Advertisement
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತಿನಲ್ಲಿ ಸತತ 7 ಬಾರಿ ಗೆಲುವು ಸಾಧಿಸಿರುವುದೊಂದು ದೊಡ್ಡ ದಾಖಲೆಯೆಂದು ಬಣ್ಣಿಸಿ, ಪಶ್ಚಿಮ ಬಂಗಾಲದಲ್ಲಿ 25 ವರ್ಷ ಸಿಪಿಎಂ ಪಕ್ಷ ಆಡಳಿತ ನಡೆಸಿದೆ ಆದರೆ ಒಂದು ವ್ಯತ್ಯಾಸ ಏನೆಂದರೆ ಪಶ್ಚಿಮ ಬಂಗಾಲದಲ್ಲಿ ಬಡತನಕ್ಕೆ ಸಿಪಿಎಂ ದುಡಿದಿದ್ದು ಭಾರತೀಯ ಜನತಾ ಪಕ್ಷದ ಸರ್ಕಾರ ಗುಜರಾತ್‍ನನ್ನು ಒಂದು ಸಮರ್ಥ ರಾಜ್ಯ ಮಾಡುವುದರ ಜೊತೆಗೆ ಸಂಪತ್ತು ಭರಿತ ರಾಜ್ಯವನ್ನಾಗಿ ಮಾಡಿದ್ದಾರೆ ಎಂದರು.
ಗುಜರಾತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಇದರಿಂದ ಗೊತ್ತಾಗುತ್ತದೆ ಅವರ ಸ್ಪರ್ಧೆಯಲ್ಲೆ ಇಲ್ಲವೆಂಬುದು ಫಲಿತಾಂಶದಿಂದ ಗೋಚರಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ ಸಚಿವರು ದೊಡ್ಡ ರಾಜ್ಯದ ಚುನಾವಣೆಯಲ್ಲಿ ಕೇವಲ 17 ಸ್ಥಾನಗಳಿಗೆ ಸೀಮಿತಗೊಂಡಿರುವ ಕಾಂಗ್ರೆಸ್ ನಾಯಕರು ವಿಚಾರ ಮಾಡಿಕೊಳ್ಳಬೇಕು ಇನ್ನೂ ಹಿಮಾಚಲ್ ಪ್ರದೇಶದ ಚುನಾವಣೆಯಲ್ಲಿ ಐದು ವರ್ಷಕ್ಕೊಮ್ಮೆ ಜನ ಬದಲಾವಣೆಯನ್ನು ಬಯಸುತ್ತಾರೆ ಎಂದರು.
Related Articles
Advertisement
ಗುಜರಾತಿನ ಚುನಾವಣೆಯ ಫಲಿತಾಂಶದಿಂದ ಕರ್ನಾಟಕದ ಸರ್ಕಾರ ಸಚಿವರು-ಶಾಸಕರಿಗೆ ಪಕ್ಷದ ಕಾರ್ಯಕರ್ತರಿಗೆ ಮನೋಸ್ಥೈರ್ಯವನ್ನು ಇಮ್ಮಿಡಿ ಮಾಡಿದೆ ಎಂದ ಸಚಿವರು ಗುಜರಾತಿನ ಪ್ರಗತಿಪರ ರಾಜ್ಯ ಹಾಗೆಯೇ ಕರ್ನಾಟವೂ ಪ್ರಗತಿಪರ ರಾಜ್ಯ ಹೀಗಾಗಿ ನಮ್ಮ ಉತ್ಸಾಹ ಹೆಚ್ಚಾಗಿದೆ ಆದರೇ ನಾವು ಕೂಡ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು ಎಂಬುದು ನನ್ನ ಅಭಿಪ್ರಾಯ ನಮಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಇರಬೇಕು ಅತಿಯಾದ ಆತ್ಮವಿಶ್ವಾಸ ಇರಬಾರದು ಎಚ್ಚರಿಕೆಯಿಂದ ನಮ್ಮ ಸಂಘಟನೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬೇಕು ಜನರ ವಿಶ್ವಾಸವನ್ನು ಮತ್ತು ಪ್ರೀತಿಯನ್ನು ಪಡೆಯುವಂತರಾಗಬೇಕು ಮುಂದಿನ ಐದು ತಿಂಗಳ ಅವಧಿಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸವನ್ನು ಮಾಡಿದರೆ ಜನ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಮೋದಿ ಅಲೆಲೋಕಸಭಾ ಚುನಾವಣೆಯಲ್ಲಿ 300 ಕ್ಕೂ ಅಧಿಕ ಸಂಸದರನ್ನು ಆಯ್ಕೆ ಮಾಡುತ್ತಾರೆ ಎಂದರೇ ಅದು ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿರುವ ಜನರ ವಿಶ್ವಾಸವನ್ನು ತೋರಿಸುತ್ತದೆ ಜನಮನ್ನಣೆ ಇಲ್ಲದೆ ಪ್ರಧಾನಮಂತ್ರಿ ಆಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಸಚಿವರು ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿರುವ ಸಮಸ್ಯೆಗಳು ಇರುತ್ತದೆ ಅದರ ಪ್ರಭಾವ ಬೀರುತ್ತದೆ ಎಂದು ವಿಶ್ಲೇಷಣೆ ಮಾಡಿದ ಸಚಿವರು ದೇಶದ ಜನರು ಅಭಿಮಾನ ಮತ್ತು ಪ್ರೀತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಜಾತ್ಯಾತೀತ ಮತ್ತು ಪಕ್ಷಾತೀತ ನಾಯಕವೆಂದು ಮೆಚ್ಚುಕೊಂಡಿದ್ದಾರೆ ಮುಂದಿನ 2024ರ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಜೆ.ನಾಗರಾಜ್, ಶಿಡ್ಲಘಟ್ಟ ನಗರಸಭಾ ಸದಸ್ಯ ಕೃಷ್ಣಮೂರ್ತಿ, ಬಿಎಸ್‍ಪಿ ಮೌಲಾ ಮತ್ತಿತರರು ಉಪಸ್ಥಿತರಿದ್ದರು.