Advertisement

ಖಾದ್ಯ ತೈಲಗಳ ಬೆಲೆ ಇಳಿಕೆ ಸಾಧ್ಯತೆ

01:38 AM Jan 18, 2021 | Team Udayavani |

ಕಳೆದ ಕೆಲವು ತಿಂಗಳುಗ ಳಿಂದ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಖಾದ್ಯ ತೈಲಗಳ ಬೆಲೆಗಳು ಶೀಘ್ರ ದÇÉೇ ಇಳಿಕೆಯಾಗುವ ಸಾಧ್ಯತೆ ಗಳಿವೆ. ಕಳೆದ ಕೆಲವು ತಿಂಗಳು ಗಳಲ್ಲಿ ಬೇಡಿಕೆ ಹೆಚ್ಚಾಗಿ ದ್ದರಿಂದ ಸಹಜವಾಗಿ ತೈಲ ಬೆಲೆ ಏರುಗತಿಯಲ್ಲಿಯೇ ಸಾಗಿತ್ತು. ಸದ್ಯ ತಾಳೆ ಮತ್ತು ಸೋಯಾ ಬೀನ್‌ ಎಣ್ಣೆಯ ಬೆಲೆ ಕುಸಿಯುವ ನಿರೀಕ್ಷೆಯಿದೆ. ಆದರೆ ಚಿಲ್ಲರೆ ವ್ಯಾಪಾರದಲ್ಲಿ ಈ ಬೆಲೆ ಇಳಿಕೆಯ ಪರಿಣಾಮ ಗೋಚರಿಸಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂಬುದು ತೈಲ ವ್ಯಾಪಾರಿಗಳ ಅಭಿಪ್ರಾಯ.

Advertisement

ದುಬಾರಿಯಾಗಿದ್ದ  ಬೆಲೆ :

ತಾಳೆ ಎಣ್ಣೆ, ನೆಲಗಡಲೆ, ಸಾಸಿವೆ, ಸೋಯಾಬೀನ್‌ ವರೆಗಿನ ಎಲ್ಲ ಖಾದ್ಯ ತೈಲಗಳ ಬೆಲೆಗಳು ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿವೆ. ಡಿಸೆಂಬರ್‌ ತಿಂಗಳಲ್ಲಿ ಅವುಗಳ ಬೆಲೆಗಳು ಶೇ. 20ರಷ್ಟು ಹೆಚ್ಚಾಗಿದ್ದವು. ಆದರೆ ಈ ವರ್ಷ ಇವೆಲ್ಲವುಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ತಾಳೆ ಎಣ್ಣೆ ಅಗ್ಗ! :

ಸದ್ಯ ಖಾದ್ಯ ತೈಲಗಳಲ್ಲಿ ತಾಳೆ ಎಣ್ಣೆ ಅಗ್ಗವಾಗಿದೆ. ಇಷ್ಟು ಮಾತ್ರವಲ್ಲದೇ ಇತರ ತೈಲಗಳಿಗಿಂತ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಜಾಗತಿಕ ತಾಳೆ ಎಣ್ಣೆ ಉತ್ಪಾದನೆಯಲ್ಲಿ ಶೇ. 85ರಷ್ಟು ಪಾಲು ಇಂಡೋನೇಷ್ಯಾ ಮತ್ತು ಮಲೇಷ್ಯಾದ್ದಾಗಿದೆ. ಕಳೆದ ವರ್ಷ ಮೇ ಅನಂತರ ಪಾಮ್‌ ಆಯಿಲ್‌ ಬೆಲೆ ಏರಿಕೆಯಾಗ ತೊಡಗಿತು. ಸೂರ್ಯಕಾಂತಿ, ಸಾಸಿವೆ, ನೆಲಗಡಲೆ ಸಹಿತ ಎಲ್ಲ ಖಾದ್ಯ ತೈಲಗಳ ಬೆಲೆ ಇದರ ಜತೆಗೆ ಏರಿಕೆಯಾಗಿದ್ದವು.

Advertisement

ಶೇ. 3ರಷ್ಟು ಕಡಿಮೆ? :

ತಾಳೆ ಎಣ್ಣೆ ದರ ಮತ್ತೆ ಯಥಾಸ್ಥಿತಿಗೆ ಬರುವ ಸೂಚನೆ ಇದೆ. ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ 10 ಕಿಲೋ ಗ್ರಾಂಗೆ ಶೇ. 2.84ರಷ್ಟು ಇಳಿದು 950 ರೂ.ನಲ್ಲಿದೆ.

ಹಕ್ಕಿಜ್ವರ ಕಾಟ? :

ಈ ವರ್ಷ ದೇಶದಲ್ಲಿ ದಾಖಲೆ ಪ್ರಮಾಣ ದಲ್ಲಿ ಸೋಯಾಬೀನ್‌ ಉತ್ಪಾದನೆಯಾಗಿದೆ.  ಕೋಳಿ ಸಾಕಣೆ ಉದ್ಯಮದಲ್ಲಿ ಸೋಯಾಬೀನ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಹಠಾತ್‌ ಆಗಿ ವಕ್ಕರಿಸಿರುವ ಹಕ್ಕಿ ಜ್ವರದಿಂದಾಗಿ ಈ ವರ್ಷ ಕೋಳಿ ಮಾಂಸದ ಬೇಡಿಕೆ ಕಡಿಮೆಯಾಗಿದೆ. ಇದು ಸೋಯಾಬೀನ್‌ ಬೆಲೆ  ಕಡಿಮೆಯಾಗಲು ಕಾರಣ ವಾಗುತ್ತಿದೆ. ದೇಶದ ಅತೀ ದೊಡ್ಡ ಸೋಯಾಬೀನ್‌ ಮಾರುಕಟ್ಟೆ ಯಾದ ಇಂದೋರ್‌ನಲ್ಲಿ ಕಳೆದ 14 ದಿನಗಳಲ್ಲಿ ಸೋಯಾಬೀನ್‌ ಬೆಲೆ ಶೇ. 15ರಷ್ಟು ಕಡಿಮೆಯಾಗಿದೆ. ಜನವರಿ 1ರಂದು  ಸೋಯಾಬೀನ್‌ ಕ್ವಿಂಟಾಲ್‌ಗೆ 4,700 ರೂ.ಗೆ ಮಾರಾಟವಾಗುತ್ತಿದ್ದರೆ, ಈಗ ಅದು 4,100 ರೂ.ಗೆ ಇಳಿಕೆಯಾಗಿದೆ.

ಶೇ. 8-10ರಷ್ಟು ಕಡಿತ ;

ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು ಖಾದ್ಯ ತೈಲಗಳ ಬೆಲೆ ಕುಸಿತಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಕೆಡಿಯಾ ಅಡ್ವೆ„ಸರಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಕೆಡಿಯಾ ಹೇಳಿದ್ದಾರೆ. ಕಚ್ಚಾ ಪಾಮ್‌ ಆಯಿಲ್‌ನ ಬೆಲೆ ಮುಂದಿನ ಒಂದು ತಿಂಗಳಲ್ಲಿ ಶೇ. 8-10ರಷ್ಟು ಇಳಿಕೆಯಾಗಬಹುದು. ಅಂಥ ಪರಿಸ್ಥಿತಿಯಲ್ಲಿ ಇತರ ಖಾದ್ಯ ತೈಲಗಳ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

ಬೆಲೆ ಇಳಿಕೆ ಸಾಧ್ಯತೆ ಇರುವ ಖಾದ್ಯ ತೈಲಗಳು ಸಾಸಿವೆ ಎಣ್ಣೆ  :

ಹೊಸ ಸಾಸಿವೆ ಬೆಳೆ ಕಟಾವಿಗೆ ಬರಲಾರಂಭಿಸಿದೆ. ಈ ವರ್ಷ ಉತ್ತಮ ಇಳುವರಿ ಇದೆ. ಸಾಸಿವೆ ಎಣ್ಣೆಯಲ್ಲಿ ಇತರ ಎಣ್ಣೆಯನ್ನು ಮಿಶ್ರಣ ಮಾಡಲು ಕೇಂದ್ರ ಮತ್ತೆ ಅವಕಾಶ ನೀಡಿದೆ. ಇದು ಸಾಸಿವೆ ಎಣ್ಣೆಯ ಬೆಲೆಯನ್ನು ಕಡಿಮೆಗೊಳಿಸಲಿದೆ.

ತಾಳೆ ಎಣ್ಣೆ  ಮಲೇಷ್ಯಾ ಜೈವಿಕ ಇಂಧನಕ್ಕೆ ಶೇ. 20 – ಶೇ. 40ರಷ್ಟು ತಾಳೆ ಎಣ್ಣೆಯನ್ನು ಸೇರಿಸಲು ಯೋಜಿ ಸಿದೆ. ಆದರೆ ಈಗ ಇದನ್ನು 1 ವರ್ಷ ಮುಂದೂಡಲಾಗಿದೆ. ಇನ್ನು ಮಲೇಷ್ಯಾದಲ್ಲಿ ಲಾಕ್‌ಡೌನ್‌ ಜಾರಿ ಯಲ್ಲಿರುವುದರಿಂದ ದೇಶೀಯ ಬೇಡಿ ಕೆಯೂ ಕುಸಿದಿದೆ.

ಸೋಯಾಬೀನ್‌ ತೈಲ: ದೇಶವು ಈ ವರ್ಷ 104.55 ಲಕ್ಷ ಟನ್‌ ಸೋಯಾಬೀನ್‌ ಉತ್ಪಾದಿಸುತ್ತದೆ ಎಂದು ಅಂದಾಜಿಸ ಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 15ರಷ್ಟು ಹೆಚ್ಚಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next