Advertisement
ಮುಂಗಾರು ಮಳೆ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಸುರಿಯದೆ ಭತ್ತದ ಬೇಸಾಯ ಮಾಡುವ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಡಿಯುವ ನೀರು, ತೋಟಗಾರಿಕೆ ಬೆಳೆಗಳಿಗೆ ನೀರಿನ ಕೊರತೆ ಸದ್ಯಕ್ಕಿಲ್ಲವಾದರೂ ಮಳೆ ನೀರನ್ನೇ ಪ್ರಮುಖವಾಗಿ ಆಶ್ರಯಿಸಿರುವ ಭತ್ತದ ಬೆಳೆ ಮಾತ್ರ ತತ್ತರಿಸುತ್ತಿದೆ.
ಈ ಬಾರಿ ಮಳೆ ಕೊರತೆಯಿಂದ ಭತ್ತದ ಕೃಷಿ ಮಾಡುವ ಕುರಿತು ಇನ್ನೂ ಅನಿಶ್ಚಿತತೆ ಇದೆ. ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದೆ ಭತ್ತದ ಕೃಷಿ ಮಾಡಲಾಗದು.
– ಸಿ.ಪಿ. ಪ್ರೇಮಲತಾ ರೈ, ಚೆನ್ನಾವರ ಪಟ್ಟೆ ಮಳೆ ಕೊರತೆಯಿಂದ ಸಮಸ್ಯೆಈ ಬಾರಿಯ ಮುಂಗಾರಿನ ಕೊರತೆಯಿಂದಾಗಿ ಹಲವೆಡೆ ಭತ್ತದ ಕೃಷಿಕರಿಗೆ ಸಮಸ್ಯೆಯಾಗಿದೆ. ಇಲಾಖೆಯಿಂದ ರೈತರಿಗೆ ಭತ್ತದ ಬೀಜ ಪೂರೈಕೆ ಸಹಿತ ಬೀಜೋಪಚಾರ, ನಾಟಿ ತರಬೇತಿಗಳನ್ನು ನಡೆಸಲಾಗಿದೆ. ಮಳೆ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.
– ತಿಮ್ಮಪ್ಪ ಗೌಡ, ಸಹಾಯಕ ಕೃಷಿ ಅಧಿಕಾರಿ, ಕಡಬ ಹೋಬಳಿ
Related Articles
ಕೆಲವು ಕಡೆಗಳಲ್ಲಿ ಬೆಳೆದ ನೇಜಿಗೆ 40 ದಿನ ಆಗಿದೆ. ಇನ್ನು ನೇಜಿ ನೆಲದೊಳಗೆ ಬೇರು ಬಿಡುತ್ತದೆ. ಬಳಿಕ ಅದನ್ನು ತೆಗೆದು ಇನ್ನೊಂದು ಕಡೆ ನಾಟಿ ಮಾಡುವುದು ಕಷ್ಟ. ಬೇರು ಸಹಿತ ಕಿತ್ತರೂ ಅದು ಮತ್ತೆ ಜೀವ ತಳೆಯುವುದು ಅನುಮಾನ. ಇನ್ನೂ ಕೆಲವು ದಿನಗಳಲ್ಲಿ ಗದ್ದೆಗಳಿಗೆ ನೀರಾಗದಿದ್ದರೆ ನೇಜಿ ಗದ್ದೆಯಲ್ಲೇ ವ್ಯರ್ಥವಾಗಿ ಹೋಗಲಿದೆ. ಅಷ್ಟು ಒತ್ತೂತ್ತಾಗಿ ಬೀಜ ಹಾಕಿರುವುದರಿಂದ ಅದು ಪೈರಾಗಿ ಬೆಳೆಯುವುದು ಸಾಧ್ಯವಿಲ್ಲ. ಕೆಲವು ದಿನ ಕಳೆದರೆ ಗದ್ದೆಯನ್ನು ನೇಜಿ ಸಮೇತ ಮತ್ತೆ ಉಳುಮೆ ಮಾಡಿ, ಅದು ಕೊಳೆತ ಮೇಲೆ ಹೊಸ ಬೀಜ ಬಿತ್ತನೆ ಮಾಡಬೇಕಾದ ಸ್ಥಿತಿ ಇದೆ.
Advertisement
ಪ್ರವೀಣ್ ಚೆನ್ನಾವರ