Advertisement

ಗ್ರಾಮ ಪಂಚಾಯತ್ ಅಧ್ಯಕ್ಷಗಿರಿಗೆ ಕುದರೆ ವ್ಯಾಪಾರ; ವಿಡಿಯೋ ವೈರಲ್

10:36 PM Jan 04, 2021 | Team Udayavani |

ಬೀದರ: ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುವ ಮೊದಲೇ ಜಿಲ್ಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಸದಸ್ಯರಿಗೆ ಮುಂಗಡ ಹಣ ಕೊಟ್ಟು ‘ಡೀಲ್’ ಮಾಡಿಕೊಳ್ಳುತ್ತಿರುವ ವಿಡಿಯೊವೊಂದು ಸಧ್ಯ ವೈರಲ್ ಆಗಿದೆ.

Advertisement

ಜಿಲ್ಲೆಯ ಮಂಗಲಗಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರನ್ನು ಹಣ ಕೊಟ್ಟು ಬುಕ್ಕಿಂಗ್ ಮಾಡಿಕೊಳ್ಳುತ್ತಿರುವ ಡೀಲ್ ಇದಾಗಿದೆ. 21 ಸದಸ್ಯ ಸ್ಥಾನ ಹೊಂದಿರುವ ಸದರಿ ಪಂಚಾಯತ ಮಂಗಲಗಿ ಗ್ರಾಮದ 14 ಸದಸ್ಯ ಮತ್ತು ನಾಗನಕೇರಾದ ಗ್ರಾಮದ 7 ಸದಸ್ಯ ಸ್ಥಾನ ಸೇರಿದೆ. 1 ಲಕ್ಷಕ್ಕೆ ಒಬ್ಬ ಸದಸ್ಯರಂತೆ ಖರೀದಿಸುತ್ತಿರುವ ಅಧ್ಯಕ್ಷ ಆಕಾಂಕ್ಷಿಗಳು ಅಡ್ವಾನ್ಸ್ ಆಗಿ 25 ಸಾವಿರ ರೂ. ನೀಡಿದ್ದು, ಮೀಸಲಾತಿ ಬಂದ ಬಳಿಕ ಉಳಿದ 25 ಸಾವಿರ ನೀಡುವ ಬಗ್ಗೆ ವಾಗ್ದಾನ ಮಾಡಿದ್ದಾರೆ.

ಅಧ್ಯಕ್ಷ ಸ್ಥಾನವನ್ನು ಮೊದಲ ಹಂತದಲ್ಲಿ ಮಂಗಲಗಿ ಗ್ರಾಮಕ್ಕೆ, ನಂತರ 2ನೇ ಹಂತದಲ್ಲಿ ನಾಗನಕೇರಾ ಗ್ರಾಮಕ್ಕೆ ಬಿಟ್ಟು ಕೊಡಬೇಕು ಎಂದು ಕರಾರು ಮಾಡಿಕೊಳ್ಳುವುದು, ಅಡ್ವಾನ್ಸ್ ತೆಗೆದುಕೊಂಡ ಸದಸ್ಯರು ಮತ್ತೆ ಮಾತು ತಪ್ಪದೇ ನಾವು ಅಧ್ಯಕ್ಷ ಮಾಡುವ ಸದಸ್ಯನ ಪರ ಮತ ಹಾಕಬೇಕು ಎಂದು ಷರತ್ತು ಹಾಕಿದ್ದು, ಹಣ ಪಡೆದ ಸದಸ್ಯರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಸದಸ್ಯರ ಸಭೆ ಕುರಿತು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆದರೆ, ಅದೇ ವಿಡಿಯೋ ಈಗ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next