Advertisement
ಅಂದ ಹಾಗೆ ಪ್ರತಿಭಟನೆಗಳು ನಡೆದದ್ದು ಡೆಮಾಕ್ರಾಟ್ ಪಕ್ಷದ ಗವರ್ನರ್‌ಗಳು ಇರುವ ಮಿನ್ನೆಸೋಟಾ, ಮಿಚಿಗನ್, ವರ್ಜೀನಿಯಾದಲ್ಲಿ. ಈ ಹುಚ್ಚಾಟಕ್ಕೆ ಪ್ರಚೋದನೆ ನೀಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ, ‘ಲಿಬರೇಟ್’ ಎಂಬ ಟ್ವೀಟ್.
Related Articles
Advertisement
ಫ್ಲಾರಿಡ ಗವರ್ನರ್ ರಾನ್ ಡೆ ಸ್ಯಾಂಟಿಸ್ ಮಾತನಾಡಿ ಸ್ಥಳೀಯ ಆಡಳಿತ ಸಂಸ್ಥೆಗಳು ಸಾಮಾಜಿಕ ಅಂತರ ಮತ್ತು ವೈರಸ್ ತಡೆಯುವ ಅಂಶಗಳ ಬಗ್ಗೆ ಅವುಗಳಿಗೆ ಖಾತರಿ ಇದೆ ಎಂದಾದರೆ ಬೀಚ್‌ಗಳಿಗೆ ಮತ್ತು ಪಾರ್ಕ್‌ಗಳಿಗೆ ಪ್ರವೇಶ ನೀಡುವುದಕ್ಕೆ ಅವಕಾಶ ನೀಡಬಹುದು ಎಂದಿದ್ದಾರೆ. ಟೆಕ್ಸಸ್‌ನ ಗವರ್ನರ್ ಗ್ರೆಗ್ ಅಬ್ಬೊಟ್ ಮಾತನಾಡಿ ಸರಕಾರಿ ಸ್ವಾಮ್ಯದ ಉದ್ಯಾನವನಗಳು, ಕೆಲವೊಂದು ಸಣ್ಣ ಪ್ರಮಾಣದ ಮಳಿಗೆಗಳು ವಹಿವಾಟು ಶುರು ಮಾಡಬಹುದಾಗಿದೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ವಿವಿಯ ಸಂಶೋಧಕರು ಪ್ರತಿಪಾದಿಸಿದಂತೆ ವರ್ಜೀನಿಯಾ, ಮೊಂಟಾನಾ ಮತ್ತು ಹವಾಯಿ ಪ್ರಾಂತ್ಯಗಳು ಮೇ 4ರ ಸುಮಾರಿಗೆ ವಹಿವಾಟಿಗೆ ಅವಕಾಶ ನೀಡಬಹುದು. ಆದರೆ ಹೆಚ್ಚಿನ ಜನ ಸೇರುವಿಕೆಯನ್ನು ಕಡ್ಡಾಯವಾಗಿ ನಿಷೇಧಿಸಿದರೆ ಅದಕ್ಕೆ ಅವಕಾಶ ಸಿಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದರು. ಇದರ ಜತೆಗೆ ಈಗಾಗಲೇ ಸೋಂಕು ದೃಢಪಟ್ಟಿರುವವರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಿದರೆ ಮಾತ್ರ ಆ ಬಗ್ಗೆ ಯೋಚಿಸಬಹುದು ಎಂದು ಅವರು ಹೇಳಿದ್ದಾರೆ.
ಬೆಳವಣಿಗೆಗೆ ಕಾರಣಗಳೇನು?ಮಿಚಿಗನ್ ಗವರ್ನರ್, ಡೆಮಾಕ್ರಾಟ್ ಪಕ್ಷದ ನಾಯಕಿ ಗ್ರೆಚೆನ್ ವಿಟ್ಮರ್ ಕೆಲ ದಿನಗಳ ಹಿಂದೆ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಮ ಜಾರಿ ಮಾಡಿದ್ದರು. ಅದರ ವಿರುದ್ಧವೇ ಪ್ರತಿಭಟನೆಗಳು ಶುರುವಾಗಿದ್ದವು. ವರ್ಜೀನಿಯಾದಲ್ಲಿ ಗನ್ ಹೊಂದುವುದರ ಬಗ್ಗೆ ನಿಷೇಧ ಹೇರಿದ್ದಕ್ಕೆ ಈ ವರ್ಷದ ಆರಂಭದಲ್ಲಿ ಆಕ್ಷೇಪ, ಟೀಕೆಗಳು ಹೊರ ಹೊಮ್ಮಿದ್ದವು. ವರ್ಷಾಂತ್ಯಕ್ಕೆ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಹಾಲಿ ವರ್ಷದ ಆರಂಭದಲ್ಲಿ ಟ್ರಂಪ್ ಜನಪ್ರಿಯತೆಯ ಗ್ರಾಫ್ ಏರಿಕೆಯಲ್ಲಿತ್ತು. ಸೋಂಕು ಪ್ರಭಾವ ಹೆಚ್ಚಾಗುತ್ತಿದ್ದಂತೆ ಅವರು ಕೈಗೊಂಡ ಕ್ರಮಗಳಿಂದ ಅದು ಇಳಿಮುಖವಾಗಿದೆ. ಲಾಕ್‌ಡೌನ್ ತೆರೆಯಬೇಕು ಬೇಡ ಎಂಬ ಪರ ವಿರೋಧ ಅಭಿಪ್ರಾಯಗಳ ನಡುವೆ, ಅಧ್ಯಕ್ಷರ
ಟ್ವೀಟ್ ಈ ಎಲ್ಲ ಗಲಾಟೆಗಳಿಗೆ ಪ್ರೋತ್ಸಾಹ ನೀಡಿದಂತೆ ಆಯಿತು. ಜುಲೈಗೇ ತೆರವು ನಿರ್ಧಾರ ಸಾಧ್ಯತೆ
ಐಯೋವಾ, ಉತ್ತರ ಮತ್ತು ದಕ್ಷಿಣ ಡಕೋಟಾ, ನೆಬ್ರಾಸ್ಕಾ, ಉಟಾ (Utah) ಅರ್ಕನ್ಸಾಸ್ ಮತ್ತು ಓಕ್ಲಹಾಮಾ ಪ್ರಾಂತ್ಯಗಳು ಜೂನ್ ತಿಂಗಳ ಮಧ್ಯಭಾಗ ಅಥವಾ ಜುಲೈವರೆಗೆ ಪರಿಸ್ಥಿತಿಯನ್ನು ಕಾದು ನೋಡುವ ಬಗ್ಗೆ ಮಾತನಾಡಿವೆ. ಈಗಾಗಲೇ ಐವತ್ತು ಅಮೆರಿಕದ ಪ್ರಾಂತ್ಯಗಳು ಬಿಗಿಯಾಗಿರುವ ವೈರಸ್ ನಿಯಂತ್ರಕ ಕ್ರಮಗಳನ್ನು ಕೈಗೊಂಡಿವೆ. ಅರ್ಥ ವ್ಯವಸ್ಥೆಯ ವಹಿವಾಟುಗಳನ್ನು ತೆರೆಯಬೇಕೋ ಬೇಡವೋ ಎಂಬ ಬಗ್ಗೆ ಹೆಚ್ಚಿನ ಪ್ರಾಂತೀಯ ಸರಕಾರಗಳು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಟ್ವೀಟ್ ಪ್ರಚೋದನೆ: ಶನಿವಾರ ಸ್ವತಃ ಟ್ರಂಪ್ ಅವರು ಸರಣಿ ಟ್ವೀಟ್‌ಗಳನ್ನು ಮಾಡುತ್ತಾ, ಲಿಬರೇಟ್ ಮಿಚಿಗನ್, ಮಿನ್ನೆಸೋಟಾ, ವರ್ಜೀನಿಯಾ ಎಂದು ಬರೆದಿದ್ದಾರೆ. ಅವರ ಈ ವರ್ತನೆಗೆ ವಿಪಕ್ಷ ಡೆಮಾಕ್ರಾಟ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಬಂಡಾಯದ ಕಿಚ್ಚು ಹೊತ್ತಿಸಲು ಟ್ರಂಪ್ ಕುಮ್ಮಕ್ಕು ನೀಡುತ್ತಿದ್ದಾರೆ ಮತ್ತು ಸುಳ್ಳುಗಳ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಅವರು ಲಕ್ಷಾಂತರ ಮಂದಿಯ ಪ್ರಾಣವನ್ನು ಅಪಾಯದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಗವರ್ನರ್ ಜೇ ಇನ್ಸ್ಲೀ ಆರೋಪಿಸಿದ್ದಾರೆ. ಇದೇ ವೇಳೆ, ಟ್ವೀಟ್ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಟ್ರಂಪ್, ಈ ಮೂರೂ ರಾಜ್ಯಗಳ ಡೆಮಾಕ್ರಾಟ್ ಪಕ್ಷದ ಗವರ್ನರ್ ಗಳು ಪ್ರತಿಭಟನಾಕಾರರೊಡನೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ನಂತರ ತಮ್ಮ ಹೇಳಿಕೆಯನ್ನೇ ಬದಲಿಸಿದ ಟ್ರಂಪ್, ನಾನು ಟ್ವೀಟ್ ಮಾಡಿರುವುದು ಲಾಕ್ ಡೌನ್ ಗೆ ಸಂಬಂಧಿಸಿದ ವಿಚಾರಕ್ಕಲ್ಲ. ವರ್ಜೀನಿಯಾದಲ್ಲಿ ಜಾರಿ ಮಾಡಲಾದ ಗನ್ ನಿಯಂತ್ರಣ ಕಾಯ್ದೆಗೆ ಎಂದು ಉಲ್ಟಾ ಹೊಡೆದಿದ್ದಾರೆ. ಫ್ಲಾರಿಡಾ ಬೀಚ್‌ನಲ್ಲಿ ಜನವೋ ಜನ
ಇನ್ನು ಫ್ಲಾರಿಡಾ ಬೀಚ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ಶನಿವಾರ ಅವಕಾಶ ನೀಡಿದ್ದೇ ತಡ, ಕೇವಲ 30 ನಿಮಿಷಗಳ ಅವಧಿಯಲ್ಲಿ ಸಾವಿರಾರು ಮಂದಿ ಬೀಚ್‌ನಲ್ಲಿ ನೆರೆದಿದ್ದಾರೆ. ಫ್ಲಾರಿಡಾದಲ್ಲಿ 24 ಗಂಟೆಯ ಅವಧಿಯಲ್ಲಿ 1,421 ಮಂದಿಗೆ ಸೋಂಕು ದೃಢಪಟ್ಟು, 58 ಮಂದಿ ಮೃತಪಟ್ಟ ಸುದ್ದಿಯ ನಡುವೆಯೂ ಜನ ಕ್ಯಾರೇ ಇಲ್ಲದೆ ಸಮುದ್ರಕ್ಕಿಳಿದಿದ್ದಾರೆ. ಸೋಂಕಿನಿಂದ ತಮ್ಮ ದೇಶದಲ್ಲಿ ಉಂಟಾಗಿರುವ ಆಘಾತ, ಸವಾಲುಗಳ ನಡುವೆ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದದ್ದು ಗಮನಾರ್ಹವಾಗಿತ್ತು.