Advertisement
ನಗರದ ಖಾಸಗಿ ಕಂಪೆನಿ ಉದ್ಯೋಗಿ ಕೊಡಿಯಾಲ್ ಬೈಲ್‌ನ ದೀಪಾ ಶೆಣೈ ಹಾಗೂ ಮಮತಾ ಶೆಣೈ ಪೇಟಾ ಮತ್ತು ಶಾಲುಗಳನ್ನು ಖರೀದಿಸಿದವರು. ಹರಾಜು ಪ್ರಕ್ರಿಯೆ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಗಮನಿಸಿ ಬಿಡ್‌ನಲ್ಲಿ ಭಾಗಿಯಾಗಿದ್ದರು. ಆ ರೀತಿ ಖರೀದಿಸಿರುವ ಪೇಟಾ ಹಾಗೂ ಬಾಂದನಿ ಶಾಲುಗಳು ದೀಪಾ ಮತ್ತು ಮಮತಾರ ಕೈ ಸೇರಿವೆೆ.
ಹರಾಜಿನಿಂದ ಬಂದ ಹಣವನ್ನು ಗಂಗಾ ನದಿ ಸ್ವತ್ಛಗೊಳಿಸುವ ಕೇಂದ್ರ ಸರಕಾರದ ನವಾಮಿ ಗಂಗೆ ಯೋಜನೆಗೆ ಬಳಸುವ ಉದ್ದೇಶ ಅರಿತ ಮಮತಾ ಅವರು, ತಮ್ಮ ಸಹೋದ್ಯೋಗಿ ದೀಪಾ ಅವರಲ್ಲೂ ಹಂಚಿಕೊಂಡರು. ಬಳಿಕ ಇಬ್ಬರೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಹಲವು ವಸ್ತುಗಳಿಗೆ ಬಿಡ್ ಮಾಡಿದರೂ ಎಲ್ಲವುಗಳ ಬೆಲೆ ಸಾವಿರದಿಂದ ಲಕ್ಷದವರೆಗೆ ಏರಿತು. ಕೊನೆಗೆ ಇವರ ಕಣ್ಣಿಗೆ ಬಿದ್ದದ್ದು ಪೇಟಾ ಹಾಗೂ ಬಾಂದಿನಿ ಶಾಲು. ದೀಪಾ ಅವರು ಆಯ್ಕೆ ಮಾಡಿದ ಪೇಟಾದ ಮೂಲ ಬೆಲೆ 800 ರೂ. ಇತ್ತು. ಬಿಡ್ಡಿಂಗ್ ಆದ ಬಳಿಕ 1600 ಕ್ಕೆ ಏರಿತು. ಕೂಡಲೇ ದೀಪಾ ಅದನ್ನು ಖರೀದಿಸಿ ದರು. 200 ರೂ. ಕೊರಿಯರ್ ಚಾರ್ಜ್, 94 ರೂ. ವಿಮೆ ಎಲ್ಲವೂ ಸೇರಿ ಒಟ್ಟು 1894 ರೂ. ಗೆ ಪೇಟಾ ದೊರೆತಿದೆ. ಮಮತಾ ಅವರು ಎರಡು ಬಾಂದಿನಿ ಶಾಲು ಹಾಗೂ ಒಂದು ಪೇಟಾವನ್ನು ಸುಮಾರು 7,000 ರೂ. ಬೆಲೆ ಕೊಟ್ಟು ಖರೀದಿಸಿದರು. ಬಿಡ್ ಪ್ರಕ್ರಿಯೆ ಪೂರ್ಣಗೊಂಡ ತಿಂಗಳೊಳಗೆ ವಸ್ತುಗಳು ಇವರ ಕೈ ಸೇರಿವೆ. ಇದರೊಂದಿಗೆ ಶುಭಾಶಯ ಕೋರುವ ಸರ್ಟಿಫಿಕೇಟ್‌ನೂ° ನೀಡಲಾಗಿದೆ.
Related Articles
ಹಲವು ಬಣ್ಣಗಳ ಮಿಶ್ರಿತ ಸುಮಾರು 8 ಮೀಟರ್ ಉದ್ದದ ಪೇಟಾವನ್ನು ಇಬ್ಬರೂ ಮೂರು ದುಪ್ಪಟ್ಟಾಗಳಾಗಿ ಮಾರ್ಪಡಿಸಿದ್ದಾರೆ. ಒಂದೆಡೆ ಮೋದಿ ಅವರು ಬಳಸಿದ ವಸ್ತು ಎಂಬ ಹೆಮ್ಮೆ. ಇನ್ನೊಂದೆಡೆ ಯಾವುದೇ ಬಣ್ಣದ ಕುರ್ತಾಗಳಿಗೆ ಒಪ್ಪುತ್ತದೆ ಎನ್ನುವ ಖುಷಿ ಎನ್ನುತ್ತಾರೆ ಅವರಿಬ್ಬರೂ.
Advertisement
ಗಂಗಾ ನದಿ ಸ್ವತ್ಛತೆಗೆ ಹಣ ಕೊಟ್ಟ ತೃಪ್ತಿಪತ್ರಿಕೆಯಲ್ಲಿ ಆನ್‌ಲೈನ್ ಪ್ರಕ್ರಿಯೆ ಮೂಲಕ ಪ್ರಧಾನಿ ಮೋದಿ ಅವರ ವಸ್ತುಗಳು ಮಾರಾಟಕ್ಕಿವೆ ಎಂಬುದು ತಿಳಿದ ತತ್‌ಕ್ಷಣ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಪೇಟಾ, ಶಾಲು ಖರೀದಿಸಿದೆವು. ಗಂಗಾನದಿ ಸ್ವತ್ಛತೆಗೆ ಹಣ ನೀಡಿದ ತೃಪ್ತಿ ಇದೆ.
– ಮಮತಾ ಶೆಣೈ, ಮಂಗಳೂರು ಸಮಾವೇಶಕ್ಕೆ ಅದೇ ಶಾಲು ಧಾರಣೆ
ಮೋದಿ ಅವರ ಉದ್ದೇಶವೇ ಇಷ್ಟವಾಗಿ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಪೇಟಾ ಖರೀದಿಸಿದೆ. ಅದನ್ನು ಶಾಲು ಮಾಡಿ ಧರಿಸಿ. ಎ. 13 ರಂದು ನಡೆದ ಮೋದಿ ಸಮಾವೇಶದಲ್ಲಿ ಭಾಗವಹಿಸಿದ್ದೆವು.
– ದೀಪಾ ಶೆಣೈ, ಮಂಗಳೂರು
- ಪ್ರಜ್ಞಾ ಶೆಟ್ಟಿ