Advertisement

ಲತಾ ಮಂಗೇಶ್ಕರ್‌ ನಿವಾಸಕ್ಕೆ ರಾಷ್ಟ್ರಪತಿ ಕೋವಿಂದ್‌

10:44 AM Aug 19, 2019 | sudhir |

ಮುಂಬಯಿ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್‌ ಅವರ ನಿವಾಸಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರವಿವಾರ ಭೇಟಿ ನೀಡಿದರು.

Advertisement

ಮುಂಬಯಿ ರಾಜಭವನದಲ್ಲಿ ಬಂಕರ್‌ ಮ್ಯೂಸಿಯಂ ಉದ್ಘಾಟನೆ ಕಾರ್ಯಕ್ರಮದ ಬಳಿಕ ಕೋವಿಂದ್‌ ಅವರು ಲತಾ ಅವರ ಮನೆಗೆ ಭೇಟಿ ನೀಡಿದರು. ಕೋವಿಂದ್‌ ಅವರು ತಮ್ಮ ಭೇಟಿಯನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಲತಾ ಅವರ ಉತ್ತಮ ಆರೋಗ್ಯಕ್ಕಾಗಿ ಶುಭ ಕೋರಿದ್ದೇವೆ.

ತಮ್ಮ ಧ್ವನಿಯ ಮೂಲಕ ನಮ್ಮ ಬದುಕನ್ನು ಅವರು ಇನ್ನಷ್ಟು ಸಿಹಿಯಾಗಿಸಿದವರು. ತಮ್ಮ ಸರಳ ಜೀವನದ ಮೂಲಕ ಸ್ಫೂರ್ತಿಯಾದವರು ಎಂದು ಕೋವಿಂದ್‌ ಹೇಳಿಕೊಂಡಿದ್ದಾರೆ. ಇದಕ್ಕೆ ಲತಾ ಅವರೂ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ರಾಷ್ಟ್ರಪತಿಯವರ ಭೇಟಿ ನಿಜಕ್ಕೂ ಹೆಮ್ಮೆ ತಂದಿದೆ. ಅವರ ಭೇಟಿ ಖುಷಿ ತಂದಿದೆ ಎಂದು ಹೇಳಿದ್ದಾರೆ. ಭೇಟಿ ಕುರಿತ ಫೋಟೋಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next