Advertisement

ಭಾರತದೆದುರಿನ ಪಂದ್ಯದಲ್ಲಿ ಒತ್ತಡ ಯಾವಾಗಲೂ ಇರುತ್ತದೆ: ಬಾಬರ್ ಅಜಮ್

01:59 PM Aug 12, 2022 | Team Udayavani |

ಇಸ್ಲಾಮಾಬಾದ್ : ಭಾರತದ ಎದುರಿನ ಪಂದ್ಯಗಳಲ್ಲಿ ಒತ್ತಡ ಯಾವಾಗಲೂ ಇರುತ್ತದೆ ಎಂದು ಪಾಕಿಸ್ಥಾನ ಕ್ರಿಕೆಟ್  ತಂಡದ ನಾಯಕ ಬಾಬರ್ ಅಜಮ್ ಏಷ್ಯಾ ಕಪ್ ಆರಂಭಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.

Advertisement

ಭಾರತ ವಿರುದ್ಧ ಪಾಕಿಸ್ಥಾನ ಪಂದ್ಯದ ಕುರಿತು ಮಾಧ್ಯಮಗಳೊಂದಿಗೆ ಸಂವಾದದ ಸಂದರ್ಭದಲ್ಲಿ, ಬಾಬರ್ ಅಜಮ್, ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ  ಸಕಾರಾತ್ಮಕವಾಗಿ ಉತ್ತರಿಸಿದ್ದು, “ಒತ್ತಡ ಯಾವಾಗಲೂ ಇರುತ್ತದೆ.ತಮ್ಮ ಎದುರಾಳಿಗಳನ್ನು ಎದುರಿಸುವಾಗ ಎರಡೂ ಕಡೆಯ ಆಟಗಾರರ ಮೇಲೆ ಒತ್ತಡ ಹೆಚ್ಚಿನದ್ದಾಗಿರುತ್ತದೆ” ಎಂದು  ಒಪ್ಪಿಕೊಂಡರು.

” ನಾವು ಅದನ್ನು ಸಾಮಾನ್ಯ ಪಂದ್ಯದಂತೆ ಆಡಲು ಪ್ರಯತ್ನಿಸುತ್ತೇವೆ. ಆದರೂ ನಿಸ್ಸಂಶಯವಾಗಿ ಒತ್ತಡವು ವಿಭಿನ್ನವಾಗಿದೆ. ಆದರೆ ನಾವು ಟಿ 20 ವಿಶ್ವಕಪ್ 2021 ರಲ್ಲಿ ಮಾಡಿದಂತೆ ಅದು ನಮ್ಮ ಆಟದ ಮೇಲೆ ಕೇಂದ್ರೀಕರಿಸುವುದು, ತಂಡ ಮತ್ತು ನಮ್ಮ ಮೇಲೆ ನಂಬಿಕೆ ಇಡುವುದು. ಈ ಬಾರಿಯೂ ನಾವು ನಮ್ಮ ಕೈಲಾದದ್ದನ್ನು ನೀಡಲಿದ್ದೇವೆ. ಪ್ರಯತ್ನ ನಮ್ಮ ಕೈಯಲ್ಲಿದೆ ಆದರೆ ಫಲಿತಾಂಶವಿಲ್ಲ” ಎಂದು ಬಾಬರ್ ಹೇಳಿದ್ದಾರೆ.

ಏಷ್ಯಾ ಕಪ್ 2022 ರಲ್ಲಿ ಭಾರತವು ಆಗಸ್ಟ್ 28 ರಂದು ಪಾಕಿಸ್ಥಾನವನ್ನು ಎದುರಿಸಲಿದೆ.ಈ ಪಂದ್ಯವು ಕ್ರಿಕೆಟ್ ಕ್ಷೇತ್ರದಲ್ಲಿ ಬಹು ನಿರೀಕ್ಷಿತ ಮುಖಾಮುಖಿಯಾಗಿದೆ. ಎರಡು ತಂಡಗಳು ಜನವರಿ 2013 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಸೆಣಸಾಟವನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಏಷ್ಯಾ ಕಪ್ ಗೆ ತಂಡಗಳು ಇಂತಿವೆ

Advertisement

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್ , ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಪಾಕಿಸ್ಥಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ , ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್

Advertisement

Udayavani is now on Telegram. Click here to join our channel and stay updated with the latest news.

Next