Advertisement

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

07:33 PM Sep 27, 2020 | Hari Prasad |

ಹೊಸದಿಲ್ಲಿ: ದೇಶದ ರೈತರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಅವರ ಬೆಲೆಗಳನ್ನು ದಲ್ಲಾಳಿ ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಮೂರು ಪ್ರಮುಖ ರೈತ ಮಸೂದೆಗಳಿಗೆ ರಾಷ್ಟ್ರಪತಿಯವರು ಇಂದು ತಮ್ಮ ಅಂಕಿತವನ್ನು ಹಾಕಿದ್ದಾರೆ.

Advertisement

ಈ ಮೂರೂ ವಿವಾದಾತ್ಮಕ ಮಸೂದೆಗಳು ಸಂಸತ್ತಿನಲ್ಲಿ ಇತ್ತೀಚೆಗಷ್ಟೇ ಅನುಮೋದನೆಯನ್ನು ಪಡೆದುಕೊಂಡಿದ್ದವು. ದೇಶದ ರೈತರ ಹಿತಕ್ಕೆ ಮಾರಕವಾಗಿರುವ ಹಾಗೂ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಕೂಡಿರುವ ಈ ರೈತ ವಿರೋಧಿ ಮಸೂದೆಗಳನ್ನು ಸಂಸತ್ತಿನ ನಿಯಮಾವಳಿಗಳನ್ನು ‘ಗಾಳಿಗೆ ತೂರಿ’ ‘ಅಸಂವಿಧಾನಿಕವಾಗಿ’ ಮಂಜೂರು ಮಾಡಿಕೊಂಡಿರುವುದರಿಂದ ಈ ಮಸೂದೆಗಳಿಗೆ ಸಹಿ ಹಾಕಬಾರದು ಎಂದು 12ಕ್ಕೂ ಹೆಚ್ಚು ವಿರೋಧ ಪಕ್ಷಗಳು ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿದ್ದವು.

ಈ ಮೂಲಕ, ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಹಾಗೂ ಸೌಲಭ್ಯ) ಮಸೂದೆ, 2020, ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಬೆಲೆ ಖಚಿತತೆ ಒಪ್ಪಂದ ಹಾಗೂ ರೈತ ಸೇವಾ ಮಸೂದೆ, 2020 ಹಾಗೂ ಅತ್ಯಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ, 2020 ಈ ಮೂರು ಮಸೂದೆಗಳಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಇಂದು ತಮ್ಮ ಅಂಕಿತವನ್ನು ಹಾಕಿದ್ದಾರೆ.

ರಾಷ್ಟ್ರಪತಿಯವರ ಅಂಕಿತದ ಬೆನ್ನಲ್ಲೇ ಕೇಂದ್ರ ಸರಕಾರವು ಈ ಮೂರೂ ಮಸೂದೆಗಳನ್ನು ಗಜೆಟ್ ನೋಟಿಫಿಕೇಶನ್ ಮಾಡಿದ್ದು ಶೀಘ್ರದಲ್ಲೇ ಇವುಗಳು ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next