Advertisement

ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಚಟುವಟಿಕೆ: ಶಿಕ್ಷಕ ಅಮಾನತು

09:03 AM Apr 10, 2019 | Sathish malya |

ಬಲ್ಲಿಯಾ, ಉತ್ತರ ಪ್ರದೇಶ : ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅವರೊಂದಿಗೆ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಅಮಾನತು ಮಾಡಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಮಾನತುಗೊಂಡಿರುವ ಶಿಕ್ಷಕ ಅರವಿಂದ ಕುಮಾರ್‌ ಗೆ ಬೈರಿಯಾ ಪ್ರದೇಶದಲ್ಲಿನ ಚಕಿಯಾ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆತ ಶಾಲೆಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅವರೊಂದಿಗೆ ಅನೈತಿಕ ಚಟುವಟಿಕೆಗೆಗಳಲ್ಲಿ ತೊಡಗಿಕೊಳ್ಳುತ್ತಾನೆ ಎಂದು ಮಕ್ಕಳ ಹೆತ್ತವರು ಮತ್ತು ಗ್ರಾಮಸ್ಥರು ದೂರು ನೀಡಿದ್ದರು ಎಂದು ಪ್ರಾಥಮಿಕ ಶಿಕ್ಷಾ ಅಧಿಕಾರಿ ಸಂತೋಷ್‌ ರಾಯ್‌ ತಿಳಿಸಿದ್ದಾರೆ.

ಶಿಕ್ಷಕನ ಮೇಲಿನ ದೂರುಗಳು ಮೇಲ್ನೋಟಕ್ಕೇ ಸಾಬೀತಾಗಿರುವ ಕಾರಣ ಆತನನ್ನು ತತ್‌ಕ್ಷಣದಿಂದ ಅಮಾನತುಗೊಳಿಸಿರುವುದಾಗಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next