Advertisement

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

01:09 AM Nov 22, 2024 | Team Udayavani |

ಜಾರ್ಜ್‌ಟೌನ್‌: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾ ಮತ್ತು ಡೊಮಿನಿಕನ್‌ ಗಣರಾಜ್ಯಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿವೆ. ಕೋವಿಡ್‌ ಅವಧಿಯಲ್ಲಿ 2 ರಾಷ್ಟ್ರಗಳಿಗೆ ಲಸಿಕೆ ನೀಡಿ ನೆರವಾಗಿರುವ ಹಿನ್ನೆಲೆಯಲ್ಲಿ ಈ ಗೌರವ ಪ್ರದಾನ ಮಾಡಲಾಗಿದೆ.

Advertisement

ಗಯಾನಾ ದೇಶ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಆರ್ಡರ್‌ ಆಫ್ ಎಕ್ಸಲೆನ್ಸ್‌’ ನೀಡಿದರೆ, ಡೊಮಿನಿಕ್‌ ಗಣರಾಜ್ಯ “ಡೊಮಿನಿಕ್‌ ಅವಾರ್ಡ್‌ ಆಫ್ ಆನರ್‌’ ನೀಡಿ ಗೌರವಿಸಿದೆ. ಈ ಮೂಲಕ 19 ಅಂತಾರಾಷ್ಟ್ರೀಯ ಗೌರವಗಳಿಗೆ ಪ್ರಧಾನಿ ಮೋದಿ ಪಾತ್ರರಾದಂತಾಗಿದೆ. ಗಯಾನಾ ದೇಶದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಟ್ವೀಟ್‌ ಮಾಡಿದ ಪ್ರಧಾನಿ “ಈ ಗೌರವ ದೇಶದ 140 ಕೋಟಿ ಮಂದಿ ಪ್ರಜೆಗಳಿಗೆ ಸಿಕ್ಕಿದ ಗೌರವ. ಪ್ರಶಸ್ತಿ ನೀಡಿದ್ದಕ್ಕೆ ಗಯಾನಾ ಅಧ್ಯಕ್ಷ ಡಾ| ಇರ್ಫಾನ್‌ ಅಲಿಯವರಿಗೆ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದಾರೆ.

ಡೊಮಿನಿಕನ್‌ ಗಣರಾಜ್ಯದ ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್‌ ಕೃತಜ್ಞತೆ ಸೂಚಿಸಿ “ವಿನೀತ ಭಾವದಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಯಾನಾ ಸಂಸತ್ತಿನ ವಿಶೇಷ ಅಧಿವೇಶವನ್ನು ಉದ್ದೇಶಿಸಿ ಕೂಡ ಮಾತನಾಡಿದರು. ಈ ಮೂಲಕ 14ನೇ ಬಾರಿ ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಎಂಬ ದಾಖಲೆಗೂ ಪಾತ್ರರಾದರು. ಈ ಹಿಂದೆ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 7, ಇಂದಿರಾ ಗಾಂಧಿ 4, ನೆಹರೂ 3, ರಾಜೀವ್‌ ಗಾಂಧಿ, ವಾಜಪೇಯಿ ತಲಾ 2, ಮೊರಾರ್ಜಿ ದೇಸಾಯಿ, ಪಿ.ವಿ.ನರಸಿಂಹ ರಾವ್‌ ತಲಾ 1 ಬಾರಿ ಇತರ ರಾಷ್ಟ್ರಗಳ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಗೌರವಕ್ಕೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next