ಹಲ್ದ್ವಾನಿ/ಡೆಹ್ರಾಡೂನ್: ಉತ್ತರಾಖಂಡ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಇದರಿಂದಾಗಿಯೇ ಜನರು ತಮ್ಮ ಗ್ರಾಮಗಳಿಂದ ಬೇರೆಡೆ ವಲಸೆ ಹೋಗುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿ ಯಲ್ಲಿ ಗುರುವಾರ 17,500 ಕೋಟಿ ರೂ.ಮೌಲ್ಯದ ವಿವಿಧ ಯೋಜ ನೆ ಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಪೈಕಿ 5,747 ಕೋಟಿ ರೂ. ಮೌಲ್ಯದ ಲಖ್ವಾರ್ ಜಲ ವಿದ್ಯುತ್ ಯೋಜನೆಯೂ ಒಂದಾಗಿದೆ. 1974ರಲ್ಲಿಯೇ ಈ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿತ್ತು. 46 ವರ್ಷಗಳ ಹಿಂದಿನ ಯೋಜನೆಗೆ ಈ ವರ್ಷ ಶಿಲಾನ್ಯಾಸ ನೆರವೇರಿಸ ಲಾಗುತ್ತದೆ ಎಂದು ಹೇಳಿದ್ದಾರೆ. ಜನರಿಗೆ ವಿದ್ಯುತ್, ನೀರು ನೀಡಲಿದ್ದ ಯೋಜನೆಯನ್ನು ದೀರ್ಘ ಕಾಲ ತಡೆಹಿಡಿದದ್ದು ಪಾಪವಲ್ಲವೇ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಹರೀಶ್ ರಾವತ್ ಆಡಳಿತವನ್ನೂ ಮೋದಿ ಟೀಕಿಸಿದ್ದಾರೆ.
ಇಟಲಿಗೆ ಹಾರಿದ ರಾಹುಲ್: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾ ವಣ ಆಯೋಗ ಶೀಘ್ರದಲ್ಲಿಯೇ ಪ್ರಕಟಿ ಸ ಲಿದೆ. ಕಾಂಗ್ರೆಸ್‌ನ ಪ್ರಧಾನ ಪ್ರಚಾರಕರಾಗಿರುವ ರಾಹುಲ್ ಗಾಂಧಿ ಗುರುವಾರ ಬೆಳಗ್ಗೆ ಏಕಾಏಕಿ ಇಟಲಿಗೆ ತೆರಳಿದ್ದಾರೆ. ಇದೊಂದು ವೈಯಕ್ತಿಕ ಭೇಟಿ ಎಂದು ಅವರ ಆಪ್ತ ವಲಯಗಳು ಹೇಳಿಕೊಂಡಿವೆ. ರಾಹುಲ್ ಪ್ರವಾಸದಿಂದಾಗಿ ಪಂಜಾಬ್‌ನ ಮೊಗಾದಲ್ಲಿ ಜ.3ರಂದು ಆಯೋ ಜಿಸ ಲಾಗಿದ್ದ ರ್ಯಾಲಿಯನ್ನು ರದ್ದು ಮಾಡಲಾಗಿದೆ. 2021ರಲ್ಲಿ 25 ದಿನಗಳ ಕಾಲ ರಾಹುಲ್ ಗಾಂಧಿಯವರು ವಿದೇಶದಲ್ಲಿಯೇ ಇದ್ದರು. ಕಾಂಗ್ರೆಸ್‌ನ ಮೂಲಗಳು ದೃಢಪಡಿಸಿರುವ ಪ್ರಕಾರ ಜ.15 ಮತ್ತು 16ರಂದು ಪಂಜಾಬ್ ಮತ್ತು ಗೋವಾದಲ್ಲಿ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಿ, ಮಾತನಾಡಲಿದ್ದಾರೆ.
ಮಥುರಾ, ವೃಂದಾವನ ಮರೆಯುವುದಿಲ್ಲ: ಉ.ಪ್ರ.ಸಿಎಂ :
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಬಿಜೆಪಿ ವಾಗ್ಧಾನ ಮಾಡಿತ್ತು. ಅದರಂತೆಯೇ ನಡೆದುಕೊಳ್ಳುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಫರೂಕಾಬಾದ್‌ನಲ್ಲಿ ಮಾತನಾಡಿದ ಅವರು, ಕಾಶಿಯಲ್ಲಿನ ವಿಶ್ವನಾಥ ದೇಗುಲದ ಕಾಮಗಾರಿಯನ್ನೂ ಮುಕ್ತಾಯ ಮಾಡಿದ್ದೇವೆ. ಅದೇ ರೀತಿ, ಮಥುರಾ ಮತ್ತು ವೃಂದಾವನದ ಅಭಿವೃದ್ಧಿಯನ್ನೂ ಕೈಗೆತ್ತಿಕೊಂಡಿದ್ದೇವೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದ್ದಾರೆ.