Advertisement
1918ರ ಹೈಫಾ ವಿಮೋಚನಾ ಸಮರದಲ್ಲಿ ಒಟ್ಟೋಮನ್ ಟರ್ಕ್Õ ವಿರುದ್ಧ ಹೋರಾಡಿ ಮೈಸೂರು ಯೋಧರೂ ಸೇರಿದಂತೆ 44 ಮಂದಿ ಭಾರತೀಯ ಸೈನಿಕರು ಮಡಿದಿದ್ದರು. ಇವರ ಸ್ಮಾರಕವನ್ನು ಹೈಫಾದಲ್ಲಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, 2012ರಲ್ಲಿ ಹೈಫಾ ನಗರಪಾಲಿಕೆಯು ಭಾರತೀಯ ಯೋಧರ ಕಥೆಗಳನ್ನು ಅಲ್ಲಿನ ಶಾಲಾ ಪಠ್ಯದಲ್ಲಿ ಸೇರಿಸುವ ಮೂಲಕ ಅವರ ಬಲಿದಾನವನ್ನು ಸ್ಮರಣೀಯವಾಗಿ ಸಿದೆ. ಇಲ್ಲಿಗೆ ಭೇಟಿ ನೀಡಿದ ಮೋದಿ ಅವರು, ಯುದ್ಧ ಸ್ಮಾರಕಕ್ಕೆ ಪುಷ್ಪಾಂಜಲಿ ಸಲ್ಲಿಸಿ ಯೋಧರಿಗೆ ನಮಿಸಿದರು.
ಗಾಲ್ ಮೊಬೈಲ್ ಎನ್ನುವುದು ಪುಟ್ಟ ವಾಹನದಲ್ಲಿರುವ ಒಂದು ಶುದ್ಧೀಕರಣ ಘಟಕವಾಗಿದ್ದು, ಸಮುದ್ರ ನೀರನ್ನು ಶುದ್ಧೀಕರಿಸುತ್ತದೆ. ಮಿಲಿಟರಿ ಬಳಕೆಗೆ, ಪ್ರಕೃತಿ ವಿಕೋಪ ಇತ್ಯಾದಿಗಳ ಸಂದರ್ಭದಲ್ಲಿ ಇದ್ದು ಸ್ಥಳದಲ್ಲೇ ಕುಡಿವ ಶುದ್ಧ ನೀರು ಪೂರೈಕೆ ಮಾಡುತ್ತದೆ. ದಿನದಲ್ಲಿ 20 ಸಾವಿರ ಲೀ. ಸಮುದ್ರ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಮಣ್ಣು ಮಿಶ್ರಿತ ನೀರಾದರೆ ದಿನಕ್ಕೆ 80 ಸಾವಿರ ಲೀ.ವರೆಗೆ ನೀರು ಶುದ್ಧೀಕರಣ ಮಾಡಬಲ್ಲದು. ಕಳೆದ ವರ್ಷ ಇಸ್ರೇಲ್ ರಾಷ್ಟ್ರಪತಿ ರುವೆನ್ ರಿವಿÉನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಈ ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕುರಿತಂತೆ ಭಾರತದೊಂದಿಗೆ ಸಹಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಘಟಕ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದ್ದಾರೆ. ಭಾರತ-ಇಸ್ರೇಲ್ ಒಪ್ಪಂದಗಳಲ್ಲಿ ಜಲಸಂರಕ್ಷಣೆ, ಶುದ್ಧೀಕರಣ, ಅತ್ಯಾಧುನಿಕ ನೀರಾವರಿ, ನದಿಯ ಉಪಯುಕ್ತ ಬಳಕೆ, ಗಂಗಾ ನದಿ ಶುದ್ಧೀಕರಣ ವಿಚಾರಗಳೂ ಅಡಕವಾಗಿವೆ.
Related Articles
Advertisement
ಇಂದು ಜಿ20 ಶೃಂಗದಲ್ಲಿ ಕೆನಡಾ, ಜಪಾನ್ ನಾಯಕರ ಜತೆ ಮಾತುಕತೆಇಸ್ರೇಲ್ನಿಂದ ನೇರವಾಗಿ ಜರ್ಮನಿಯ ಹ್ಯಾಂಬರ್ಗ್‌ಗೆ ತೆರಳಿರುವ ಪ್ರಧಾನಿ ಮೋದಿ ಶುಕ್ರವಾರದಿಂದ ನಡೆಯಲಿರುವ 2 ದಿನಗಳ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಕೆನಡಾ, ಜಪಾನ್, ಇಟಲಿ, ಯುಕೆ ಸೇರಿದಂತೆ ಹಲವು ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಬ್ರಿಕ್ಸ್ ರಾಷ್ಟ್ರಗಳ ಸಭೆಯಲ್ಲೂ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜಿ20 ಸಭೆಯಲ್ಲಿ ಉಗ್ರ ನಿಗ್ರಹ, ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.