Advertisement

ಬೆಲೆ ಕುಸಿತ: ಹೊಲದಲ್ಲಿ ಕೊಳೆಯುತ್ತಿದೆ ಕಲ್ಲಂಗಡಿ

05:02 PM Mar 20, 2020 | Suhan S |

ಮುಂಡರಗಿ: ತಾಲೂಕಿನ ಹೆಸರೂರು ಗ್ರಾಮದ ವ್ಯಾಪ್ತಿಯ ಯುವ ರೈತ ವಿಶ್ವನಾಥ ಗಡ್ಡದ ಮೂರು ಎಕರೆಯಲ್ಲಿ ಬೆಳೆದ ಕಲ್ಲಂಗಡಿಗೆ ಬೆಳೆಯಿಲ್ಲದೆ ಇರುವುದರಿಂದ ಆತಂಕಗೊಂಡಿದ್ದಾರೆ.

Advertisement

ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತ ವಿಶ್ವನಾಥರಿಗೆ ಬೆಲೆ ಕುಸಿತದಿಂದ ಹಾಕಿದ ಬಂಡವಾಳವು ಬಾರದಂತೆ ಆಗಿರುವುದು ಚಿಂತೆಗೀಡು ಮಾಡಿದೆ. ಬೆಲೆ ಕುಸಿತದಿಂದ ಕವಡೆ ಕಲ್ಲಂಗಡಿ ಹಣ್ಣು ಹೊಲದಲ್ಲೇ ಕೊಳೆತು ನಾರುವಂತಾಗಿದೆ. ಯುವ ರೈತ ವಿಶ್ವನಾಥ ಅವರು ಮೂರುವರೇ ಎಕರೆ ಪ್ರದೇಶದಲ್ಲಿ 75 ಸಾವಿರ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಕಲ್ಲಂಗಡಿ ಹಣ್ಣುಗಳು ಅವರತ್ತು ದಿನಗಳ ಬೆಳೆ ಆಗಿದ್ದು, ಬೆಲೆಯ ಕುಸಿತದಿಂದಾಗಿ ಕಲ್ಲಂಗಡಿಗೆ ವ್ಯಾಪಾರಸ್ಥರು ಕವಡೆ ಕಾಸಿನ ಕಿಮ್ಮತ್ತಿಗೆ ನೀಡುತ್ತಿಲ್ಲ. ಇದರಿಂದ ಕಲ್ಲಂಗಡಿ ಹೊಲದಲ್ಲಿಯೇ ಉಳಿಯುವಂತೆ ಆಗಿದೆ. ಜತೆಗೆ ಕೊರೊನಾ ಭೀತಿಯಿಂದಲೂ ಕಲ್ಲಂಗಡಿ ಹಣ್ಣುಗಳ ವ್ಯಾಪಾರವು ಮಾರುಕಟ್ಟೆಯಲ್ಲಿ ಕುಸಿತಗೊಂಡಿದೆ. ಈ ಎಲ್ಲ ಕಾರಣಗಳಿಂದಲೂ ಕಲ್ಲಂಗಡಿ ಹಣ್ಣುಗಳ ಬೆಲೆಯು ಕುಸಿತ ಉಂಟಾಗಿ ರೈತನಿಗೆ ನಷ್ಟದ ಬಾಬತ್ತು ಆಗಿ ಪರಿಣಮಿಸಿದೆ.

ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಂದ ಖರ್ಚು ಮಾಡಿದ 75 ಸಾವಿರ ರೂ. ತೆಗೆದರೂ, ಏನಿಲ್ಲವೆಂದರೂ ರೈತನಿಗೆ ಮೂರು ಎಕರೆ ಕಲ್ಲಂಗಡಿಗೆ ಉತ್ತಮವಾದ ಬೆಲೆಯು ಮಾರುಕಟ್ಟೆಯಲ್ಲಿ ಬಂದಿದ್ದರೇ, ಮೂರು ಲಕ್ಷ ರೂ. ಲಾಭವು ಬರಬೇಕಾಗಿತ್ತು. ಕೊರೊನಾದಿಂದ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ಬೆಲೆಯಿಲ್ಲದಂತಾಗಿ, ರೈತನಿಗೆ ಸಂಕಷ್ಟ ತಂದೊಡ್ಡಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ಬೇಸಿಗೆ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ಉತ್ತಮ ಬೇಡಿಕೆ ಮತ್ತು ಬೆಲೆಯು ಇರುವುದರಿಂದ ಉತ್ತಮ ಬೆಲೆಯ ನಿರೀಕ್ಷೆಯು ಹುಸಿಯಾಗಿ ರೈತನು ಕಂಗಾಲು ಆಗಿದ್ದಾನೆ.

ಕೋವಿಡ್ 19ದಿಂದ ಮಾರುಕಟ್ಟೆಯಲ್ಲಿ ಕಲ್ಲಂಗಡಿಗೆ ಬೆಲೆ ಇಲ್ಲದಂತಾಗಿದೆ. ಇದರಿಂದ ಕಲ್ಲಂಗಡಿ ಹಣ್ಣುಗಳಿಗೆ ಕನಿಷ್ಟ ಬೆಲೆಯು ಸಿಗುತ್ತಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದು, ಲಕ್ಷಾಂತರ ರೂ. ಲಾಭದ ನಿರೀಕ್ಷೆಯಲ್ಲಿದ್ದೇ, ಆದರೆ ಹಾಕಿದ ಬಂಡವಾಳವು ಸಿಗದಂತಾಗಿದೆ. ಜತೆಗೆ ಹೊಲದಲ್ಲಿಯೇ ಕಲ್ಲಂಗಡಿಯು ಕೊಳೆಯುಂತಾಗಿದೆ.-ವಿಶ್ವನಾಥ ಗಡ್ಡದ, ಕಲ್ಲಂಗಡಿ ಬೆಳೆಗಾರರು.

 

Advertisement

-ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next