ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಷರತ್ತನ್ನು ಪಾಲಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿರುವ ಪಾಕಿಸ್ಥಾನ ಬುಧವಾರ ದಿಢೀರನೆ ಸಂಸತ್ ಅಧಿವೇಶನ ಕರೆದು, 170 ಶತಕೋಟಿ ಪಾಕ್ ರೂಪಾಯಿ ತೆರಿಗೆ ಸಂಗ್ರಹಿ ಸುವ ನಿಟ್ಟಿನಲ್ಲಿ ಮಿನಿ ಬಜೆಟ್ ಮಂಡಿಸಿ ದ್ದಾರೆ. ಮಂಡನೆಯಾಗುತ್ತಿದ್ದಂತೆಯೇ, ಪಾಕ್ ಜನ ತೆಗೆ ಬೆಲೆಯೇರಿಕೆಯ ಶಾಕ್ ತಟ್ಟಲಾರಂಭಿಸಿದೆ.
ಐಎಂಎಫ್ ಆರ್ಥಿಕ ನೆರವಿನ ಪ್ಯಾಕೇಜ್ ದೊರೆಯಬೇಕೆಂದರೆ, ಪಾಕಿಸ್ಥಾನವು 4 ತಿಂಗಳೊಳ ಗಾಗಿ ಹೆಚ್ಚುವರಿ ಆದಾಯವನ್ನು ಸಂಗ್ರಹಿಸಬೇಕು. ಪಾಕ್ ದಿವಾಳಿಯಾಗುವುದನ್ನು ತಡೆಯಬೇಕೆಂದರೆ ಐಎಂಎಫ್ ವಿಧಿಸಿರುವ ಷರತ್ತನ್ನು ಪೂರ್ಣಗೊಳಿಸಬೇಕು.
ಅದಾಗಬೇಕೆಂದರೆ, ಅಧಿವೇಶನದಲ್ಲಿ ಹಣಕಾಸು ಮಸೂದೆ ಅಂಗೀಕಾರಗೊಳ್ಳಬೇಕು. ಈ ಎಲ್ಲ ಅನಿವಾರ್ಯತೆಗೆ ಕಟ್ಟುಬಿದ್ದು ಪಾಕ್ ಮಿನಿ ಬಜೆಟ್ ಮಂಡಿಸಿದೆ.
ಮಿನಿ ಬಜೆಟ್‌ನಲ್ಲಿ ಘೋಷಿಸಿರುವಂತೆ, ಜಿಎಸ್ಟಿ ದರವನ್ನು ಶೇ.17ರಿಂದ ಶೇ.18ಕ್ಕೇರಿಸಲಾಗಿದೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ಕ್ಕೇರಿಸಲಾಗಿದೆ. ಸಿಗರೇಟು ಮತ್ತು ಸಕ್ಕರೆ ಯಿರುವ ಪಾನೀಯಗಳ ಮೇಲಿನ ಎಕ್ಸೆ„ಸ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳಿಗೆ ಶೇ.18 ತೆರಿಗೆ ವಿಧಿಸಲಾಗಿದೆ. ಸಿಮೆಂಟ್, ಮದುವೆ ಹಾಲ್ ಶುಲ್ಕ ಹೆಚ್ಚಳವಾಗಿದೆ.
ಕೈಬಿಟ್ಟ ಚೀನ: ಬುಧವಾರ “ತಾಂತ್ರಿಕ ಕಾರಣ’ಗಳ ನೆಪವೊಡ್ಡಿ ಪಾಕಿಸ್ಥಾನದಲ್ಲಿರುವ ತನ್ನ ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗವನ್ನು ಏಕಾಏಕಿ ಮುಚ್ಚಲು ಆದೇಶಿಸಿದೆ. ಪಾಕ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಎಚ್ಚರಿಕೆಯಿಂದ ಇರುವಂತೆ ತನ್ನ ನಾಗರಿಕರಿಗೆ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ತೈಲ ಬೆಲೆ ಮತ್ತೆ ಲೀ.ಗೆ 32 ರೂ. ಏರಿಕೆ?: ಬೆಲೆ ಯೇರಿಕೆಯಿಂದ ಕಂಗೆಟ್ಟಿರುವ ಪಾಕ್ ಜನತೆಗೆ ಸರಕಾರ ಮತ್ತೂಂದು ಬರೆ ಹಾಕಲು ಸಜ್ಜಾಗಿದೆ. ಫೆ.16ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಲೀ.ಗೆ
ಬಜೆಟ್‌ನಲ್ಲಿ ಘೋಷಿಸಿದ್ದು
ಜಿಎಸ್‌ಟಿ ಶೇ.18ಕ್ಕೇರಿಕೆ
ಐಷಾರಾಮಿ ವಸ್ತುಗಳ ಮೇಲೆ ಶೇ.25 ತೆರಿಗೆ
ಸುಗಂಧದ್ರವ್ಯಗಳ ಮೇಲೆ ಶೇ.18 ಮಾರಾಟ ತೆರಿಗೆ
ಲ್ಯಾಪ್‌ಟಾಪ್, ಎಲ್‌ಸಿಡಿ ಟಿವಿ, ಸ್ಮಾರ್ಟ್ ಫೋನ್, ಐಪ್ಯಾಡ್, ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿ
ಕಾರಿನ ಶಾಂಪೂ, ಪಾಲಿಶಿಂಗ್ ಕ್ರೀಮ್ ತೆರಿಗೆ ಶೇ.18ಕ್ಕೇರಿಕೆ