Advertisement

ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕಿದೆ: ರಾಷ್ಟ್ರಪತಿ ಮುರ್ಮು

10:56 PM Sep 27, 2022 | Team Udayavani |

ಬೆಂಗಳೂರು: ಸಾಂಪ್ರದಾಯಿಕ ಸವಾಲುಗಳ ಜತೆಗೆ ಅನಿರೀಕ್ಷಿತ ಸವಾಲುಗಳಿಗೂ ಇಂದು ನಮ್ಮ ವಿಜ್ಞಾನಿಗಳ ಸಮುದಾಯ ಸಜ್ಜಾಗ ಬೇಕಿದ್ದು, ಅದರೊಂದಿಗೆ ಭವಿಷ್ಯದ ಭಾರತವನ್ನು ಮರುವ್ಯಾಖ್ಯಾನ ಅಗತ್ಯ ಇದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

Advertisement

ನಗರದ ಹಿಂದೂಸ್ಥಾನ್‌ ಏರೋ ನಾಟಿಕ್ಸ್‌ ಲಿ., (ಎಚ್‌ಎಎಲ್‌) ಆವರ ಣದಲ್ಲಿ ಮಂಗಳವಾರ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಏಕೀಕೃತ ಕ್ರಯೋಜೆನಿಕ್‌ ಎಂಜಿನ್‌ ತಯಾರಿ ಸೌಲಭ್ಯ (ಐಸಿಎಂಎಫ್) ಉದ್ಘಾಟನೆ ಹಾಗೂ ವರ್ಚುವಲ್‌ ಆಗಿ ದಕ್ಷಿಣ ವಲಯದ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಸವಾಲು ನಮಗೆ ಹೊಸ ಪಾಠವನ್ನು ಕಲಿಸುತ್ತದೆ ಎಂದರು.

ನಿಯಮಿತವಾಗಿ ಎದುರಾಗುವ ಸವಾಲುಗಳ ಜತೆಗೆ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕು. ಇದಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರಕಾರ ಉತ್ತೇಜನ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ದಕ್ಷಿಣ ರಾಜ್ಯಗಳಿಗೆ ಅನುಕೂಲ: ಭಾರತಿ ಪವಾರ್‌
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಭಾರತಿ ಪವಾರ್‌ ಮಾತನಾಡಿ, ಪ್ರಸ್ತುತ ಇರುವ ವೈರಾಲಜಿ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಿತ್ತು. ಯಾವುದೇ ವೈರಾಲಜಿಗೆ ಸಂಬಂಧಿಸಿದ ಮಾದರಿಗಳನ್ನು ಉತ್ತರದ ಭಾಗಕ್ಕೆ ಕಳುಹಿಸಬೇಕಿತ್ತು. ಈಗ ಬೆಂಗಳೂರಿನಲ್ಲಿ ನಿರ್ಮಾಣ ಗೊಳ್ಳುವುದರಿಂದ ದಕ್ಷಿಣ ಭಾಗದ ಎಲ್ಲ ರಾಜ್ಯಗಳಿಗೂ ತುಂಬಾ ಅನುಕೂಲ ಆಗಲಿದೆ ಎಂದು ಹೇಳಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್, ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌, ಎಚ್‌ಎಎಲ್‌ ಅಧ್ಯಕ್ಷ ಅನಂತಕೃಷ್ಣ, ಇಸ್ರೋ ಅಧ್ಯಕ್ಷ ಸೋಮನಾಥ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಬೆಂಗಳೂರು ಬಾಹ್ಯಾಕಾಶದ ತೊಟ್ಟಿಲು: ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಐಟಿ-ಬಿಟಿ ನಗರಿಯು ದೇಶದ ಬಾಹ್ಯಾಕಾಶದ ನಗರವೆಂದು ಪರಿಗಣಿಸಲ್ಪಟ್ಟಿದೆ. ಶೇ.65 ಏರೋಸ್ಪೇಸ್‌ ಭಾಗಳನ್ನು ಬೆಂಗಳೂರಿನಿಂದ ರಫ್ತು ಮಾಡಲಾಗುತ್ತಿದೆ. ಶೇ. 60 ರಕ್ಷಣ ಸಾಮಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ. 25ರಷ್ಟು ಏರೋಸ್ಪೇಸ್‌ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿವೆ. ಆದ್ದರಿಂದ ಬೆಂಗಳೂರು ಬಾಹ್ಯಾಕಾಶ ತಂತ್ರ ಜ್ಞಾನದ ತಾಯಿ ಹಾಗೂ ಹಬ್‌ ಎಂದು ಖ್ಯಾತಿ ಪಡೆದಿದೆ. ಹೈಬ್ರಿಡ್‌ ಕ್ರಯೋಜೆನಿಕ್‌ ಎಂಜಿನ್‌ ಅನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದ್ದು ಎಚ್‌ಎಎಲ್‌ ಶೀಘ್ರದಲ್ಲೇ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದರು.

ಎಚ್‌ಎಎಲ್‌ನಿಂದಲೇ ರಾಕೆಟ್‌
ಪಿಎಸ್‌ಎಲ್‌ವಿ ಸಂಪೂರ್ಣ ರಾಕೆಟ್‌ ನಿರ್ಮಾಣಕ್ಕೆ ಸಂಬಂಧಿಸಿ ಎಚ್‌ಎಎಲ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳ ಲಾಗಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ತಿಳಿಸಿದರು. ಎಚ್‌ಎಎಲ್‌ ಸಹಯೋಗದಲ್ಲಿ ಸದ್ಯಕ್ಕೆ
ಐಸಿಎಂಎಫ್ ರೂಪು ಗೊಂಡರೂ, ಭವಿಷ್ಯದಲ್ಲಿ ಸಂಪೂರ್ಣವಾಗಿ ರಾಕೆಟ್‌ಗಳ ತಯಾರಿಸಲು ಇದು ಪೂರಕವಾಗಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next