Advertisement
“ನಾವು ಒಲಿಂಪಿಕ್ಸ್ ಬಗ್ಗೆ ಮಾತನಾಡುವಾಗ ಮಿಲ್ಕಾ ಸಿಂಗ್ ಅವರನ್ನು ಉಲ್ಲೇಖೀಸದೆ ಇರಲು ಸಾಧ್ಯವಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗ, ಒಲಿಂಪಿಕ್ಸ್‌ಗೆ ತೆರಳುವ ಭಾರತೀಯ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುವಂತೆ ಮನವಿ ಮಾಡಿದ್ದೆ. ಆದರೆ ಅವರೀಗ ನಮ್ಮ ಜತೆಗಿಲ್ಲ ಎಂಬುದು ಬೇಸರದ ಸಂಗತಿ’ ಎಂದು ಮೋದಿ ಭಾವುಕರಾದರು.
Related Articles
Advertisement
ಹಳ್ಳಿಗಳಿಂದ ಬಂದ ಸಾಧಕರು“ನಮ್ಮ ದೇಶದ ಬಹುತೇಕ ಕ್ರೀಡಾ ಸಾಧಕರು ಸಣ್ಣ ಸಣ್ಣ ಪಟ್ಟಣಗಳಿಂದ ಅಥವಾ ಹಳ್ಳಿ ಪ್ರದೇಶದಿಂದ ಬಂದಿದ್ದಾರೆ. ಟೋಕಿಯೊಗೆ ತೆರಳುವ ತಂಡದಲ್ಲಿ ಇಂಥ ಅನೇಕರನ್ನು ಕಾಣಬಹುದು. ಇವರ ಕ್ರೀಡಾ ಬದುಕು ಎಲ್ಲರಿಗೂ ಸ್ಫೂರ್ತಿ’ ಎಂದರು. ಆರ್ಚರ್ ಪ್ರವೀಣ್ ಜಾಧವ್, ಹಾಕಿ ಆಟಗಾರ್ತಿ ನೇಹಾ ಗೋಯೆಲ್, ಬಾಕ್ಸರ್ ಮನೀಷ್ ಕೌಶಿಕ್, ರೇಸ್ ವಾಕರ್ ಪ್ರಿಯಾಂಕಾ ಗೋಸ್ವಾಮಿ, ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಫೆನ್ಸರ್ ಭವಾನಿ ದೇವಿ ಮೊದಲಾದವರನ್ನು ಈ ಸಂದರ್ಭದಲ್ಲಿ ಮೋದಿ ಉಲ್ಲೇಖೀಸಿದರು. “ಪ್ರವೀಣ್ ಜಾಧವ್ ಅವರ ಹೆತ್ತವರು ಕೂಲಿಯಾಳುಗಳಾಗಿದ್ದಾರೆ. ನೇಹಾ ಅವರ ತಾಯಿ, ಸಹೋದರಿಯರು ಸೈಕಲ್ ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದಾರೆ. ಪ್ರಿಯಾಂಕಾ ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದಾರೆ. ಭವಾನಿ ಅವರ ತಾಯಿ ಚಿನ್ನವನ್ನು ಅಡವಿಟ್ಟು ಮಗಳಿಗೆ ತರಬೇತಿ ಕೊಡಿಸಿದ್ದಾಗಿ ಓದಿದ್ದೇನೆ’ ಎಂದು ಮೋದಿ ಹೇಳಿದರು.