Advertisement

President of India Murmu ಭೇಟಿ: ಸ್ಕಂದಗಿರಿ, ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ

07:37 PM Jun 30, 2023 | Team Udayavani |

ಚಿಕ್ಕಬಳ್ಳಾಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸಮೀಪ ಇರುವ ಸತ್ಯಸಾಯಿ ಗ್ರಾಮಕ್ಕೆ ಜುಲೈ 3 ರಂದು ಸೋಮವಾರ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಜುಲೈ 2 ಮತ್ತು 3 ರಂದು ನಂದಿಗಿರಿಧಾಮ ಹಾಗೂ ಸ್ಕಂದಗಿರಿಗೆ ಆಗಮಿಸುವ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

Advertisement

ಜಿಲ್ಲೆಗೆ ರಾಷ್ಟ್ರಪತಿಗಳು ಆಗಮನದ ಹಿನ್ನಲೆಯಲ್ಲಿ ಅತಿ ಗಣ್ಯರ ಭದ್ರತೆ ದೃಷ್ಠಿಯಿಂದ ಜುಲೈ 2 ರ ಭಾನುವಾರ ಬೆಳಗ್ಗೆ 6 ರಿಂದ ಜುಲೈ 3 ಸೋಮವಾರ ಸಂಜೆ 6 ಗಂಟೆವರಗೂ ಪ್ರವಾಸಿಗರಿಗೆ ನಂದಿಬೆಟ್ಟ ಹಾಗೂ ಚಾರಣಕ್ಕೆ ಹೆಸರುವಾಸಿಯಾದ ಸ್ಕಂದಗಿರಿಬೆಟ್ಟದ ಪ್ರವೇಶ ಸಿಗುವುದಿಲ್ಲ.ಭಾರತೀಯ ದಂಡ ಸಂಹಿತೆ 1973 ಸೆಕ್ಷನ್ 144 (3) ರಡಿ ಜಿಲ್ಲಾಧಿಕಾರಿಗಳಿಗೆ ಇರುವ ಅಧಿಕಾರವನ್ನು ಚಲಾಯಿಸಿ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈ ಆದೇಶವನ್ನು ಹೊರಡಿಸಿದ್ದಾರೆ.

ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ವಾರಾಂತ್ಯದ ವೇಳೆ ಜಿಲ್ಲೆಯ ವಿವಿಧಡೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಜುಲೈ 3 ರಂದು ಸೋಮವಾರ ಸಂಜೆ 4:15ಕ್ಕೆ ದೆಹಲಿಯಿಂದ ನೇರವಾಗಿ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿಗಳಾದ ದ್ರೌಪದಿ ಮರ್ಮು ಆಗಮಿಸಿ ಶ್ರೀ ಸತ್ಯಸಾಯಿ ಮಾನವ ಅಭುದ್ಯಯ ವಿಶ್ವ ವಿದ್ಯಾಲಯದ 2ನೇ ವರ್ಷದ ಘಟಿಕೋತ್ಸವದಲ್ಲಿ ಪಾಲ್ಗೊಂಡು 6 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ಹಾಗೂ ವಿವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next