Advertisement

ರಾಷ್ಟ್ರಪತಿ ಆಡಳಿತಕ್ಕೆ ಒತ್ಕಾಯಿಸಿ ಬಸವನಾಗಿದೇವ ಶ್ರೀ ಧರಣಿ

08:44 PM May 07, 2021 | Team Udayavani |

ಚಿತ್ರದುರ್ಗ: ಕೋವಿಡ್‌ ನಿಯಂತ್ರಿಸುವಲ್ಲಿರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆರಾಜ್ಯಪಾಲರು ಶಿಫಾರಸು ಮಾಡಬೇಕುಎಂದು ಒತ್ತಾಯಿಸಿ ಛಲವಾದಿ ಗುರಪೀಠದಶ್ರೀ ಬಸವನಾಗಿದೇವ ಸ್ವಾಮೀಜಿ ಗುರುವಾರ ನಗರದ ಒನಕೆ ಓಬವ್ವಪ್ರತಿಮೆ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.

Advertisement

ಕೋವಿಡ್‌ ಸಂಕಷ್ಟ ನಿವಾರಣೆಗಾಗಿತಾತ್ಕಾಲಿಕ ಆಸ್ಪತ್ರೆ ನಿರ್ಮಾಣಮತ್ತಿತರೆ ಕಾರ್ಯಕ್ಕೆ ನಮ್ಮ ಮಠದಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಡಲುಸಿದ್ಧರಿದ್ದೇವೆ. ಛಲವಾದಿ ಗುರುಪೀಠಕ್ಕೆ ಬಿಡುಗಡೆಯಾಗಿರುವ ಹಣವನ್ನುನಮ್ಮ ಜಾಗದಲ್ಲಿ ಕೋವಿಡ್‌ ಆಸ್ಪತ್ರೆಮತ್ತು ಆಮ್ಲಜನಕ ಘಟಕ ಆರಂಭಕ್ಕೆಉಪಯೋಗಿಸಿಕೊಳ್ಳಲು ನಮ್ಮಸಹಮತವಿದೆ ಎಂದರು.

ಇಂದಿನ ಕೊರೊನಾ ಸಂಕಷ್ಟದಪರಿಸ್ಥಿತಿಯಲ್ಲಿ ನಾಡಿನ ಎಲ್ಲಾಮಠಾ ಧೀಶರು ತಮ್ಮ ಮಠಗಳಿಂದಕೋವಿಡ್‌ ರೋಗಿಗಳ ನೆರವಿಗೆ ಸರ್ವರೀತಿಯಿಂದಲೂ ಸಹಾಯಹಸ್ತಚಾಚಬೇಕು.ಸಿರಿವಂತರು, ಜನಪ್ರತಿನಿಧಿ ಗಳುಕೈಲಾದಷ್ಟು ನೆರವು ನೀಡಿ ಜನಸಾಮಾನ್ಯರ,ಬಡವರ ಜೀವ ಉಳಿಸಬೇಕಿದೆ.

ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಶಾಪಕ್ಕೆ ತುತ್ತಾಗಬೇಕಾಗುತ್ತದೆ ಎಂದುಎಚ್ಚರಿಸಿದರು. ಧರಣಿಯ ನಂತರಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next