Advertisement
ರಾಷ್ಟ್ರಪತಿ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಮುಖ್ಯ ಅರ್ಚಕರಾದ ರಾಜೇಶ್ ಆಚಾರ್ಯ, ಸುಧೀರ್ ಆಚಾರ್ಯ, ಸಹಾಯಕ ಅರ್ಚಕರಾದ ಅಖೀಲೇಶ್, ಪ್ರಸಾದ್, ಶ್ರೀನಿವಾಸ್ ಪೂಜಾ ವಿಧಿ ನೆರವೇರಿಸಿದರು.
Related Articles
ರಾಷ್ಟ್ರಪತಿಗಳಿಂದ ಲೋಕಾರ್ಪ ಣೆಗೊಂಡಿರುವ ಜನರಲ್ ತಿಮ್ಮಯ್ಯ ಜನರ ಗಮನಸೆಳೆಯುತ್ತಿದೆ. ಈ ಮನೆಯಲ್ಲೇ ತಿಮ್ಮಯ್ಯ ಅವರು ಬಾಲ್ಯದ ದಿನಗಳನ್ನು ಕಳೆದಿದ್ದರು.
ಮ್ಯೂಸಿಯಂನ ಆವರಣದಲ್ಲಿ 1947ರ ಬಳಿಕ ರಾಷ್ಟ್ರ ರಕ್ಷಣೆಗೆ ಬಲಿದಾನ ಗೈದ ಯೋಧರ ಸ್ಮರಣಾರ್ಥ ಸಜ್ಜುಗೊಳಿಸಿರುವ ಯುದ್ಧ ಸ್ಮಾರಕ ಕಣ್ಮನ ಸೆಳೆೆಯುತ್ತದಾದರೆ, ರಷ್ಯಾ ನಿರ್ಮಿತ ಭಾರತೀಯ ಸೇನೆಯ ಹಲ ವಾರು ಯುದ್ಧಗಳಲ್ಲಿ ಬಳಸಲಾಗಿದ್ದ ಹಿಮ್ಮತ್ ಹೆಸರಿನ ಟಿ.50 ಯುದ್ಧ ಟ್ಯಾಂಕರ್, ಮಿಗ್-20 ಯುದ್ಧ ವಿಮಾನ ಗಮನ ಸೆಳೆಯುತ್ತದೆ.
ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ಬದುಕು, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡ ಬಹುದಾಗಿದೆ.
ಭಾರತೀಯ ಸೇನಾಧಿಕಾರಿಯಾಗಿ ಜನರಲ್ ತಿಮ್ಮಯ್ಯ ಅವರು ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತುಸಂಗ್ರಹಾಲಯದಲ್ಲಿದೆ.
Advertisement
ಮಡಿಕೇರಿ, ಫೆ. 6: ರಾಷ್ಟ್ರಪತಿಗಳ ತಲ ಕಾವೇರಿ ಭೇಟಿ, ಮ್ಯೂಸಿಯಂ ಉದ್ಘಾ ಟನೆ ಇವೆಲ್ಲವು ಬೆರಳೆಣಿಕೆಯ ಗಣ್ಯರ ಸಮ್ಮುಖದಲ್ಲಿ ನಡೆದವು. ಅವರು ಸಾಗುವ ಮಾರ್ಗಗಳಲ್ಲೆಲ್ಲ ಬಿಗಿ ಪಹರೆ ಇತ್ತು. ಇದರ ನಡುವೆ ರಾಷ್ಟ್ರದ ಪ್ರಥಮ ಪ್ರಜೆಯನ್ನು ಕಾಣುವುದು ಅಸಾಧ್ಯದ ಮಾತು. ಆದರೂ ಕನಿಷ್ಠ ಕಾರಿನೊಳಗೆ ಕುಳಿತ ರಾಷ್ಟ್ರಪತಿಗಳನ್ನಾದರೂ ನೋಡಬಹುದೆಂದು ಮ್ಯೂಸಿಯಂ ಬಳಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸಿಬಂದಿಹಾಗೂ ಸಾರ್ವಜನಿಕರು ಕಾದುಕುಳಿತಿ ದ್ದರು. ರಾಷ್ಟ್ರಪತಿಗಳು ಅವರನ್ನು ನಿರಾಸೆ ಗೊಳಿಸಲಿಲ್ಲ. ವಿಶೇಷ ವಾಹನದಲ್ಲಿ ತೆರಳುತ್ತಿದ್ದ ಅವರು ಜಿಲ್ಲಾಸ್ಪತ್ರೆಯ ಬಳಿ ಕಾರಿನಿಂದಿಳಿದು ಜನರತ್ತ ಕೈಬೀಸಿ ಹರ್ಷ ಮೂಡಿಸಿದರು.
ಈ ಹಿಂದೆ ಕೊಡಗಿಗೆ 1982ರಲ್ಲಿ ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆಗಾಗಿ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಭೇಟಿ ನೀಡಿದ್ದರೆ, 2006ರ ಎ. 7ರಂದು 11ನೇ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜನರಲ್ ತಿಮ್ಮಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಗೆ ಬಂದಿದ್ದರು. ರಾಮನಾಥ ಅವರು ಇದೀಗ ಕೊಡಗಿಗೆ ಭೇಟಿ ನೀಡಿರುವ ತೃತೀಯ ಹಾಗೂ ದೇಶದ 14ನೇ ರಾಷ್ಟ್ರಪತಿಯಾಗಿದ್ದಾರೆ.
ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಷ್ಟ್ರಪತಿಯವರು ಹೆಲಿಪ್ಯಾಡ್‌ನಿಂದ ಸುದರ್ಶನ ಅತಿಥಿ ಗೃಹಕ್ಕೆ ತೆರಳುವ ಮಾರ್ಗದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಪೂರ್ವಾಹ್ನ 11 ರಿಂದ ಸಂಜೆ 5ರ ವರೆಗೆ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದ್ದರೂ ಬಹು ತೇಕ ಅಂಗಡಿ ಮುಂಗಟ್ಟುಗಳು ಬೆಳಗಿನಿಂದಲೇ ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ವಿರಳವಾಗಿತ್ತು. ಇದ ರಿಂದಾಗಿ ಮಡಿಕೇರಿ ನಗರದಲ್ಲಿ ಅಘೋಷಿತ ಬಂದ್‌ನ ವಾತಾವರಣ ನಿರ್ಮಾಣ ವಾಗಿತ್ತು. ಕೆಎಸ್ಸಾರ್ಟಿಸಿ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ನಿಲ್ದಾಣದಲ್ಲೇ ಸಂಜೆಯವರೆಗೆ ಕಾಯು ವಂತಾಯಿತು.