Advertisement

ಆತಿಥ್ಯಕ್ಕೆ ಹೆಸರುವಾಸಿಯಾದ ಗೋವಾ ಅಭಿವೃದ್ಧಿ ಕ್ಷೇತ್ರದಲ್ಲೂ ಪ್ರಸಿದ್ದಿ ಪಡೆದಿದೆ: ಪ್ರಧಾನಿ

01:51 PM Feb 06, 2024 | Team Udayavani |

ಪಣಜಿ: ವಿಶ್ವದಲ್ಲಿ ಇಂಧನದ ಬೇಡಿಕೆ ಹೆಚ್ಚಿದ್ದರೂ, ದೇಶದ ಮೂಲೆ ಮೂಲೆಗೂ ಕಡಿಮೆ ವೆಚ್ಚದಲ್ಲಿ ಇಂಧನ ತಲುಪಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಈ ಹಿಂದೆಯೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿತ್ತು. 100ರಷ್ಟು ವಿದ್ಯುತ್ ಪೂರೈಕೆಯ ಗುರಿಯನ್ನು ದೇಶ ತಲುಪಿದೆ. ಭಾರತವು 21ನೇ ಶತಮಾನಕ್ಕೆ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

Advertisement

ದಕ್ಷಿಣ ಗೋವಾದ ಮಡಗಾಂವ ಸಮೀಪದ ಬೇತುಲ್‍ನಲ್ಲಿ ಆಯೋಜಿಸಲಾಗಿದ್ದ ಭಾರತ ಇಂಧನ ಸಪ್ತಾಹ 2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಒ.ಎನ್.ಜಿ.ಸಿ ಸೀ ಸರ್ವೈವಲ್ ಸೆಂಟರ್ ಉದ್ಘಾಟಿಸಿದರು. ದೇಶದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳು, ರೈಲ್ವೆಗಳು ಅಥವಾ ಇತರ ಮೂಲಸೌಕರ್ಯಗಳಿಗೆ ಶಕ್ತಿಯ ಅಗತ್ಯವಿದೆ ಎಂದು ಮೋದಿ ಹೇಳಿದರು. ಜಾಗತಿಕ ಮಾನದಂಡಗಳ ಪ್ರಕಾರ ಸಮಗ್ರ ಸಮುದ್ರ ಬದುಕುಳಿಯುವ ತರಬೇತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರತಿ ವರ್ಷ 10,000-15,000 ಉದ್ಯೋಗಿಗಳಿಗೆ ತರಬೇತಿ ನೀಡುತ್ತದೆ. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವದಾದ್ಯಂತ ತಜ್ಞರು ನಂಬಿದ್ದಾರೆ. ಇದರಲ್ಲಿ ಶಕ್ತಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ. ಭಾರತವು ಇಂಧನ ಮತ್ತು ಎಲ್‍ಪಿಜಿ ಅನಿಲದ ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕವಾಗಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

‘ಗೋವಾದಲ್ಲಿ ಇಂಧನ ಸಪ್ತಾಹ ಆಯೋಜಿಸಲಾಗುತ್ತಿದೆ. ಗೋವಾ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಗೋವಾ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ತಲುಪುತ್ತಿದೆ. ಪರಿಸರ ಸೂಕ್ಷ್ಮತೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಾವು ಒಗ್ಗೂಡಿದಾಗ ಗೋವಾ ಪರಿಪೂರ್ಣ ಸ್ಥಳವಾಗಲಿದೆ. ಈ ವಾರ ಬರುವ ಎಲ್ಲ ವಿದೇಶಿ ಪ್ರವಾಸಿಗರು ಜೀವಮಾನವಿಡೀ ವಿಶಿಷ್ಟ ಅನುಭವ ಪಡೆಯಲಿದ್ದಾರೆ ಎಂಬ ವಿಶ್ವಾಸ ನನಗಿದೆ. ‘ಎನರ್ಜಿ ವೀಕ್ ಒಂದು ನಿರ್ಣಾಯಕ ಹಂತದಲ್ಲಿ ಬರುತ್ತದೆ, ಈ ವರ್ಷದ ಕೊನೆಯ ಆರು ತಿಂಗಳಲ್ಲಿ ಭಾರತದ ಜಿಡಿಪಿ ಶೇಕಡಾ 7.5 ಕ್ಕಿಂತ ಹೆಚ್ಚಿದೆ. ಈ ದರವು ಜಾಗತಿಕ ಬೆಳವಣಿಗೆಯ ಮುನ್ಸೂಚನೆಗಿಂತ ಹೆಚ್ಚಾಗಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ದೇಶವು ಇದೇ ರೀತಿಯ ಪ್ರಗತಿಯನ್ನು ಸಾಧಿಸುತ್ತದೆ ಎಂದು ಐಎಂಎಫ್ ಕೂಡ ಭವಿಷ್ಯ ನುಡಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗೋವಾದಲ್ಲಿ ಆಯೋಜಿಸಲಾದ ‘ಭಾರತ್ ಎನರ್ಜಿ ವೀಕ್ 2024’ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ರಾಜ್ಯಪಾಲ ಪಿ. ಎಸ್. ಶ್ರೀಧರನ್ ಪಿಳ್ಳೆ, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.

ಇದನ್ನೂ ಓದಿ: Speedy Recovery: ಕಿಂಗ್ ಚಾರ್ಲ್ಸ್ ಶೀಘ್ರ ಗುಣಮುಖರಾಗಲಿ… ಪ್ರಧಾನಿ ಮೋದಿ ಹಾರೈಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next