Advertisement
ಮೂಡಾಕ್ಕೆ ಸರಕಾರದಿಂದ ಬಂದಿರುವ ಹೊಸ ಆದೇಶದ ಬಗ್ಗೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಗಮನ ಸೆಳೆೆದರು. ನಗರದಲ್ಲಿ ಬ್ರಿಟೀಷರ ಕಾಲದಿಂದಲು ವಾಸವಿರುವ ನಿವಾಸಿಗಳಿಗೆ ಸರ್ಕಾರದ ಸಿಂಗಲ್ ಲೇಜೌಟ್ ಪ್ಲಾನ್‌ನಿಂದ ಗೊಂದಲ ಸೃಷ್ಟಿಯಾಗಿದೆ. ಈ ಆದೇಶದಂತೆ ಯಾರೇ ಮನೆ ನಿರ್ಮಿಸುವುದಾದರು ಲೇಜೌಟ್ ಅನುಮೋದನೆ ಪಡೆಯಬೇಕು. ಒಂದು ವೇಳೆ ಲೇಜೌಟ್ ಇಲ್ಲದೆ ಹೋದಲ್ಲಿ ಸ್ವಂತ ನಿವೇಶನವನ್ನು ಸಿಂಗಲ್ ಲೇಜೌಟ್ ಪ್ಲಾನ್‌ಗೆ ಅಳವಡಿಸಿ ಅನುಮೋದನೆ ಪಡೆಯಬೇಕು. ಆದರೆ, 4 ರಿಂದ 5 ಸೆಂಟ್ ಜಾಗ ಹೊಂದಿರುವ ಮತ್ತು ಬ್ರಿಟೀಷರ ಕಾಲದಿಂದ ವಾಸವಿರುವವರಿಗೆ ಸರ್ಕಾರದ ಆದೇಶದಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಕಾಶ್ ಅವರು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಸಚಿವರು, ಮಡಿಕೇರಿಯಲ್ಲಿ ಮನೆ ನಿರ್ಮಾಣಕ್ಕೆ 11 ಅರ್ಜಿಗಳು ಮಾತ್ರ ಬಂದಿದ್ದು, ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆಯೆಂದು ಮಾಹಿತಿಯನ್ನು ನೀಡಿದ್ದರು ಎಂದು ಚುಮ್ಮಿ ದೇವಯ್ಯ ತಿಳಿಸಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಲೇಜೌಟ್ ಗೊಂದಲದ ಬಗ್ಗೆ ಸರ್ಕಾರದ ಗಮನ ಸೆಳೆೆದು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭ ಮಾತನಾಡಿದ ಚುಮ್ಮಿ ದೇವಯ್ಯ, ಮೂಡಾದ ಮೂಲಕ ಲೇಜೌಟ್ ಅನುಮೋದನೆ ಪಡೆದ ನಿವೇಶನಗಳನ್ನು ಮಾತ್ರ ಸಾರ್ವಜನಿಕರು ಖರೀದಿಸುವಂತೆ ಸಲಹೆ ನೀಡಿದರು. ಕೆಲವು ಕಡೆ ಅನುಮೋದನೆ ಇಲ್ಲದೆ ಲೇ ಜೌಟ್‌ಗಳಲ್ಲಿ ಏನೂ ಅರಿಯದವರು ನಿವೇಶನ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಇದು ಸಂಕಷ್ಟಕ್ಕೆ ಎಡೆಮಾಡಿಕೊಡಲಿದೆ ಎಂದು ಅವರು ತಿಳಿಸಿದರು.
Related Articles
Advertisement
ನಗರದಲ್ಲಿನ ಅಭಿವೃದ್ಧಿಯ ಹಿನ್ನಡೆಗೆ ಹೊಂದಾಣಿಕೆಯ ಕೊರತೆಯೆ ಕಾರಣವೆಂದು ಕೆ.ಎಸ್. ರಮೇಶ್ ಅಭಿಪ್ರಾಯಪಟ್ಟರು. ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಬಂಡಾಯ ಸದಸ್ಯ ಕೆ.ಎಂ. ಗಣೇಶ್ ಮಾತನಾಡಿ, ನಗರಸಭೆೆಗೆ ಸರ್ಕಾರದ ಕೊಡುಗೆ ಶೂನ್ಯವೆಂದು ಆರೋಪಿಸಿದರು. ಯಾವುದೇ ಸರ್ಕಾರ ಬಂದರು ಪ್ರತಿ ವರ್ಷ ನೀಡುವ ಅನುದಾನವನ್ನು ನೀಡುತ್ತದೆ. ವಿಶೇಷವಾಗಿ ಈ ಸರ್ಕಾರ ಏನೂ ನೀಡಿಲ್ಲವೆಂದು ಟೀಕಿಸಿ, ತಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರು ತನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತನ್ನ ವಾರ್ಡ್‌ನ ಕೆಲಸ ಕಾರ್ಯಗಳಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಟೀಕೆಗೆ ಉತ್ತರಿಸಿದ ಕಾವೇರಮ್ಮ ಸೋಮಣ್ಣ, ಕಾನೂನು ಬದ್ಧವಾಗಿ ಕಾರ್ಯಗಳು ಸುಸೂತ್ರ ವಾಗಿ ನಡೆಯುತ್ತಿದೆ. ಬೆಳಗ್ಗೆ 5.30ಕ್ಕೆ ನಗರ ಸಭೆಯ ಕಾರ್ಯಗಳಿಗೆ ಹಾಜರಾಗುವ ನಾನು ರಾತ್ರಿ 7.30ರವರೆಗು ಕರ್ತವ್ಯ ನಿರತಳಾಗಿರುತ್ತೇನೆ. ಯಾರಿಗೂ ಅಂಜುವುದಿಲ್ಲವೆಂದು ತಿಳಿಸಿದ ಕಾವೇರಮ್ಮ ಸೋಮಣ್ಣ, ಫಾರಂ ನಂ.3 ಗೊಂದಲವನ್ನು ನಿವಾರಿಸುವ ಭರವಸೆ ನೀಡಿದರು.ಕೊಡಗು ಪ್ರಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.