Advertisement

ರಾಷ್ಟ್ರಪತಿ ಭೇಟಿ ಹಿನ್ನೆಲೆ: ಶ್ರೀಕೃಷ್ಣ ಮಠ ದರ್ಶನ ನಿರ್ಬಂಧ

12:53 PM Dec 26, 2018 | Harsha Rao |

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಡಿ. 27ರಂದು ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6ರಿಂದ ಅಪರಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನ, ಭೋಜನ, ಪ್ರಸಾದ ವಿತರಣೆ ನಡೆಯುವುದಿಲ್ಲ. 

Advertisement

ಅಪರಾಹ್ನ 12.10ಕ್ಕೆ ರಾಷ್ಟ್ರಪತಿಗಳು ಶ್ರೀ ಪೇಜಾವರ ಮಠಕ್ಕೆ ಭೇಟಿ ಕೊಡಲಿದ್ದು 12.40ರ ವರೆಗೆ ಪೇಜಾವರ ಸ್ವಾಮೀಜಿಯವರ ಜತೆ ಮಾತುಕತೆ ನಡೆಸಲಿದ್ದಾರೆ. 12.45ಕ್ಕೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ, ಪ್ರಸಾದ ಸ್ವೀಕರಿಸಿದ ಬಳಿಕ 1.05 ಗಂಟೆಗೆ ನಿರ್ಗಮಿಸುವರು. ಈ ಹಿನ್ನೆಲೆಯಲ್ಲಿ ಆ ದಿನ ಬೆಳಗ್ಗೆ 8 ಗಂಟೆಯೊಳಗೆ ಶ್ರೀಕೃಷ್ಣ ಮಠದ ಎಲ್ಲ ಪೂಜೆಗಳನ್ನು ಸ್ವಾಮೀಜಿಯವರು ನೆರವೇರಿಸುವರು. 

ಪೇಜಾವರ ಮಠಕ್ಕೆ ಸುಣ್ಣಬಣ್ಣ!
ಪೇಜಾವರ ಮಠದಲ್ಲಿ ಸುಣ್ಣ ಬಣ್ಣ ಕೊಡುವ ಕೆಲಸ ಭರದಿಂದ ನಡೆಯುತ್ತಿದೆ.  ಏರ್‌ ಕೂಲರ್‌ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೇಜಾವರ ಮಠದಲ್ಲಿರುವ ವಿದ್ಯಾರ್ಥಿಗಳನ್ನು  ಪ್ರಹ್ಲಾದ ಗುರುಕುಲಕ್ಕೆ ಸ್ಥಳಾಂತರಿಸಲಾಗಿದೆ. ರಾಮ ವಿಟuಲ ಸಭಾಭವನ ಮತ್ತು ಪೇಜಾವರ ಮಠದ ಎರಡು ಛತ್ರಗಳಲ್ಲಿ ಶಿಷ್ಟಾಚಾರದಂತೆ ಭದ್ರತಾ ಪಡೆಯವರಿಗೆ ಕೊಠಡಿಗಳನ್ನು ಕಾದಿರಿಸಲಾಗಿದೆ. ರಥಬೀದಿಯ ಸುತ್ತಲಿನ ಛತ್ರಗಳ ಕೋಣೆಗಳನ್ನು ಪೊಲೀಸರಿಗೆ ಬಿಟ್ಟುಕೊಡಲಾಗಿದೆ. ಇದರೊಂದಿಗೆ ರಥಬೀದಿ ಸುತ್ತಲಿನ ಅಂಗಡಿಗಳನ್ನು ಡಿ.26ರ ಮಧ್ಯಾಹ್ನ 12ರಿಂದ ಡಿ.27ರ ಅಪರಾಹ್ನ 4 ಗಂಟೆಯವರೆಗೆ ಮುಚ್ಚಲು ಸೂಚಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next