ಹೊಸದಿಲ್ಲಿ: ದೇಶದ ಆರ್ಥಿಕ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಾಣದೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ವಿವಿಧ ಆರ್ಥಿಕ ತಜ್ಞರ ಜತೆಗೆ ಇದೇ 22ರಂದು ಮಹತ್ವದ ಸಭೆ ನಡೆಸಲಿದ್ದಾರೆ. ಜುಲೈ 5ರಂದು ಕೇಂದ್ರ ಸರಕಾರದ ಸಾಮಾನ್ಯ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನವೇ ಈ ಸಭೆ ಕರೆದಿರುವುದು ಗಮನಾರ್ಹ.
2018ರ ಕೊನೆಯ ತ್ತೈಮಾಸಿಕ (ಅಕ್ಟೋಬರ್‌ನಿಂದ ಡಿಸೆಂಬರ್) ಅವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 6.6ರಷ್ಟಿತ್ತು. ಆದರೆ, ಆನಂತರದ ತ್ತೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ಶೇ.5.8ಕ್ಕೆ ಇಳಿಕೆ ಕಂಡಿದೆ. ಜೂ. 22ರಂದು ನಡೆಯಲಿರುವ ಸಭೆಯಲ್ಲಿ, ವಿತ್ತೀಯ ಬೆಳವಣಿಗೆಗೆ ಪೂರಕವಾಗುವ ಅಂಶಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ.
Advertisement