ಮೈಸೂರು: ಆಯುಧ ಪೂಜೆ ಮತ್ತು ವಿಜಯ ದಶಮಿ ಹಿನ್ನೆಲೆ ಅಗತ್ಯವಸ್ತುಗಳ ಬೆಲೆ ಏರಿಕೆ ನಡುವೆಯೂ ವ್ಯಾಪರ, ವಹಿವಾಟು ಭರ್ಜರಿಯಾಗಿ ನಡೆಯಿತು. ಬುಧವಾರ ನಗರದ ಪ್ರಮುಖ ಮಾರುಕಟ್ಟೆ ಕೇಂದ್ರಗಳು, ವೃತ್ತ ಮತ್ತು ರಸ್ತೆ ಬದಿಗಳಲ್ಲಿ ಹೂ, ಹಣ್ಣು, ಬೂದುಗುಂಬಳ, ಬಾಳೆ ಕಂದಿನ ವ್ಯಾಪಾರ ಕಳೆಗಟ್ಟಿತ್ತು.
ಹೂವಿನ ಬೆಲೆ ದುಪ್ಪಟ್ಟು: ಎರಡು ಮೂರು ದಿನದ ಹಿಂದೆ 20-30 ರೂ. ದೊರೆಯುತ್ತಿದ್ದ ಒಂದು ಮಾರು ಸೇವಂತಿಗೆ ಹೂ ಬುಧವಾರ 60-100 ರೂ. ಗೆ ಮಾರಾಟವಾಯಿತು. ಹೂವಿನ ಗುಣಮಟ್ಟ, ಬಣ್ಣ ಮತ್ತು ಆಕಾರದ ಮೇಲೆ ಬೆಲೆ ನಿಗದಿ ಮಾಡಿ ಮಾರಾಟ ಮಾಡಿದ ದೃಶ್ಯ ಕಂಡುಬಂದಿತು. ಒಂದು ಮೀಟರ್ ಮಲ್ಲಿಗೆ 80 ರೂ., ಕನಕಂಬಾರ 100 ರೂ. ಗೆ ಬಿಕರಿಯಾಯಿತು. ಇವು ಸೇರಿದಂತೆ ಗುಲಾಬಿ ಮತ್ತಿತರರ ಹೂವು ಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ 10-20 ರೂ. ಏರಿಕೆ ಯಾಗಿದ್ದವು.
ಇದನ್ನೂ ಓದಿ;- ಅನ್ನದಾತನಿಗೆ ಸರ್ಕಾರಗಳಿಂದ ಚೂರಿ: ಸಿದ್ದು
ಬಾಳೆ ಹಣ್ಣಿಗೂ ಕೂಡ ಪ್ರತಿ ಕೆಜಿಗೆ 10-15 ರೂ. ವರೆಗೆ ಏರಿಕೆಯಾ ಗಿದ್ದು, ಹಣ್ಣಿನ ಗುಣಮಟ್ಟದ ಮೇಲೆ 55-60 ರೂ. ವರೆಗೆ ಹಣ್ಣು ಮಾರಾಟವಾ ಯಿತು. ಇನ್ನೂ 20-30 ರೂ. ದೊರೆಯು ತ್ತಿದ್ದ ಟೊಮೆಟೋ ಮತ್ತು ಈರುಳ್ಳಿ ಸಹ ಡಬಲ್ ಆಗಿದೆ. 50-60 ರೂಪಾಯಿಗೆ ಮಾರಾಟವಾದ ದೃಶ್ಯ ಕಂಡುಬಂದಿತು. ಬೂದುಗುಂಬಳ ಪ್ರತಿ ಕೆಜಿಗೆ 15-20 ರೂ. ಬೆಲೆಗೆ ಮಾರಾಟವಾಯಿತು. ಇನ್ನೂ ನಿಂಬೆ ಹಣ್ಣು 10 ರೂ.ಗೆ ಮೂರರಂತೆ ಮಾರಾಟ ವಾದವು.
ವಿಭೂತಿ, ಅರಿಶಿಣ- ಕುಂಕುಮ, ಧೂಪ ಸೇರಿದಂತೆ ಪೂಜಾ ಸಾಮಗ್ರಿಗಳು ಸಹ ತುಟ್ಟಿಯಾಗಿದ್ದವು. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಸಿಹಿ ತಿನಿಸು ಮಾರಾಟ ಮಳಿಗೆಗಳಲ್ಲಿ ಜನಜಂಗುಳಿ ಕಂಡು ಬಂದಿತ್ತು. ಸ್ವೀಟ್ ಮಳಿಗೆಗಳಲ್ಲೂ ಭರ್ಜರಿ ವ್ಯಾಪಾರ, ವಹಿವಾಟು ನಡೆಯಿತು.