Advertisement

Kerala Godman ಬೆಳಗ್ಗೆ ದೇಗುಲದ ಅರ್ಚಕ, ಮಧ್ಯಾಹ್ನ ಬೈಕ್‌ ರೇಸರ್‌!

12:40 AM Aug 15, 2023 | Team Udayavani |

ಹೊಸದಿಲ್ಲಿ: ಬೇಕಾದಷ್ಟು ಹಣ ನೀಡುವ ಐಟಿ ಉದ್ಯೋಗ ತ್ಯಜಿಸಿ, ಪೌರೋಹಿತ್ಯ ಮಾಡುವುದು, ಅದರ ಜತೆಗೆ ಬೈಕ್‌ ರೇಸಿಂಗ್‌ ನಡೆಸುವುದನ್ನು ನೀವೆಲ್ಲಾದರೂ ಕೇಳಿದ್ದೀರಾ?

Advertisement

ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಜೂರ್‌ ಎಂಬ ಹಳ್ಳಿಯಲ್ಲಿರುವ ವಿ.ಎಲ್‌.ಉನ್ನಿಕೃಷ್ಣನ್‌ ಹೀಗೊಬ್ಬ ಸಾಹಸಿ. 2013ರಲ್ಲಿ ಭಾರೀ ಸಂಬಳದ ಐಟಿ ಉದ್ಯೋಗ ತ್ಯಜಿಸಿ, ಬೈಕ್‌ ರೇಸ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಇದೀಗ ರಾಷ್ಟ್ರೀಯ ಮೋಟಾರ್‌ ಸೈಕಲ್‌ ರೇಸ್‌ ಪರವಾನಿಗೆ ಪಡೆದಿದ್ದಾರೆ. ಕೊಯಮತ್ತೂರಿನಲ್ಲಿ ನಡೆ ದ ರಾಷ್ಟ್ರೀಯ ಡರ್ಟ್‌ ಟ್ರ್ಯಾಕ್‌ ರೇಸ್‌ನಲ್ಲಿ ಯಶಸ್ವಿ ಸ್ಪರ್ಧೆ ಮಾಡಿದ್ದಾರೆ.

ಬೆಳಗ್ಗೆ 5.30ಕ್ಕೆ ಎದ್ದು ಮಂಜೂರ್‌ ಹಳ್ಳಿಯ ಪುಧಕ್ಕುಲಮರ ದೇವಿ ದೇವಸ್ಥಾನದ ಬಾಗಿಲು ತೆಗೆದು, 9.30ರ ವರೆಗೆ ಪೂಜೆ ನಡೆಸುತ್ತಾರೆ. ಅನಂತರ ದಿಢೀರ್‌ ಬೈಕರ್‌ ವೇಷಕ್ಕೆ ಬದಲಾಯಿಸಿಕೊಂಡು, ತರಬೇತಿಗೆ ಹೊರಡುತ್ತಾರೆ. ಆರಂಭದಲ್ಲಿ ಇವನ್ನೆಲ್ಲ ನೋಡಿ ಹಳ್ಳಿಗರು ಅಚ್ಚರಿಪಟ್ಟರೂ, ಅನಂತರ ಅದನ್ನು ಒಪ್ಪಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next