Advertisement

ಗೋವಿಂದನ ದರ್ಶಿಸಿದ ಕೋವಿಂದರು!

06:00 AM Dec 28, 2018 | |

ಉಡುಪಿ: ಜಗತ್ಪತಿ ಶ್ರೀ ಕೃಷ್ಣನ ನಾಡಿಗೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದರು ರಾಮರಾಜ್ಯದ ಆದರ್ಶ ಆಡಳಿತ ಎಲ್ಲರೂ ಪಾಲಿಸಬೇಕು ಎಂದು ಆಶಿಸಿದರು.

Advertisement

ಸನ್ಯಾಸಾಶ್ರಮವಾಗಿ 80ನೇ ವರ್ಧಂತಿಯಲ್ಲಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಿಗೆ ಗೌರವ ಸಲ್ಲಿಸಲು ತಮ್ಮ ಪತ್ನಿ ಸವಿತಾರೊಂದಿಗೆ ಆಗಮಿಸಿದ್ದ ರಾಷ್ಟ್ರಪತಿಯವರು, ಶ್ರೀಗಳಿಗೆ ಗೌರವ ಸಲ್ಲಿಸಿದರು.

11.40ಕ್ಕೆ ನಗರಕ್ಕಾಗಮಿಸಿ, ಪೇಜಾವರ ಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿಯವರು ಸುಮಾರು ಒಂದು ಗಂಟೆ ಅವಧಿ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದು, ಪರ್ಯಾಯ ಶ್ರೀ ಪಲಿಮಾರು ಮಠದ ಸ್ವಾಮಿಯವರಿಂದ ಗೌರವ ಸ್ವೀಕರಿಸಿ ವಾಪಸು ತೆರಳಿದರು. ಒಟ್ಟೂ ಇಡೀ ಕಾರ್ಯಕ್ರಮ ಗುರುವಂದನೆಯ ಪೂಜ್ಯ ಭಾವನೆಯೊಂದಿಗೆ ಮೇಳೈಸಿತ್ತು. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ರಾಷ್ಟ್ರಪತಿಯವರನ್ನು ಗೌರವಿಸಿ, ರಾಷ್ಟ್ರದ ಪ್ರತಿನಿಧಿ ರಾಷ್ಟ್ರಪತಿ. ಶ್ರೀಕೃಷ್ಣನ ಅನುಗ್ರಹ ಅವರಿಗೆ ಆಗುವುದೆಂದರೆ ರಾಷ್ಟ್ರಕ್ಕೆ ಆದಂತೆ. ಗೋವಿಂದನ ತತ್ಸಮ ರೂಪ ಕೋವಿಂದರಾಗಿದ್ದೀರಿ ಎಂದರು. 
ರಾಷ್ಟ್ರಪತಿಯವರು ಪೇಜಾವರ ಸ್ವಾಮೀಜಿಯವರಿಗೆ ಶಾಲು ಹೊದೆಸಿ ಗೌರವ ಸಲ್ಲಿಸಿದರು. ಅವರ ಧರ್ಮ ಪ್ರಸಾರ ಕಾರ್ಯ ಮುಂದುವರಿಯಲಿ. ಸ್ವಾಮೀಜಿ ಶತಾಯುಷಿಗಳಾಗಲಿ ಎಂದು ಹಾರೈಸಿದರು.

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ರಾಷ್ಟ್ರಪತಿ ಯವರನ್ನು ಗೌರವಿಸಿ ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಉಡುಪಿ ಕ್ಷೇತ್ರ ಸಂಗಮವಾಗಿದೆ ಎಂದರು.

ಬೆಳಗ್ಗೆ 10.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ರಾಷ್ಟ್ರಪತಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು. 

Advertisement

ರಾಷ್ಟ್ರಪತಿ ಆಗಮನ,ನಿರ್ಗಮನದ ಸಮಯ
11.24:    ಆದಿಉಡುಪಿ ಹೆಲಿ ಪ್ಯಾಡ್‌ಗೆ ಆಗಮನ
11.27:    ರಥಬೀದಿಯತ್ತ ಪ್ರಯಾಣ 
11.40:    ಉಡುಪಿ ನಗರಕ್ಕೆ ಆಗಮನ
11.45:    ಪೇಜಾವರ ಮಠಕ್ಕೆ ಭೇಟಿ
12.20:    ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ
12.50:    ಶ್ರೀಕೃಷ್ಣಮಠದಿಂದ ನಿರ್ಗಮನ
01.00:    ಹೆಲಿಪ್ಯಾಡ್‌ನಿಂದ ಮಂಗಳೂರಿನತ್ತ

Advertisement

Udayavani is now on Telegram. Click here to join our channel and stay updated with the latest news.

Next