Advertisement

ಒಖೀ ಸಂತ್ರಸ್ತರನ್ನು ಭೇಟಿ ಮಾಡಿದ ಪ್ರಧಾನಿ

08:00 AM Dec 20, 2017 | Harsha Rao |

ತಿರುವನಂತಪುರಂ: ಕಳೆದ ತಿಂಗಳು ಕೇರಳದ ಕರಾವಳಿ ಹಾಗೂ ಲಕ್ಷದ್ವೀಪಕ್ಕೆ ಅಪ್ಪಳಿಸಿದ ಒಖೀ ಚಂಡಮಾರುತದಿಂದ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ಮಾಡಿದ್ದಾರೆ. ತಿರುವನಂತಪುರ ಹಾಗು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಅವರು, ಒಖೀ ಚಂಡಮಾರುತದಿಂದ ಅವಧಿಯಲ್ಲಿ ನಾಪತ್ತೆಯಾದ ಕುಟುಂಬ ಸದಸ್ಯರನ್ನು ಪತ್ತೆ ಮಾಡಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಮೀನುಗಾರರಿಗೆ ಮನೆಗಳನ್ನು ಮರುನಿರ್ಮಿಸಿ ಕೊಳ್ಳಲು ಕೇಂದ್ರ ಸರ್ಕಾರ ನೆರವಾಗುತ್ತದೆ ಎಂದು ಭರವಸೆ ನೀಡಿದರು. ನಾಪತ್ತೆಯಾಗಿರುವ ಎಲ್ಲ ಮೀನುಗಾರರೂ ಕ್ರಿಸ್‌ಮಸ್‌ಗೂ ಮುನ್ನ ವಾಪಸಾಗಲಿರುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪೂಂಥುರಾದಲ್ಲಿ ನೂರಾರು ಮೀನುಗಾರರನ್ನು ಭೇಟಿ ಮಾಡಿದ ಮೋದಿ, ಸುಮಾರು ಎರಡು ಗಂಟೆಗಳನ್ನು ಅವರೊಂದಿಗೆ ಕಳೆದರು. ಅವರ ಸಂಕಷ್ಟಗಳನ್ನು ಆಲಿಸಿದರು. ಅಲ್ಲದೆ ಲ್ಯಾಟಿನ್‌ ಕ್ಯಾಥೋಲಿಕ್‌ ಚರ್ಚ್‌ಗೂ ಭೇಟಿ ನೀಡಿದರು. ಮೋದಿ ಜತೆಗೆ ಕೇಂದ್ರ ಸಚಿವ ಆಲೊನ್ಸ್‌ ಕಣ್ಣಂಥಾನಮ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತು ರಾಜ್ಯಪಾಲ ಪಿ. ಸದಾಶಿವಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next