ಹೊಸದಿಲ್ಲಿ: 70 ನೇ ಗಣರಾಜ್ಯೋತ್ಸವದ ಸಂಭ್ರಮದ ಮುನ್ನಾ ದಿನ ಶುಕ್ರವಾರ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು, ನಾವು ಇನ್ನು ಸಾಗಬೇಕಾದ ದೂರ ಬಹಳಷ್ಟಿದೆ. ನಮ್ಮಲ್ಲಿ ಹೊಸ ಮಾನದಂಡಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಸಮಾಜದ ಎಲ್ಲಾ ವರ್ಗದ ಜನರು ಪ್ರಗತಿ ಹೊಂದಿದ ರಾಷ್ಟ್ರವನ್ನಾಗಿ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಸಂದೇಶ ನೀಡಿದ್ದಾರೆ.
ಕಲ್ಯಾಣ ಎನ್ನುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಕಂಬವಾಗಿದೆ. ಧರ್ಮ ,ಜಾತಿ ಮತ್ತು ಲಿಂಗ ಬೇಧವಿಲ್ಲದೆ ದೇಶದ ಸಂಪನ್ಮೂಲಗಳ ಮೇಲೆ ಸಮಾನ ಹಕ್ಕುಗಳಿವೆ ಎಂದರು.
ಮಹಿಳಾ ಸಬಲೀಕರಣದ ಮೂಲಕ ಸಮಾಜ ಬದಲಾವಣೆ ಕಾಣುತ್ತಿದೆ. ಕ್ರೀಡೆ ಮತ್ತು ಇತರ ಕ್ಷೇತ್ರಗಳನ್ನು ಹೊರತು ಪಡಿಸಿ ಸೇನಾ ವಲಯದಲ್ಲೂ ಹೊಸ ಎತ್ತರಕ್ಕೆ ನಮ್ಮ ಹೆಣ್ಣು ಮಕ್ಕಳು ಏರಿದ್ದಾರೆ ಎಂದರು.
ನಾವು ಇಂದು ತೆಗೆದುಕೊಳ್ಳುವ ನಿರ್ಧಾರ ನಾಳಿನ ಹೊಸ ಭಾರತಕ್ಕೆ ನಾಂದಿಯಾಗುತ್ತದೆ ಎಂದರು.
ಈ ವರ್ಷ ನಮಗೆ ಮತ ಚಲಾವಣೆ ಮಾಡಲು ಇದೆ. ಇದು ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರು.