Advertisement

ಈ ಬಾರಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿಗೆ ಆಹ್ವಾನ: ಮುರುಗೇಶ್ ನಿರಾಣಿ

04:02 PM Feb 10, 2022 | Team Udayavani |

ಬೆಂಗಳೂರು: ನವೆಂಬರ್ ತಿಂಗಳ 2,3,4 ರಂದು ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಈ ಬಾರಿ ಹೂಡಿಕೆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2010 ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದಾಗ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ ಮಾಡಲಾಗಿತ್ತು. ಉದ್ಯೋಗ ನೀಡು ಉದ್ಯಮಿಯಾಗು ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಈ ತಿಂಗಳ 27 ರಂದು ಮಾಡಲಾಗುವುದು. ಅದರಲ್ಲಿ 5000 ಪದವೀಧರರು ಪಾಲ್ಗೊಳ್ಳಲಿದ್ದಾರೆ ಎಂದರು.

ನಾನು ಕೈಗಾರಿಕೆ ಇಲಾಖೆ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಅತಿ ಹೆಚ್ಚು ಬಂಡವಾಳ ಹರಿದು ಬಂದು ನಂಬರ್ ಒನ್ ರಾಜ್ಯವಾಗಿದೆ. ನವೆಂಬರ್ ಒಳಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಲಾಗುತ್ತಿದೆ.  ಜಮೀನು ಪಡೆದವರು ಉದ್ಯಮ ಸ್ಥಾಪನೆ ಮಾಡದೇ ಇರುವವರ ಜಮೀನು ವಾಪಸ್ ಪಡೆಯಲಾಗುತ್ತಿದೆ. ಸುಮಾರು 1000 ಎಕರೆ ವಾಪಸ್ ಪಡೆಯಲಾಗುತ್ತಿದೆ.  ಏಕಾಏಕಿ ವಶಪಡಿಸಿಕೊಳ್ಳಲು ಮುಂದಾದರೆ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಎಸ್ಟಿ ಎಸ್ಟಿಯವರಿಗೆ ಶೇ 75% ಸಬ್ಸಿಡಿ ಕೊಡಲಾಗುತ್ತಿದೆ. ಆರ್ಥಿಕ ದುರ್ಬಲವಾಗಿರುವವರಿಗೆ 2 ಎಕರೆ ಜಮೀನು ಶೇ 75% ರಿಯಾಯ್ತಿ ದರದಲ್ಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಗೆ ನಾನು ಅತಿಥಿಯಾಗಿ ಹೋಗುತ್ತೇನೆ. ವಚನಾನಂದ ಸ್ವಾಮೀಜಿ ಮುಂದೆ ನಿಂತು ಪೀಠ ಮಾಡುತ್ತಿದ್ದಾರೆ. ಹರಿಹರ ಪೀಠ ಇದ್ದರೂ ಕೂಡಲ ಸಂಗಮ ಪೀಠ ನಾವೇ ಸ್ಥಾಪನೆ ಮಾಡಿದ್ದೇವೆ. ನಮ್ಮ ಹಿಂದು ಧರ್ಮದಲ್ಲಿ ಸ್ವಾಮೀಜಿಗಳಿಗೆ ಉನ್ನತ ಸ್ಥಾನವಿದೆ. ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಮೀಜಿಗೆ ಗೌರವಿಸುತ್ತೇವೆ. ಯಾವುದೇ ಪೀಠ ರಾಜಕಾರಣಿಗಳ ಲಾಭಕ್ಕೆ ಹುಟ್ಟಿಕೊಂಡಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ.  ಇನ್ನಷ್ಟು ಪೀಠಗಳು ಹುಟ್ಡಿಕೊಂಡರೂ ಯಾವುದೇ ಸಮಸ್ಯೆ ಇಲ್ಲ. ನಾನು ತನು ಮನ ಧನದಿಂದ ಸಹಾಯ ಮಾಡುತ್ತೇನೆ ಎಂದು ನಿರಾಣಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next