Advertisement

ರಾಷ್ಟ್ರಪತಿ ಚುನಾವಣೆ: ಸಂಸದರ ಮತಮೌಲ್ಯ ನಿರ್ಣಯ ಹೇಗೆ?

12:11 PM May 10, 2022 | Team Udayavani |

ಜುಲೈಯಲ್ಲಿ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರದ ಅವಧಿ ಮುಕ್ತಾಯ ವಾಗಲಿದೆ. ಹೀಗಾಗಿ ತೆರವಾಗಲಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಮುಕ್ತಾಯ ವಾದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್‌ ಹೊರತುಪಡಿಸಿ ಉಳಿದೆಡೆ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರಿದಿದೆ. ಆದರೆ ಜಮ್ಮು ಮತ್ತು ಕಾಶ್ಮೀರ ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಲ್ಲಿ ವಿಧಾನಸಭೆ ಇಲ್ಲ. ಹೀಗಾಗಿ ಸಂಸದರ ಮತ ಮೌಲ್ಯ ಇಳಿಕೆಯಾಗಿದೆ. ಹಾಗಿದ್ದರೆ ಸಂಸದರ ಮತಮೌಲ್ಯ ನಿರ್ಣಯ ಹೇಗೆ ಮಾಡಲಾಗುತ್ತದೆ ಎಂಬುದನ್ನು ಪರಿಶೀಲಿಸೋಣ.

Advertisement

ಮತದಾರರು ಯಾರು?
ಆಯಾ ರಾಜ್ಯಗಳ ಶಾಸಕರು ಮತ್ತು ಲೋಕಸಭೆಯ, ರಾಜ್ಯಸಭೆಯ ಸದಸ್ಯರೇ ಮತದಾರರು. ಸಂಸದರಿಗೆ ಹಸುರು ಬಣ್ಣದ ಮತ ಚೀಟಿ ಇದ್ದರೆ, ಶಾಸಕರಿಗೆ ಗುಲಾಬಿ (ಪಿಂಕ್‌) ಬಣ್ಣದ ಮತ ಚೀಟಿ ನೀಡಲಾಗು ತ್ತದೆ. ರಾಜ್ಯ ಸಭೆಯ ಸದಸ್ಯರ ಪೈಕಿ ನಾಮನಿರ್ದೇಶನ ಗೊಂಡವರಿಗೆ ಮತದಾನದ ಹಕ್ಕು ಇರುವುದಿಲ್ಲ.

ಮತಮೌಲ್ಯ ಎಷ್ಟು?
1997ರಿಂದಲೂ ಸಂಸದರ ಮತಮೌಲ್ಯ 708 ಎಂದು ನಿಗದಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲದೇ ಇರುವುದರಿಂದ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆಯಾಗಲಿದೆ.

ಮತ ಮೌಲ್ಯದ ನಿರ್ಣಯ ಹೇಗೆ?
ಒಂದು ರಾಜ್ಯದ ಒಟ್ಟು ಮತದಾರರ ಸಂಖ್ಯೆಯನ್ನು ಅಲ್ಲಿನ ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಈ ಭಾಗಾಕಾರದಿಂದ ಬರುವ ಸಂಖ್ಯೆಯನ್ನು ಪುನಃ 1 ಸಾವಿರದಿಂದ ಮರು ಭಾಗಿಸಲಾಗುತ್ತದೆ. ಆಗ ಬರುವ ಉತ್ತರವೇ ಒಬ್ಬ ಶಾಸಕರ ಮತದ ಮೌಲ್ಯ. ಈ ಉದ್ದೇಶಕ್ಕಾಗಿ 1971ರಲ್ಲಿ ನಡೆದ ಜನಗಣತಿ ಮಾಹಿತಿಯನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.

ಪ್ರತಿಯೊಂದು ವಿಧಾನ ಮಂಡಲದಲ್ಲಿರುವ ಶಾಸಕರ ಒಟ್ಟು ಮತಮೌಲ್ಯವನ್ನು ಕಂಡು ಹಿಡಿಯಲು, ಆ ವಿಧಾನ ಮಂಡಲದಲ್ಲಿರುವ ಒಟ್ಟು ಶಾಸಕರ ಸ್ಥಾನಗಳ ಸಂಖ್ಯೆಯನ್ನು, ಪ್ರತಿಯೊಬ್ಬ ಶಾಸಕನಿಗೆ ಬಂದ ಮತಗಳ ಸಂಖ್ಯೆಯೊಂದಿಗೆ ಗುಣಾಕಾರ ಮಾಡಲಾಗುತ್ತದೆ. ಇಲ್ಲಿ ಬರುವ ಗುಣಲಬ್ದವನ್ನು 543 ಲೋಕಸಭಾ ಸದಸ್ಯರು, 233 ರಾಜ್ಯಸಭಾ ಸದಸ್ಯರ ಸಂಖ್ಯೆಯಿಂದ ಭಾಗಾಕಾರ ಮಾಡಲಾಗುತ್ತದೆ. ಆ ಮೂಲಕ, ಪ್ರತಿಯೊಬ್ಬ ಆ ರಾಜ್ಯದ ಒಬ್ಬ ಸಂಸದ ಈ ಚುನಾವಣ ಪ್ರಕ್ರಿಯೆಯಲ್ಲಿ ಎಷ್ಟು ಮತಗಳನ್ನು ಚಲಾಯಿಸಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ.

Advertisement

ಶಾಸಕರ ಮತ ಮೌಲ್ಯ
ಶೇ.40.43 ಬಿಜೆಪಿ ಮತ್ತು ಮಿತ್ರಪಕ್ಷಗಳು
ಶೇ.26.11 ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು
ಶೇ.23.5 ಇತರ ವಿಪಕ್ಷಗಳ ಗುಂಪುಗಳು-1
ಶೇ.9.96 ಇತರ ವಿಪಕ್ಷಗಳ ಗುಂಪುಗಳು-2
5.42 ಲಕ್ಷ ಬಿಜೆಪಿ, ಮಿತ್ರಪಕ್ಷಗಳು ಹೊಂದಿರುವ ಮತ ಮೌಲ್ಯ
4.49 ಲಕ್ಷ ಬಿಜೆಪಿ ವಿರೋಧಿ ಪಕ್ಷಗಳ ಮತಮೌಲ್ಯ

ಸಂಸದರ ಮತಮೌಲ್ಯ
ಶೇ.57.2 ಬಿಜೆಪಿ ಮತ್ತು ಮಿತ್ರಪಕ್ಷಗಳು
ಶೇ.17.6 ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು
ಶೇ.16.5 ಇತರ ವಿಪಕ್ಷಗಳ ಗುಂಪು-1
ಶೇ.8.7 ಇತರ ವಿಪಕ್ಷಗಳ ಗುಂಪು-2

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next