Advertisement

ಲಕ್ನೋ: ಮಗುವಿನ ಮೈಗೆ ಕುದಿವ ಹಾಲಿನ ನೊರೆ ಲೇಪಿಸಿದ ಅರ್ಚಕ…

08:58 PM Jun 28, 2023 | Team Udayavani |

ಲಕ್ನೋ: ಉತ್ತರಪ್ರದೇಶದ ಬಲ್ಲಿಯಾದಲ್ಲಿ ಅರ್ಚಕರೊಬ್ಬರು ಹಸುಗೂಸಿನ ಮೈಗೆ ಕುದಿಯುವ ಹಾಲಿನ ನೊರೆಯನ್ನು ಲೇಪಿಸಿದ್ದು, ಮೈ ಜುಂ ಎನ್ನಿಸುವ ಈ ಧಾರ್ಮಿಕ ಆಚರಣೆಯ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಶ್ರವಣಪುರ ಗ್ರಾಮದಲ್ಲಿ ವಾರಣಾಸಿಯ ಅರ್ಚಕರೊಬ್ಬರು ಈ ಧಾರ್ಮಿಕ ವಿಧಿ ಅನುಸರಿಸಿದ್ದು, ಇದು ಯಾದವ ಸಮುದಾಯದಲ್ಲಿ ಆಚರಿಸುವ ಸರ್ವೇಸಾಮಾನ್ಯ ಆಚರಣೆ ಎನ್ನಲಾಗಿದೆ. ಆದರೆ, ನೂರಾರು ಭಕ್ತರು ಕೂತಿರುವಲ್ಲಿ, ಮಗುವನ್ನು ಮಲಗಿಸಿ, ಅದರ ಮೈ ಮತ್ತು ಹೊಟ್ಟೆಗೆ ಕುದಿವ ಹಾಲಿನ ನೊರೆ ಲೇಪಿಸಿದ್ದು ಮಾತ್ರ ನೆಟ್ಟಿಗರ ಕರುಳು ಹಿಂಡಿದೆ.

ಅಲ್ಲದೇ ಮಗು ಅಳುತ್ತಲೇ ಇರುವುದನ್ನು ವಿಡಿಯೊದಲ್ಲಿ ಗಮನಿಸಬಹುದಾಗಿದ್ದು, ಆಚರಣೆ ತಿಳಿದವರಿಂದ ಸಾಮಾನ್ಯ ಪ್ರತಿಕ್ರಿಯೆ ಬಂದಿದ್ದರೆ ಮತ್ತೂ ಕೆಲವರು ಆಚರಣೆಯನ್ನು ಟೀಕಿಸಿದ್ದಾರೆ.

A hindu ritual of pouring boiling hot milk on child. It was there in youtube shorts and people were supporting the ritual in comments . Can someone tell the logic behind it?
by u/Pale_Rest2423 in atheismindia

Advertisement
Advertisement

Udayavani is now on Telegram. Click here to join our channel and stay updated with the latest news.

Next