Advertisement

ವಿಭಿನ್ನ ಮಾರ್ಗ ಮೂಲಕ “ಫ್ರೈಡ್‌ ಪರೇಡ್‌’ಆಚರಣೆ

03:01 PM Jun 30, 2020 | sudhir |

ಸಾವೋ ಪಾಲೋ: ವಿಶ್ವದಾದ್ಯಂತ ಕೋವಿಡ್‌-19ರಿಂದಾಗಿ ಅಂತಾರಾಷ್ಟ್ರೀಯ ರಾಷ್ಟ್ರೀಯ ಸಮಾವೇಶಗಳು, ಸಮಾರಂಭಗಳು ಕ್ರೀಡಾಕೂಟಗಳು ರದ್ದಾಗಿವೆ. ಇದೀಗ ಲೈಂಗಿಕ ಅಲ್ಪಸಂಖ್ಯಾಕ ಸಮುದಾಯದ ಉಪಸ್ಥಿತಿ ಪ್ರತಿನಿಧಿಸುವ ಬ್ರಝಿಲ್‌ನ ವಿಶ್ವ ಪ್ರಸಿದ್ಧ “ಫ್ರೈಡ್‌ ಪರೇಡ್‌’ ಕಾರ್ಯಕ್ರಮ ಆಯೋಜನೆಯೂ ಸ್ಥಗಿತಗೊಂಡಿದ್ದು, ವಿಭಿನ್ನವಾಗಿ ಸಾಂಕೇ ತಿಕ ಆಚರಣೆ ಮಾಡಲಾಗಿದೆ.

Advertisement

ಹೌದು ಈ ಬಾರಿ ಕೋವಿಡ್‌-19 ಹಿನ್ನೆಲೆ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ “ಫ್ರೈಡ್‌ ಪರೇಡ್‌’ ರದ್ದುಗೊಳಿಸಿದ್ದು, ನಗರದಲ್ಲಿ ಲೇಸರ್‌ ಲೈಟ್‌ಗಳನ್ನು ಪ್ರದರ್ಶಿಸುವ ಮೂಲಕ ಸಾಂಕೇಂತಿಕ ಆಚರಣೆ ಮಾಡಲಾಗಿದೆ.

ಇನ್ನು ಪೋರ್ಟೊರಿಕನ್‌ ಕಲಾವಿದ ಯೆವೆಟ್‌ ಮ್ಯಾಟರ್ನ್ ತನ್ನ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾಕರ ಉಪಸ್ಥಿತಿ ಎತ್ತಿ ಹಿಡಿಯುವ ಸಲುವಾಗಿ ಕಾಮನ ಬಿಲ್ಲು ಹಾಗೂ ರಾಷ್ಟ್ರ ಧ್ವಜದ ಬಣ್ಣದ ಲೇಸರ್‌ ಲೈಟ್‌ ಪ್ರದರ್ಶನ ಮಾಡಿದ್ದು, ಪ್ರತಿ ವರ್ಷ “ಫ್ರೈಡ್‌ ಪರೇಡ್‌’ ವೀಕ್ಷಿಸಲು ಬೀದಿಗಳಲ್ಲಿ ಲಕ್ಷಾಂತರ ಜನರು ಜಮಾಯಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್‌ಹಿನ್ನಲೆಯಲ್ಲಿ ಸಾರ್ವಜನಿಕ ಕೂಟಗಳ ಆಯೋಜನೆ ಮೇಲೆ ನಿಷೇಧ ಹೇರಲಾಗಿತ್ತು.

ವಿಶ್ವದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಅತಿ ಹೆಚ್ಚು ಕಿರುಕುಳಕ್ಕೊಳಗಾದ ದೇಶಗಳ ಪೈಕಿ ಬ್ರಝಿಲ್‌ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next