Advertisement

ಅಧ್ಯಕ್ಷ ಇನ್ ಅಮೆರಿಕಾ: ಅಲ್ಲಿ ನಡೆಯೋ ಕಥೆಗೆ ಇಲ್ಲಿನ ನಂಟಿದೆ!

12:01 PM Oct 05, 2019 | Naveen |

ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ಈ ವಾರ ತೆರೆಗಾಣುತ್ತಿದೆ. ಹೆಸರಿಗೆ ತಕ್ಕುದಾಗಿಯೇ ಈ ಚಿತ್ರದ ಹೆಚ್ಚಿನ ಸನ್ನಿವೇಶ ಅಮೆರಿಕದಲ್ಲಿಯೇ ನಡೆಯುತ್ತದೆ. ಇದರ ಬಹು ಭಾಗದ ಚಿತ್ರೀಕರಣವೂ ಅಮೆರಿಕದಲ್ಲಿಯೇ ನಡೆದಿದೆ. ಹಾಗೆಂದಾಕ್ಷಣ ಈ ಕಥೆಗೂ ನಮ್ಮ ನೆಲಕ್ಕೂ ಸಂಬಂಧವೇ ಇಲ್ಲ ಅಂದುಕೊಳ್ಳುವಂತಿಲ್ಲ. ಇಡೀ ಕಥೆಯ ಬೇರುಗಳಿರೋದು, ಈ ಮಜವಾದ ಕಥೆ ಬಿಚ್ಚಿಕೊಳ್ಳೋದು ಮೈಸೂರು ಭಾಗದ ಮಹಿಷೂರು ಎಂಬ ಹಳ್ಳಿಯಿಂದಲೇ!

Advertisement

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಟಿ ಜಿ ವಿಶ್ವಪ್ರಸಾದ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ನಿರ್ದೇಶಕ ಯೋಗಾನಂದ್ ನಮ್ಮ ನೇಟಿವಿಟಿಗೆ ಒಗ್ಗಿಸಿಕೊಂಡೇ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಮೂಲ ಕಥೆಯನ್ನು ಕ್ರಿಯಾಶೀಲವಾಗಿಯೇ ಈ ನೆಲದ ನಂಟಿಗೆ ಒಗ್ಗಿಸಿಕೊಂಡಿರೋ ಅವರು ಶರಣ್ ಪಾತ್ರದ ವಿಚಾರದಲ್ಲಿಯೂ ಹಾಗೆಯೇ ಮಾಡಿದ್ದಾರೆ.

ಮಹಿಷೂರೆಂಬೋ ಹಳ್ಳಿಯ ಅಧ್ಯಕ್ಷ ಅಮೆರಿಕಾ ಪಾಲಾದದ್ದರು ಸುತ್ತಲಿನ ಮಜವಾದ ಕಥೆಯಿರೋ ಈ ಸಿನಿಮಾದಲ್ಲಿ ಶರಣ್ ಕೂಡಾ ಹೊಸಾ ಬಗೆಯ ಶೇಡಿನಲ್ಲಿಯೇ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ, ಈ ಕಥೆಗೆ ಪೂರಕವಾಗಿ ಅಮೆರಿಕದಲ್ಲಿಯೇ ಬಹು ಭಾಗದ ಚಿತ್ರೀಕರಣ ನಡೆದಿದೆ. ಸಾಮಾನ್ಯವಾಗಿ ಅಮೆರಿಕಾದಂಥಾ ದೇಶಗಳಲ್ಲಿ ಚಿತ್ರೀಕರಣ ನಡೆಸೋದೆಂದರೆ ಅದು ಮಹಾ ಸಾಹಸ. ಯಾಕೆಂದರೆ, ಅಲ್ಲಿ ಹೆಜ್ಜೆ ಹೆಜ್ಜೆಗೂ ಕಾನೂನು ಕಟ್ಟಳೆಗಳ ತೊಡಕುಗಳು ಎದುರಾಗುತ್ತವೆ. ಆದರೆ ನಿರ್ಮಾಪಕ ವಿಶ್ವಪ್ರಸಾದ್ ಅವರು ಅಂಥಾ ಯಾವ ಕಂಟಕವೂ ಎದುರಾಗದಂತೆ, ಯಾವುದಕ್ಕೂ ಕಡಿಮೆಯಾಗದಂತೆ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರಂತೆ. ಅದೆಲ್ಲವೂ ಈ ವಾರ ಪ್ರೇಕ್ಷಕರ ಮುಂದೆ ಅನಾವರಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next