Advertisement
ಕಟ್ಟಡ/ಮನೆಗಳ ನೀರಿನ ತೊಟ್ಟಿ, ಡ್ರಮ್, ಬಕೆಟ್‌ಗಳಲ್ಲಿರುವ ನೀರನ್ನು ಆಗಾಗ ಬದಲಾಯಿಸಿ ಶುಚಿಗೊಳಿಸಬೇಕು, ನೀರು ಸಂಗ್ರಹ ಪರಿಕರಗಳನ್ನು ಸೊಳ್ಳೆ ಪ್ರವೇಶಿಸದಂತೆ ಭದ್ರವಾಗಿ ಮುಚ್ಚಿಡಬೇಕು, ಮನೆ ಮತ್ತು ಕಟ್ಟಡದ ಪರಿಸರವನ್ನು ಸ್ವಂತ ಜವಾಬ್ದಾರಿಯಿಂದ ಶುಚಿಗೊಳಿಸಬೇಕು ಮತ್ತು ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು, ಹೊಟೇಲ್ ಉದ್ದಿಮೆದಾರರು ಶುಚಿತ್ವದೊಂದಿಗೆ ಸಾರ್ವಜನಿಕರಿಗೆ ಕುಡಿಯಲು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನು ಮಾತ್ರ ನೀಡಬೇಕು, ಕಾರ್ಮಿಕರಿಗೆ ಮತ್ತು ಲಾಡ್ಜ್ನಲ್ಲಿ ತಂಗುವವರಿಗೆ ಸೊಳ್ಳೆ ಪರದೆ ನೀಡಬೇಕು, ಹೊಟೇಲ್ ಸುತ್ತಮುತ್ತ ನೀರು ನಿಂತಿದ್ದಲ್ಲಿ ವೇಸ್ಟ್ ಆಯಿಲ್ ಸಿಂಪಡಿಸಬೇಕು.
ಯಾವುದೇ ಜ್ವರ ಬಂದರೂ ನಿರ್ಲಕ್ಷ é ಮಾಡದೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕಟ್ಟಡ ಕಾಮಗಾರಿ ಕೆಲಸಗಾರರಲ್ಲಿ ಮಲೇರಿಯಾ ಪ್ರಕರಣ ಕಂಡು ಬಂದಲ್ಲಿ ಅಲ್ಲಿ ಸಂಗ್ರಹವಾಗಿರುವ ನೀರು ಮತ್ತು ಕ್ಯೂರಿಂಗ್‌ಗಾಗಿ ನಿಲ್ಲಿಸಿರುವ ನೀರಿಗೆ ಅಬೇಟ್/ವೇಸ್ಟ್ ಆಯಿಲನ್ನು ವಾರಕ್ಕೊಮ್ಮೆ ಸಿಂಪಡಿಸಬೇಕು. ಕೆಲಸಗಾರರಿಗೆ ಸೊಳ್ಳೆ ಪರದೆ ಒದಗಿಸಬೇಕು. ಜ್ವರ ಕಂಡುಬಂದಲ್ಲಿ ತತ್‌ಕ್ಷಣ ಚಿಕಿತ್ಸೆ ಕೊಡಿಸಬೇಕು ಎಂದು ಸೂಚಿಸಲಾಗಿದೆ.
Related Articles
Advertisement