Advertisement

ಬಿಜೆಪಿಯಿಂದ ಬೆಲೆ ಏರಿಕೆ-ನಿರುದ್ಯೋಗ ಸೃಷ್ಟಿ

04:05 PM Aug 29, 2022 | Shwetha M |

ಬಸವನಬಾಗೇವಾಡಿ: ಬಿಜೆಪಿ ಪಕ್ಷ ದೇಶದ ಚುಕ್ಕಾಣಿ ಹಿಡಿದ 2 ದಶಕದಲ್ಲಿ ದೇಶದಲ್ಲಿ ಆಹಾರ ಧಾನ್ಯದ ಬೆಲೆ ಏರಿಕೆ, ನಿರುದ್ಯೋಗ ತಾಂಡವಾಡುತ್ತಿದೆ. ಬಿಜೆಪಿ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಮನಗೂಳಿ ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಭಾರತ ಜೋಡೋ ಪಾದಯಾತ್ರೆಗೆ ಚಾಲನೆ ನೀಡಿ ನಂತರ ಸೋಮೇಶ್ವರ ಭಜನಾ ಮಂಡಳಿ ಮಂಟಪದಲ್ಲಿ ರವಿವಾರ ಏರ್ಪಡಿಸಿದ್ದ ಸಾರ್ವಜನಿಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದವರು.

ಕಾಂಗ್ರೆಸ್‌ ದೇಶದಲ್ಲಿ 6 ದಶಕಗಳ ಕಾಲ ಆಡಳಿತ ನಡೆಸಿ ದೇಶದ ಜನತೆ, ರೈತರು, ಯುವಕರಿಗೆ ಉದ್ಯೋಗ ಸೇರಿದಂತೆ ಅನೇಕ ಅಭಿವೃದ್ಧಿಪರ ಕಾರ್ಯ ಮಾಡುತ್ತ ದೇಶ ಮುನ್ನಡೆಸಿಕೊಂಡು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೇಶದ ಜನತೆಗೆ ನೀಡಿದ ಭರವಸೆ ಈಡೇರಿಸಿಲ್ಲ. ಆಹಾರ ಧಾನ್ಯ ಸೇರಿದಂತೆ ಪೆಟ್ರೋಲ್‌-ಡೀಸೆಲ್‌, ಗ್ಯಾಸ್‌, ನಿರುದ್ಯೋಗ ಹೆಚ್ಚಳವಾಗಿದೆ. ಅಲ್ಲದೇ ಅನೇಕ ಜನ ವಿರೋ  ಕಾಯ್ದೆಗಳ ತಿದ್ದುಪಡಿ ತರುವ ಕೆಲಸ ಮಾಡಿದೆಯೇ ಹೊರತು ದೇಶದ ಜನತೆಯ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 150 ಲಕ್ಷ ಕೋಟಿಗೂ ಹೆಚ್ಚು ಸಾಲವಾಗಿದೆ ಎಂದರು.

ನಾನು ಬಸವನಬಾಗೇವಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಆದರೆ ಕೆಲವರು ತಮ್ಮ ಕಾಲದಲ್ಲಿ ಅಭಿವೃದ್ಧಿ ಮಾಡದೇ ಕಾಲಹರಣ ಮಾಡಿದ್ದಾರೆ. ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ನಾಮಫಲಕದಲ್ಲಿ ತಮ್ಮ ಹೆಸರು ಹಾಕಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪ್ರೊ| ರಾಜು ಆಲಗೂರ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಪಕ್ಷ 1885ರಿಂದ 1947ರವರೆಗೆ ಪಾದಯಾತ್ರೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು, ಉಪ್ಪಿನ ಸತ್ಯಾಗ್ರಹ ಹೀಗೆ ಹಲವಾರು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ ಎಂದರು. ಪ್ರಥಮ ಪ್ರಧಾನಿ ಜವಾಹರಲಾಲ ನೆಹರು ದೇಶದಲ್ಲಿ ಅನೇಕ ಅಣೆಕಟ್ಟು, ರೈಲ್ವೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ರೈಲ್ವೆ, ದೂರಸಂಪರ್ಕ, ವಿಮಾನ ಸೇರಿದಂತೆ ಅನೇಕ ದೇಶದ ಸಂಪತ್ತನ್ನು ಬಂಡವಾಳ ಶಾಹಿಗಳ ಕೈಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಮಹಿಳಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಪಂ ಮಾಜಿ ಅಧ್ಯಕ್ಷರಾದ ಚಂದ್ರಶೇಖರಗೌಡ ಪಾಟೀಲ, ಅಪ್ಸರಾ ಬೇಗಂ ಚಪ್ಪರಬಂದ, ರಫೀಕ್‌ ಟಪಾಲ, ಅಣ್ಣಾಸಾಹೇಬಗೌಡ ಪಾಟೀಲ, ರಮೇಶ ಸೂಳಿಬಾವಿ, ಸಂಗಮೇಶ ಓಲೇಕಾರ, ಜಗದೇವಿ ಗುಂಡಳ್ಳಿ, ರಾಜೇಶ್ವರಿ ಯರನಾಳ, ರುಕ್ಮಿಣಿ ರಾಠೊಡ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next