Advertisement

ಪ್ರಧಾನಮಂತ್ರಿ ಆವಾಸ್‌ ಯೋಜನೆ ಅನುದಾನ ಬಿಡುಗಡೆಗೆ ಒತ್ತಾಯ

03:33 PM Feb 26, 2020 | Suhan S |

ಗುತ್ತಲ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿನ ಕೇಂದ್ರ ಸರ್ಕಾರದಿಂದ ಫಲಾನುಭವಿಗಳಿಗೆ ಅನುದಾನ ಜಮೆ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪಟ್ಟಣದ ಹಾವೇರಿ ರಸ್ತೆಯಲ್ಲಿರುವ ಬಿರೇಶ್ವರ ದೇವಸ್ಥಾನ ಹತ್ತಿರದ ಕರವೇ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಲ್ಮಠ, ಎಸ್‌ಆರ್‌ಎಸ್‌ ವೃತ್ತದ ಮೂಲಕ ಪಂಚಾಯಿತಿಗೆ ಆಗಮಿಸಿತು.

ನಂತರ ಪಪಂ ಉತ್ತರ ಭಾಗದಲ್ಲಿನ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ, ಸರ್ಕಾರ ಹೆಚ್ಚುವರಿ ಹಣ ಬಿಡುಗಡೆ ಮಾಡದೆ ಇರುವ ಕಾರಣಕ್ಕೆ ಫಲಾನುಭವಿಗಳಿಗೆ ತೊಂದರೆಯಾಗಿದೆ. ಸಾಲ ಮಾಡಿರುವ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಿದೆ. ಒಟ್ಟಾರೆ ಫಲಾನುಭವಿಗಳ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಆದಷ್ಟು ಬೇಗ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗವುದೆಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಮಾಜಿಕ ಅಭಿವೃದ್ಧಿ ತಜ್ಞ ನಾಗರಾಜ ಗುಳೇದ ಮನವಿ ಸ್ವೀಕರಿಸಿ ಮಾತನಾಡಿ, ಕೆಲವು ಸಮಸ್ಯೆಗಳಿದ್ದು ಹಣ ಜಮೆಗೆ ತೊಂದರೆಯಾಗಿದೆ. ರಾಜೀವ ಗಾಂಧಿ ವಸತಿ ನಿಗಮದಿಂದ ನಮಗೆ ನಿರ್ದೇಶನ ಬಂದಿದ್ದು, ಅದರಂತೆ ಪರಿಶೀಲಿಸಿ ಫಲಾನುಭವಿಗಳಿಗೆ ಶೀಘ್ರ ಹಣ ಜಮೆ ಆಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕರವೇ ಜಿಲ್ಲಾ$ಪ್ರಧಾನ ಕಾರ್ಯದರ್ಶಿ ಯಶವಂತಗೌಡ್ರ ದೊಡ್ಡಗೌಡ್ರ, ಚನ್ನಪ್ಪ ಹೊನ್ನಮ್ಮನವರ, ದಾದಪೀರ್‌ ಖಾಲೇಕಾಲನವರ, ಶೇಖರ ನರಸಣ್ಣನವರ, ಯುವ ಘಟಕದ ಅಧ್ಯಕ್ಷ ಫಕೃದ್ಧೀನ ಅಂಗಡಿಕಾರ,ಪ್ರಧಾನ ಕಾರ್ಯದರ್ಶಿ ಕರಬಸು ಕುರುಬಗೇರಿ, ಗೌಸಪಾಕ ಬಾಲೇಭಾಯಿ, ಶಿವು ಬೆನ್ನೂರ, ರೇಹಾನ ಮುಜಾವರ ಸೇರಿದಂತೆ ಯೋಜನೆ ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next