Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿಗಳು ಶಾಸಕರು, ರೈತ ಮುಖಂಡರು, ವರ್ತಕರ ಸಭೆ ಕರೆದು ಬಿತ್ತನೆ ಆಲೂಗಡ್ಡೆ ದರ ನಿಗದಿ ಹಾಗೂ ಮಾರಾಟ ವ್ಯವಸ್ಥೆ ಮಾಡುತ್ತಿದ್ದರು ಆದರೆ ಜಿಲ್ಲಾಧಿಕಾರಿ ಗಿರೀಶ್ ಅವರು ಆಲೂಗಡ್ಡೆ ವರ್ತಕರ ಸಭೆ ನಡೆಸಿ ಆಲೂಗಡ್ಡೆ ಮಾರಾಟದ ಬಗ್ಗೆ ನಿರ್ಧಾರ ಮಾಡಿದ್ದಾರೆ. ಆಲೂಗಡ್ಡೆಯನ್ನು ರೈತರು ಬಿತ್ತನೆ ಮಾಡಿದ ನಂತರ ಹಾನಿಯಾದರೆ ಅದಕ್ಕೆ ಹೊಣೆ ಯಾರು ? ಬಿತ್ತನೆ ಆಲೂಗಡ್ಡೆ ದರ ನಿಗದಿ ಮಾಡದಿದ್ದರೆ ವರ್ತಕರು ಮನಬಂದ ದರ ನಿಗದಿ ಪಡಿಸಿ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಈಗ ಆಲೂಗಡ್ಡೆ ದರ ಕೇಜಿಗೆ 15 ರೂ. ಇದೆ. ಇದರ ಆಧಾರದ ಮೇಲೆ ದರ ನಿಗದಿಪಡಿಸಬೇಕು ಎಂದರು.
ದನ್ನು ಕಡ್ಡಾಯ ಮಾಡಬೇಕು. ರಶೀದಿಯಲ್ಲಿ ಬಿತ್ತನೆ ಆಲೂಗಡ್ಡೆ ಎಂಬುದನ್ನು ನಮೂದು ಮಾಡಬೇಕು. ಬಿತ್ತನೆ ಬೀಜದ ಜೊತೆಗೆ ಆಲೂಗಡ್ಡೆ ಬೆಳೆಗಾರರಿಗೆ ತಾಂತ್ರಿಕ ಮಾಹಿತಿ, ಔಷಧ, ರಸಗೊಬ್ಬರ ಒಂದೇ ಕಡೆ ಆಲೂಗಡ್ಡೆ ಮಾರುಕಟ್ಟೆಯಲ್ಲಿಯಲ್ಲಿಯೇ ಸಿಗುವ ವ್ಯವಸ್ಥೆ ಆಗಬೇಕು. ಈ ಎಲ್ಲ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ ಶಾಸಕರ ಸಭೆ ಕರೆಯಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಜನಪ್ರತಿನಿಧಿಗಳನ್ನು ಕಡೆಗಣಿಸದಿರಿ: ಜನ ಪ್ರತಿನಿಧಿಗಳನ್ನು ಕಡೆಗಣಿಸಿ ಬಿತ್ತನೆ ಆಲೂಗಡ್ಡೆ ಮಾರಾಟದ ನಿರ್ಧಾರ ಮಾಡಿರುವ ಜಿಲ್ಲಾಡಳಿತವು ಮುಂದೆ ಅನಾಹುತವಾದರೆ
ಜಿಲ್ಲಾಧಿಕಾರಿ, ಎಸ್ಪಿ, ಎಪಿಎಂಸಿ ಕಾರ್ಯದರ್ಶಿಯವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ರೈತರ ಪರವಾಗಿರಬೇಕು. ವರ್ತಕರು, ಪುಡಾರಿಗಳ ಮಾತುಕೇಳಿ ನಿರ್ಧಾರ ತೆಗೆದುಕೊಳ್ಳಬಾರದು. ಆಲೂಗಡ್ಡೆ ಮಾರಾಟದ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಯವರು ನಡೆಸಿದ ಸಭೆಯ ನಡವಳಿಕೆ ಗಳು ಹಾಗೂ ಶಾಸಕರ ಸಲಹೆ ಸೂಚನೆ ಗಳಿಗೆ ಮನ್ನಣೆ ನೀಡಿ ಕ್ರಮ ಕೈಗೊಳ್ಳಬೇಕು ಎಂದರು.
Related Articles
ಕೋವಿಡ್ ನಿಯಂತ್ರಣ ಕ್ರಮಗಳಿಗೆ ಹಾಸನ ಜಿಲ್ಲೆಗೆ 2.10 ಕೋಟಿ ರೂ. ಬಿಡುಗಡೆಯಾಗಿದೆ. ಆ ಮೊತ್ತವನ್ನು ಏನಾಗಿದೆ ಎಂಬುದೂ ಗೊತ್ತಿಲ್ಲ. ಬಹುಶಃ ಜಿಲ್ಲಾ ಖಜಾನೆಯಲ್ಲಿಯೇ ಆ ಮೊತ್ತ ಭದ್ರವಾಗಿರಬಹುದು ಎಂದು ವ್ಯಂಗ್ಯ ವಾಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಿದ್ದನ್ನು ಬಿಟ್ಟರೆ ಜಿಲ್ಲಾಡಳಿತ ದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಸರ್ಕಾರವೂ ಕೇವಲ ಓಟ್‌ಬ್ಯಾಂಕ್ ರಾಜಕಾರಣ ಮಾಡಬಾರದು. ಬಿಜೆಪಿಯವರಿಗೆ ಮಾತ್ರ ನೆರವಾಗುವಂತೆ ನಡೆದುಕೊಳ್ಳದೇ ಪಕ್ಷಾತೀತ ವಾಗಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕು ಎಂದರು.
Advertisement