Advertisement

Tata; ಹ್ಯಾರಿಯರ್‌, ನೆಕ್ಸಾನ್‌ ಸೇರಿ ಟಾಟಾ ಕಾರುಗಳ ಬೆಲೆ ಇಳಿಕೆ

11:38 PM Jul 09, 2024 | |

ಹೊಸದಿಲ್ಲಿ: ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್‌ (ಎಸ್‌ಯುವಿ) ಮಾರಾಟ 20 ಲಕ್ಷದ ಮೈಲುಗಲ್ಲು ತಲುಪಿದ ಸಂಭ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್‌, ತನ್ನ ಪ್ರಮುಖ ಕಾರುಗಳ ಬೆಲೆ ತಗ್ಗಿಸಿದೆ.

Advertisement

ಸಫಾರಿ, ಹ್ಯಾರಿಯರ್‌, ನೆಕ್ಸಾನ್‌, ಪಂಚ್‌, ಸಿಯೆರಾ ವಾಹನಗಳ ಬೆಲೆಯನ್ನು ತಗ್ಗಿಸುವುದಾಗಿ ಕಂಪೆನಿ ಘೋಷಿಸಿದೆ. ಜು.31ರ ವರೆಗಿನ ಬುಕಿಂಗ್‌ಗಳಿಗೆ ಮಾತ್ರ ಈ ಆಫ‌ರ್‌ ಲಭ್ಯವಾಗಲಿದೆ.

ಹ್ಯಾರಿಯರ್‌(14.99 ಲಕ್ಷ ರೂ.), ಸಫಾರಿ(15.49 ಲಕ್ಷ ರೂ.) ಆರಂಭಿಕ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಇದರಿಂದ ಗ್ರಾಹಕರಿಗೆ ಕ್ರಮವಾಗಿ 50 ಸಾವಿರ ಮತ್ತು 70 ಸಾವಿರ ರೂ. ಲಾಭವಾಗಲಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next