ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆ ನಿಟ್ಟಿನಲ್ಲಿ ಆಡ ಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮೊದಲ ಹೆಜ್ಜೆ ಇರಿಸಿದೆ. ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ಯನ್ನು ಆಯ್ಕೆ ಮಾಡಲು ಮತ್ತು ಕಾಂಗ್ರೆಸ್ ಸೇರಿ ದಂತೆ ವಿಪಕ್ಷಗಳ ಜತೆಗೆ ಮಾತುಕತೆ ನಡೆಸಲು ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಅಧಿಕಾರ ನೀಡಲಾ ಗಿದೆ.
ಅವರಿಬ್ಬರು ಎನ್‌ಡಿಎ ಮಿತ್ರಪಕ್ಷಗಳ ಜತೆಗೆ ಕೂಡ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಹೊಸದಿಲ್ಲಿಯಲ್ಲಿ ರವಿವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ಯಾಗಿ ಇಬ್ಬರು ನಾಯಕರು ಎನ್‌ಡಿಎ ಮಿತ್ರಪಕ್ಷ ಗಳು ಮತ್ತು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮುಖಂಡರ ಜತೆಗೆ ಶೀಘ್ರದಲ್ಲಿಯೇ ಮಾತುಕತೆ ಶುರು ಮಾಡಲಿದ್ದಾರೆ. ಮುಂದಿನ ತಿಂಗಳ 18ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 2017ರಲ್ಲಿ ಬಿಜೆಪಿಯ ಆಗಿನ ಅಧ್ಯಕ್ಷ ಅಮಿತ್ ಶಾ ಅವರು ಮೂವರು ಸದ ಸ್ಯರ ಸಮಿತಿಯನ್ನು ಅಭ್ಯರ್ಥಿ ಆಯ್ಕೆಗೆ ರಚಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎಯ ಅಭ್ಯರ್ಥಿಗೆ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯ ಬೆಂಬಲವನ್ನು ಕೇಳಬೇಕಾಗಬಹುದು.
ಸೋನಿಯಾ ಚರ್ಚೆ: ಇದೇ ವೇಳೆ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೂಡ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮುಖಂ ಡರ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಮತ್ತೂಂದೆಡೆ ಆಮ್ ಆದ್ಮಿ ಪಾರ್ಟಿಯ ಮುಖಂಡ ಸಂಜಯ ಸಿಂಗ್ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬಯಿಯಲ್ಲಿ ಭೇಟಿ ಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಲಾಲು ಪ್ರಸಾದ್ ಸ್ಪರ್ಧೆ!
ರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲಿದ್ದಾರೆ. ಪ್ರಥಮ ಪ್ರಜೆಯ ಚುನಾವಣೆಯಲ್ಲಿ ಬಿಹಾರದ ಪ್ರಮುಖರೊಬ್ಬರು ಕಣದಲ್ಲಿ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಅಂದ ಹಾಗೆ ಈ ಲಾಲು ಪ್ರಸಾದ್ ಯಾದವ್ ರಾಷ್ಟ್ರೀಯ ಜನತಾ ದಳದ ಸಂಸ್ಥಾಪಕ ಅಲ್ಲ. ಅವರು ಸರನ್ ಜಿಲ್ಲೆಯ ನಿವಾಸಿ!