Advertisement
ಮೂರು ಅವಧಿಗೆ ನಿರ್ದೇಶಕ ರಾಗಿದ್ದ ಅವರು ನಾಲ್ಕನೇ ಅವಧಿಗೂ ನಿರ್ದೇಶಕರಾಗಿದ್ದಾರೆ. ಕ್ಯಾಂಪ್ಕೊದ ಅಧ್ಯಕ್ಷರಾಗುತ್ತಿ ರುವ ಉಡುಪಿ ಜಿಲ್ಲೆಯ ಮೊದಲಿಗರು. ಕ್ಯಾಂಪ್ಕೊ ಮಂಡಳಿಗೆ ಆಯ್ಕೆಯಾದ ಜಿಲ್ಲೆಯ ಮೊದಲ ಪ್ರತಿನಿಧಿಯೂ ಹೌದು. ಪ್ರಸ್ತುತ ಕಿಶೋರ್ ಕೊಡ್ಗಿ ಮತ್ತು ಕಾರ್ಕಳದ ದಯಾನಂದ ಹೆಗಡೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಕಿಶೋರ್ ಮುತ್ಸದ್ದಿ ರಾಜಕಾರಣಿ, ಹಿರಿಯ ಸಹಕಾರಿ, 3ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ಪುತ್ರ.
ಇರಲಿಲ್ಲ; ಆಪೇಕ್ಷೆಯೂ ಇರಲಿಲ್ಲ. ಹಿರಿಯರೆಲ್ಲರ ಒತ್ತಾಯದ ಮೇರೆಗೆ ಈ ಹುದ್ದೆ ಯನ್ನು ಒಪ್ಪಿಕೊಂಡಿದ್ದೇನೆ. ಅವಕಾಶ ಕೊಟ್ಟಿದ್ದಾರೆ; ಬೆಳೆಗಾರರಿಗೆ ಒಳಿತಾಗುವ ಕಾರ್ಯವನ್ನು ಮಾಡುವೆ.
Related Articles
ಧಾರಣೆ ಏರಿಕೆಯಿಂದಾಗಿ ಮಲೆನಾಡು, ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಬಯಲು ಸೀಮೆ ಯಲ್ಲೂ ಅಡಿಕೆ ಬೆಳೆಯು ವವರ ಸಂಖ್ಯೆ ಹೆಚ್ಚುತ್ತಿದೆ. ಗದ್ದೆ, ಗುಡ್ಡಗಳು ಅಡಿಕೆ ತೋಟಗಳಾಗಿ ಬದಲಾಗುತ್ತಿವೆ. ಇದು ಭವಿಷ್ಯದ ದೃಷ್ಟಿಯಿಂದ ಆತಂಕವೂ ಹೌದು. ಯಾಕೆಂದರೆ ಅಡಿಕೆಗೆ ಈಗಿರುವ ಬೆಲೆ ಸ್ಥಿರವಾಗಿರುತ್ತದೆ ಎನ್ನಲಾಗದು. ಹಾಗಾಗಿ ಅಡಿಕೆ ಬೆಳೆಗಾರರು ಕೊಕ್ಕೊ, ಕಾಳುಮೆಣಸಿನಂತಹ ಪರ್ಯಾಯ ಬೆಳೆಗಳತ್ತಲೂ ಯೋಚನೆ ಮಾಡಬೇಕಿದೆ. ಹಿಂದೆ ರಬ್ಬರ್ ಬೆಲೆ ಏರಿಕೆಯಾದಾಗಲೂ ಹೀಗೆ ಆಗಿತ್ತು. ಈಗ ರಬ್ಬರ್ ಬೆಳೆ ಪಾತಾಳಕ್ಕೆ ಕುಸಿದಿದ್ದು, ಮತ್ತೆ ಅಡಿಕೆಯತ್ತ ಮನಸ್ಸು ಮಾಡಿದ್ದಾರೆ. ಹಾಗಾಗಿ ರೈತರು ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸಬೇಕಿದೆ.
Advertisement
ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರಕ್ಕೆ ಬೇಡಿಕೆ ಇದೆಯೆ?ಕುಂದಾಪುರದಲ್ಲಿ ಕುಂದಾಪುರ, ಸಿದ್ದಾಪುರ, ಕಾರ್ಕಳದಲ್ಲಿ ಕಾರ್ಕಳ ಮತ್ತು ಹೆಬ್ರಿ ಸಹಿತ ಜಿಲ್ಲೆಯಲ್ಲಿ ನಾಲ್ಕು ಅಡಿಕೆ ಖರೀದಿ ಕೇಂದ್ರಗಳಿವೆ. ಕ್ಯಾಂಪ್ಕೊ ಸಂಸ್ಥೆಯಡಿ ಒಟ್ಟಾರೆ 74 ಖರೀದಿ ಕೇಂದ್ರಗಳಿವೆ. ಜಿಲ್ಲಾ ಕೇಂದ್ರವಾದ ಉಡುಪಿಯಲ್ಲಿ ಅಡಿಕೆ ಖರೀದಿ ಕೇಂದ್ರದ ಬೇಡಿಕೆಯನ್ನು ಶಾಸಕರು ಮುಂದಿರಿಸಿದ್ದಾರೆ. ಆದರೆ ಅಲ್ಲಿ ಮಾಡಿದರೆ ಅಷ್ಟೇನು ಪ್ರಯೋಜನಕ್ಕೆ ಬಾರದು. ಹಾಗಾಗಿ ಬ್ರಹ್ಮಾವರದಲ್ಲಿ ಖರೀದಿ ಕೇಂದ್ರ ಆರಂಭಿಸುವ ಚಿಂತನೆಯಿದೆ. ಖಾಸಗಿ ಮಾರುಕಟ್ಟೆಯ ಬೆಲೆ ಇಳಿಸುವ ತಂತ್ರಕ್ಕೆ ಕ್ಯಾಂಪ್ಕೊದಿಂದ ಕಡಿವಾಣ ಸಾಧ್ಯವೇ?
ಖಾಸಗಿ ಮಾರುಕಟ್ಟೆಗಳಲ್ಲಿ ಆಗಾಗ ಬೆಲೆ ಕಡಿಮೆ ಮಾಡುವ ತಂತ್ರಗಳು ನಡೆಯುತ್ತವೆ. ಇದನ್ನು ಬೆಳೆಗಾರರು ಅರಿತು ಅಡಿಕೆ ಯನ್ನು ಕ್ಯಾಂಪ್ಕೊಗೆ ಹೆಚ್ಚೆಚ್ಚು ಮಾರಿದರೆ ಸಂಸ್ಥೆಯ ಸ್ಥಿರ ಆದಾಯವು ಹೆಚ್ಚಲಿದೆ. ಇದರಿಂದ ಬೆಲೆ ನಿಯಂತ್ರಣಕ್ಕೂ ಪ್ರಯತ್ನಿಸಬಹುದು. ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ನಿಮ್ಮ ಯೋಜನೆಗಳೇನು?
ಸಂಸ್ಥೆಯಲ್ಲಿ 1.20 ಲಕ್ಷ ಅಡಿಕೆ ಬೆಳೆಗಾರ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರ ಮೃತಪಟ್ಟರೆ ಆ ಕುಟುಂಬಕ್ಕೆ ಕನಿಷ್ಠ 3 ಲಕ್ಷ ರೂ. ವಿಮೆ ಕೊಡುವ ಮಹತ್ವದ ಕನಸಿದೆ. ಅಡಿಕೆ ಕೃಷಿಗೆ ಹೆಚ್ಚೆಚ್ಚು ಯಂತ್ರೋಪಕರಣ ಬಳಸುವ ನಿಟ್ಟಿನಲ್ಲಿ ರೈತರಿಗೆ ಕಾರ್ಯಾಗಾರ ನಡೆಸಲಾಗುವುದು. ಪುತ್ತೂರು ಬಳಿ ಕಾವು ಎನ್ನುವಲ್ಲಿ 25 ಕೋ.ರೂ. ವೆಚ್ಚದ ಸುಸಜ್ಜಿತ ಗೋದಾಮು ಆರಂಭವಾಗಲಿದೆ. ಆಮದು ಅಲ್ಲವೇ ಅಲ್ಲ
ಅಡಿಕೆ ಆಮದು ಅಲ್ಲ. ಒಂದು ರೀತಿಯಲ್ಲಿ ಅಡಿಕೆ ಸ್ಮಗ್ಲಿಂಗ್ ನಡೆಯುತ್ತಿದೆ. ಮ್ಯಾನ್ಮಾರ್ ಮತ್ತಿತರ ದೇಶಗಳಿಂದ ಹೆಚ್ಚೆಚ್ಚು ಅಡಿಕೆಯನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ಪ್ರಯತ್ನಿಸುವುದೇ ನಮ್ಮ ಮೊದಲ ಆದ್ಯತೆ. ಅದಕ್ಕೆ ಪ್ರಸ್ತುತ ಇರುವ 251 ರೂ. ಕನಿಷ್ಠ ದರವನ್ನು 300 ರೂ.ಗೆ ಏರಿಸಿದರೆ, ಶೇ. 33ರಷ್ಟು ತೆರಿಗೆ ಸೇರಿ, 390 ರೂ.ವರೆಗೂ ಬೆಲೆ ಏರುತ್ತದೆ. ಇದರಿಂದ ನಮ್ಮ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರ ಮೂಲಕ ಕೇಂದ್ರಕ್ಕೆ ಒತ್ತಡ ತರಲಾಗುವುದು. ಅಡಿಕೆ ಆಮದು ನಿಷೇಧಕ್ಕೂ ಕ್ಯಾಂಪ್ಕೊ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ. ತನಿಖೆಯಿಂದ ಸತ್ಯಾಂಶ ಬಯಲು
ಮೂವರು ನಿರ್ದೇಶಕರಿಂದ ಮಾರುಕಟ್ಟೆಗಿಂತ ಹೆಚ್ಚು ದರಕ್ಕೆ ಅಡಿಕೆಯನ್ನು ಖರೀದಿಸಲಾಗಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದಾಗಿಯೂ ಸಂಶಯ ನಿವಾರಣೆಯ ಸಲುವಾಗಿ ಹಿಂದಿನಅಧ್ಯಕ್ಷರೇ ಸಭೆಯಲ್ಲಿ ತಿಳಿಸಿದಂತೆ, ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ. ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ಪ್ರಶಾಂತ್ ಪಾದೆ