Advertisement
ದಿಲ್ಲಿ ಶೂಟಿಂಗ್ ವಿಶ್ವಕಪ್ ಮಾ. 15ರಿಂದ 26ರ ವರೆಗೆ ನಡೆಯಬೇಕಿತ್ತು. ಆದರೆ ಈ ಕೂಟ ಆರಂಭವಾಗಲು ಕೇವಲ ನಾಲ್ಕು ದಿನಗಳಿರುವಾಗ ಮುಂದೂಡಲಾಗಿತ್ತು. ಆಬಳಿಕ ಮುಂದೂಡಲ್ಪಟ್ಟ ಕೂಟವನ್ನು ಎರಡು ಹಂತಗಳಲ್ಲಿ (ರೈಫಲ್ ಮತ್ತು ಪಿಸ್ತೂಲ್ ಕೂಟ ಮೇ 5ರಿಂದ 12 ಮತ್ತು ಶಾಟ್‌ಗನ್ ಸ್ಪರ್ಧೆ ಜೂ. 2ರಿಂದ 9ರ ವರೆಗೆ) ನಡೆಸಲು ನಿರ್ಧರಿಸಲಾಗಿತ್ತು.ಮ್ಯೂನಿಚ್ ವಿಶ್ವಕಪ್ ರದ್ದುಗೊಂಡ ಬಳಿಕ ಎಲ್ಲ ಕಡೆಗಳಿಂದ ಒತ್ತಡಗಳು ಬರುತ್ತಿವೆ. ದೇಶವಲ್ಲದೇ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಇರುವುದರಿಂದ ವಿಶ್ವಕಪ್‌ನಂತಹ ಕೂಟಕ್ಕಾಗಿ ಶೂಟರ್‌ಗಳು ಹೇಗೆ ಸಿದ್ಧತೆ ಮಾಡಿಕೊಳ್ಳುವುದು ಎಂದು ಮೂಲ ಗಳು ಹೇಳಿವೆ.
ಕೋವಿಡ್ 19 ದ ಹೊಡೆತದಿಂದಾಗಿ ಇಂಟರ್‌ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್), ಜರ್ಮನ್ ಶೂಟಿಂಗ್ ಫೆಡರೇಶನ್ ಹಾಗೂ ಮ್ಯೂನಿಚ್ ಅಧಿಕಾರಿಗಳು ಜಂಟಿಯಾಗಿ ಜೂ. 2ರಿಂದ 9ರ ವರೆಗೆ ನಡೆಯುವ ಶೂಟಿಂಗ್ ವಿಶ್ವಕಪ್ ರದ್ದುಗೊಳಿಸುವ ಹೇಳಿಕೆ ಪ್ರಕಟಿಸಿದ್ದಾರೆ.