Advertisement
ಡಿ. 27ರ ಮಧ್ಯಾಹ್ನ 12.10ಕ್ಕೆ ಆಗಮಿಸುವ ರಾಷ್ಟ್ರಪತಿಯವರು ಒಂದು ತಾಸು ಉಡುಪಿಯಲ್ಲಿರುತ್ತಾರೆ. ಕೇಂದ್ರ ಸಚಿವೆ, ಶ್ರೀಗಳ ಶಿಷ್ಯೆ ಉಮಾಭಾರತಿ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಪಾಲ್ಗೊಳ್ಳುವರು.
ರಥಬೀದಿಯಲ್ಲಿ ಸಭೆ ನಡೆಸಲು ಇಕ್ಕಟ್ಟಾಗುತ್ತದೆ. ರಾಜಾಂಗಣದ ಪಾರ್ಕಿಂಗ್ ಪ್ರದೇಶ ತೆರೆದ ಸ್ಥಳವಾದ ಕಾರಣ ಭದ್ರತಾ ದೃಷ್ಟಿಯಿಂದ ಸೂಕ್ತವಲ್ಲ. ರಾಜಾಂಗಣ ಸಭಾಂಗಣವು ಆವರಣ ಹೊಂದಿರುವುದರಿಂದ ಇದು ಸೂಕ್ತ ಎಂಬ ಅಭಿಪ್ರಾಯ ಬಂತು. “ಇಲ್ಲಿ ಸಭೆ ಮಾಡಿದರೆ ವೇದಿಕೆಯಿಂದ 30 ಮೀ. ಅಂತರ ಖಾಲಿ ಬಿಡಬೇಕು. ಬಹುತೇಕ ಅರ್ಧಾಂಶ ಸಭಾಂಗಣದಲ್ಲಿ ಮಾತ್ರ ಜನರು ಕುಳಿತುಕೊಳ್ಳಬಹುದು. ಮೇಲ್ಭಾಗದಲ್ಲಿ ಕುಳಿತುಕೊಳ್ಳಲು ಅವಕಾಶಗಳಿಲ್ಲ’ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಅಧಿಕಾರಿ ಪ್ರಹ್ಲಾದ ಆಚಾರ್ಯ ತಿಳಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ, ಕಾರ್ಯಕ್ರಮಕ್ಕೆ ಒಂದು ತಾಸು ಮುನ್ನ ಆಹ್ವಾನಿತರು ಸಭೆಯಲ್ಲಿ ಆಸೀನರಾಗಬೇಕು. ಶ್ರೀ ಕೃಷ್ಣಮಠ ಪರಿಸರದ 100 ಮೀ. ಸುತ್ತಲಿನ ಎಲ್ಲ ಅಂಗಡಿಗಳನ್ನು ಮುಚ್ಚ ಬೇಕು. ಆಗಮಿಸುವ ವಿಐಪಿಗಳಿಗೆ ಪಾಸ್ ನೀಡಬೇಕು. ಅವರು ಪಾಸ್‌ನೊಂದಿಗೆ ಗುರುತು ಚೀಟಿಯನ್ನು ತರಬೇಕು. ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಆ ದಿನ ಮಠದ ಪರಿಸರವನ್ನು ಎನ್‌ಎಸ್‌ಜಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ರಾಜಾಂಗಣದ ಸಮೀಕ್ಷೆ ನಡೆಸಿದ್ದೇವೆ. ಅಂತಿಮ ನಿರ್ಣಯವನ್ನು ಎನ್‌ಎಸ್‌ಜಿ ತೆಗೆದುಕೊಳ್ಳುತ್ತದೆ ಎಂದರು.
Related Articles
Advertisement