Advertisement
ರಾಷ್ಟ್ರಪತಿಗಳು ಅಂದು ಮಧ್ಯಾಹ್ನ 12.10ರಿಂದ 12.40ರ ವರೆಗೆ ಮಾತ್ರ ಉಡುಪಿಯಲ್ಲಿರುತ್ತಾರೆ. ಮೊದಲು ಪೇಜಾವರ ಮಠಕ್ಕೆ ಆಗಮಿಸಿ, ಶ್ರೀಗಳನ್ನು ಭೇಟಿಯಾಗಿ, ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ಹಿಂದಿರುಗುವರು ಎಂದು ತಿಳಿದುಬಂದಿದೆ.
ರಾಷ್ಟ್ರಪತಿ ಡಿ. 27ರಂದು ಉಡುಪಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭದ್ರತೆ ಮತ್ತಿತರ ದೃಷ್ಟಿಯಿಂದ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 4ರ ವರೆಗೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. * ಮಲ್ಪೆ, ಕಲ್ಮಾಡಿ ಕಡೆಯಿಂದ ಬರುವ ವಾಹನಗಳನ್ನು ಕಲ್ಮಾಡಿ ಜಂಕ್ಷನ್‌ನಿಂದ ಕಿದಿಯೂರು ಜಂಕ್ಷನ್ ಮಾರ್ಗವಾಗಿ ಅಂಬಲಪಾಡಿ ಸ್ವಾಗತ ಗೋಪುರ -ಜೋಡುಕಟ್ಟೆ ಮಾರ್ಗವಾಗಿ ಉಡುಪಿ ನಗರಕ್ಕೆ ಬರಬೇಕು.
* ಕುಂದಾಪುರ, ಬ್ರಹ್ಮಾವರ, ಸಂತೆಕಟ್ಟೆ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಅಂಬಾಗಿಲಿನಿಂದ ಬಂದು ರಸಿಕ ಬಾರ್ ಜಂಕ್ಷನ್ ಮೂಲಕ ದೊಡ್ಡಣಗುಡ್ಡೆ, ಮನೋಳಿಗುಜ್ಜಿ, ಲಾ-ಕಾಲೇಜ್ ಜಂಕ್ಷನ್, ಎಸ್‌ಎಂಕೆ ಜಂಕ್ಷನ್, ಬೀಡನಗುಡ್ಡೆ ಮಾರ್ಗವಾಗಿ ನಗರಕ್ಕೆ ಬರಬೇಕು. ಕಾರ್ಕಳ, ಹಿರಿಯಡ್ಕ, ಮಣಿಪಾಲ ಕಡೆಯಿಂದ ಬರುವ ವಾಹನಗಳು ಎಸ್‌ಕೆಎಂ ಜಂಕ್ಷನ್, ಬೀಡನಗುಡ್ಡೆ ಎಸ್‌ಎಂಕೆ ಜಂಕ್ಷನ್, ಬೀಡನಗುಡ್ಡೆ, ಮಿಷನ್ ಕಂಪೌಂಡ್ ಮಾರ್ಗವಾಗಿ ನಗರಕ್ಕೆ ಬರಬೇಕು.
* ನಗರದಿಂದ ಮಲ್ಪೆ ಕಡೆಗೆ ಹೋಗುವ ವಾಹನಗಳು ಜೋಡುಕಟ್ಟೆ, ಕಿನ್ನಿಮೂಲ್ಕಿ, ಅಂಬಲಪಾಡಿ-ಕಿದಿಯೂರು ಕಲ್ಮಾಡಿ ಮಾರ್ಗವಾಗಿ ಮಲ್ಪೆಗೆ ಹೋಗಬೇಕು.