Advertisement
ಸೌಲಭ್ಯಗಳುಸುಮಾರು 4 ಎಕರೆ ವಿಸ್ತೀರ್ಣ ಹೊಂದಿರುವ ಈ ಆರೋಗ್ಯ ಕೇಂದ್ರದಲ್ಲಿ ದೃಷ್ಟಿ ಪರೀಕ್ಷಾ ಕೇಂದ್ರ, ಮಕ್ಕಳ ಚುಚ್ಚು ಮದ್ದು ವಿಭಾಗ, ಸುವ್ಯವಸ್ಥಿತ ಕಟ್ಟಡ ಹೊಂದಿದ್ದು ಉತ್ತಮ ವೈದ್ಯಾಧಿಕಾರಿಗಳು, 13 ಸಿಬಂದಿಗಳು ಲಭ್ಯವಿದ್ದಾರೆ. 15 ಮಂದಿ ಆಶಾ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿ ದ್ದಾರೆ. ಹೊರ ರೋಗಿಗಳ ತಪಾಸಣೆ ವಿಭಾಗದಲ್ಲಿ ಆರು ಬೆಡ್‌ಗಳಿರುವ ಸುವ್ಯವಸ್ಥಿತವಾದ ಕೊಠಡಿ ಇದೆ.
ಮಳೆಗಾಲದ ಆರಂಭದಲ್ಲಿ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿನ ಪ್ರತಿ ಮನೆ ಮನೆಗೆ ಭೇಟಿ ನೀಡಿ ಸೊಳ್ಳೆ, ಕ್ರಿಮಿಕೀಟಗಳಿಂದ ಸಾಂಕ್ರಾಮಿಕ ರೋಗ ಹರಡದಂತೆ ನಿಗಾ ವಹಿಸುವಂತೆ ಅರಿವು ಮೂಡಿಸುವ ಕಾರ್ಯ ನಿರಂತರ ನಡೆಯುತ್ತಿದ್ದಾರೆ. ಬೇಕಿದೆ ಆವರಣಗೋಡೆ
4 ಎಕರೆ ವಿಸ್ತೀರ್ಣದ ಬೆಳೆದು ನಿಂತ ಮರಗಳ ನಡುವೆ ಅತ್ಯಂತ ಪ್ರಶಾಂತವಾದ ವಾತಾವರಣದ ನಡುವೆ ಇರುವ ಆರೋಗ್ಯ ಕೇಂದ್ರ, ವಸತಿ ನಿಲಯಗಳಿದ್ದು ಈ ಪರಿಸರದ ಸುತ್ತಲೂ ಸಮರ್ಪಕ ಅವರಣಗೋಡೆಗಳಿಲ್ಲದೆ ಇರುವ ಪರಿಣಾಮ ರಾತ್ರಿ ವೇಳೆಯಲ್ಲಿ ಅನ್ಯ ಚಟುವಟಿಕೆಗಳಿಗೆ ಕೇಂದ್ರಸ್ಥಾನವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜನಪತ್ರಿನಿಧಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ .
Related Articles
Advertisement
ಖಾಲಿ ಇರುವ ಹುದ್ದೆಗಳು ಫಾರ್ಮಾಸಿಸ್ಟ್ -1, ಹಿರಿಯ ಆರೋಗ್ಯ ಸಹಾಯಕಿ -1, ವಾಹನ ಚಾಲಕ -1, “ಡಿ’ ದರ್ಜೆ -1, ಮಹಿಳಾ ವೈದ್ಯಾಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಕ, ದ್ವಿತೀಯ ದರ್ಜೆ ಸಹಾಯಕ – 1, ಹಿರಿಯ ಆರೋಗ್ಯ ಸಹಾಯಕಿಯರ 3 ಹುದ್ದೆಗಳು ಖಾಲಿ ಇವೆ. ಪ್ರಾಕೃತಿಕ ಹಸಿರು ವನಗಳ ನಡುವಿನ ಪ್ರಾ. ಆ. ಕೇಂದ್ರ ಡಿ.13 1958ರಲ್ಲಿ ಅಂದಿನ ಆರೋಗ್ಯ ಸಚಿವ ಡಾ| ಕೆ.ಕೆ. ಹೆಗ್ಡೆ ಅವರಿಂದ ಸ್ಥಾಪಿತವಾಗಿರುವ ತಾಲೂಕಿನ ಅತ್ಯಂತ ಹಳೆಯದಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಮಕ್ಕಳ ಚುಚ್ಚು ಮದ್ದು ವಿಭಾಗ , ಗರ್ಭಿಣಿಯರಿಗೆ ಮಾಹಿತಿ, ಫಾರ್ಮಾಸಿಸ್ಟ್ ಹಾಗೂ ಕಚೇರಿಯ ಡಾಟಾ ಎಂಟ್ರಿಗಾಗಿ ಕಂಪ್ಯೂಟರ್ ವಿಭಾಗಗನ್ನಾಗಿಕೊಳ್ಳಲಾಗಿದೆ. ಹಳೆಯ ಕಟ್ಟಡದ ( ಮದರ್ ಪಿಎಚ್‌ಸಿ)ಗೋಡೆಯ ಮೇಲಿನ ಬಣ್ಣದ ಚಿತ್ತಾರಗಳು ಹಾಗೂ ಕಟ್ಟಡದ ಮುಂಭಾಗದ ಹೂವಿನ ತೋಟಗಳು ಆಸ್ಪತ್ರೆಯ ಮೆರುಗನ್ನು ಹೆಚ್ಚಿಸಿದೆ. ಅವರಣಗೋಡೆ ನಿರ್ಮಾಣವಾಗಬೇಕಿದೆ
ಈ ಗ್ರಾಮೀಣ ಭಾಗದಿಂದ ದಿನಕ್ಕೆ ಸುಮಾರು 90ಕ್ಕೂ ಅಧಿಕ ಹೊರ ರೋಗಿಗಳು ಆರೋಗ್ಯ ತಪಾಸಣೆಗಾಗಿ ಬರುತ್ತಿದ್ದಾರೆ. ಇಲ್ಲಿನ ಪ್ರಶಾಂತತೆಯ ವಾತಾವರಣವಿದ್ದು ಸ್ಥಳೀಯ ಸಂಘ ಸಂಸ್ಥೆಯ ಹಾಗೂ ಎನೆಸ್ಸೆಸ್ ಸಹಕಾರದಿಂದ ಪರಿಸರವನ್ನು ಸ್ವತ್ಛಗೊಳಿಸಲಾಗಿದೆ. ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಸುಮಾರು 4 ಎಕರೆ ವಿಸ್ತೀರ್ಣದ ಜಾಗಗಳಿದ್ದು ಸಮರ್ಪಕವಾದ ಅವರಣಗೋಡೆ ನಿರ್ಮಾಣವಾಗಬೇಕಿದೆ.
– ಡಾ| ರಾಘವೇಂದ್ರ ಹೆಬ್ಟಾರ್ , ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ಕಲ್‌ಕಟ್ಟೆ. – ಟಿ.ಲೋಕೇಶ್ ಆಚಾರ್ಯ