತ್ತಿದ್ದಂತೆ ಸಾರ್ವಜನಿಕರತ್ತ ಕೈ ಬೀಸಿದರು. 

Advertisement

ದೇಗುಲದಲ್ಲಿ ಸುಮಾರು 20 ನಿಮಿಷ ಇದ್ದ ಪ್ರಧಾನಿ ರುದ್ರಾಭಿಷೇಕ ಸೇವೆ ಸಲ್ಲಿಸಿ ಮಂಜುನಾಥ ಸ್ವಾಮಿ, ಅಮ್ಮನವರು, ಮಹಾಗಣಪತಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.  

ದೇವಾಲಯದ ಎದುರು ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ವೇದ ಘೋಷಗಳೊಂದಿಗೆ ದೇವಾಲಯದೊಳಗೆ ಬರಮಾಡಿಕೊಳ್ಳಲಾಯಿತು.

ದೇವಾಲಯ ಭೇಟಿ ಮುಗಿದ ತಕ್ಷಣ ಕಾರಿನಲ್ಲಿ ಉಜಿರೆಯತ್ತ ಪ್ರಯಾಣಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next