Advertisement
ಪಟ್ಟಣದ ವಾರ್ಡ್ ನಂ 14 ರ ಖಾಜಾ ಕಾಲೋನಿ ಬಡಾವಣೆಯಲ್ಲಿ 1200 ಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಹಾಗೂ ಬಡ ಕೂಲಿಕಾರ್ಮಿಕ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಬೀದಿ ವ್ಯಾಪಾರ ಹಾಗೂ ಕೂಲಿ ಕೆಲಸವೇ ಇಲ್ಲಿನ ಬಹುತೇಕ ಜನರ ಉದ್ಯೋಗ. ಇಲ್ಲಿ ಕಾಲಿಡಬೇಕಾದರೇ ಮೂಗುಮುಚ್ಚಿಕೊಂಡು ಬರಬೇಕು. ಎಲ್ಲಿ ನೋಡಿದರಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ನಡೆಯಲು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿಯೇ ಅತ್ಯಂತ ತೀರಾ ಹಿಂದುಳಿದ ವಾರ್ಡ್ ಆಗಿದೆ. ಪುರಸಭೆ ವತಿಯಿಂದ ಇಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ವಾರ್ಡ್ ಸದಸ್ಯರಿಗೆ, ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ರಸ್ತೆ, ಚರಂಡಿ, ಮಹಿಳೆಯರ ಶೌಚಾಲಯ ಸಮಸ್ಯೆ ಇಲ್ಲಿನ ಜನರನ್ನು ಕಾಡುತ್ತಿದೆ.
Related Articles
ಕಾಮಗಾರಿ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿರುವುದರಿಂದ ಗಲೀಜು ನೀರು ರಸ್ತೆ ಮೇಲೆ ಹರಿದು ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹತ್ತಾರು ಬಾರಿ ಇಲ್ಲಿನ ಮಹಿಳೆಯರು, ಮಕ್ಕಳು, ಯುವಕರು ಸಮಸ್ಯೆ ಹೊತ್ತು ಪುರಸಭೆಗೆ ಹೋದರೆ ಬರೀ ಭರವಸೆ ಮೂಲಕವೇ ಉತ್ತರ ಲಭಿಸಿದೆ. ಆದರೆ ನಯಾಪೈಸೆ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ. ಕಳೆದ 4 ವರ್ಷಗಳಲ್ಲಿ ಪುರಸಭೆಗೆ ಸಾಕಷ್ಟು ಅನುದಾನ ಬಂದರೂ ಅಗತ್ಯವಿರುವ ಕಡೆ ಕಾಮಗಾರಿ ಮಾಡದೇ ಜನವಸತಿ ಇಲ್ಲದ ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
Advertisement
ಸಂಬಂಧಪಟ್ಟವರು ಕೂಡಲೇ ಚರಂಡಿ, ಸಿಸಿ ರಸ್ತೆ, ಮಹಿಳೆಯರ ಶೌಚಾಲಯ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆವಾಜ್ ಯೂತ್ ವೆಲ್ಫೆಧೀರ್ ಸೊಸೈಟಿಯ ಮಹ್ಮದ್ ಗೌಸ್, ಮಹ್ಮದ್ ರಫೀಕ್ ಜಮಾದಾರ ಆಗ್ರಹಿಸಿದ್ದಾರೆ.
ವಿಜಯಕುಮಾರ ಎಸ್.ಕಲ್ಲಾ