Advertisement

ಸಾಧಕರಿಗೆ ಶಾಶ್ವತಿ ಪ್ರಶಸ್ತಿ ಪ್ರದಾನ

11:19 AM Jan 31, 2018 | Team Udayavani |

ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿನ ಅನುಪಮಾ ಸೇವೆಗಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ನೀಡುವ “ಶಾಶ್ವತಿ ಪ್ರಶಸ್ತಿ’ ಪ್ರಶಸ್ತಿಗಳನ್ನು ಬರಹಗಾರ್ತಿ ಮತ್ತು ವಿಮರ್ಶಕಿ ಪ್ರೊ. ಎಲ್‌.ವಿ.ಶಾಂತಕುಮಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸಾಧಕರಿಗೆ ಪ್ರದಾನ ಮಾಡಲಾಯಿತು.

Advertisement

ಜಯನಗರದ 3ನೇ ಹಂತದಲ್ಲಿರುವ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಚಿರಂಜೀವಿ ಸಿಂಗ್‌ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 2014ನೇ ಸಾಲಿನ “ಸದೋದಿತಾ’ ಪ್ರಶಸ್ತಿಗೆ ಬರಹಗಾರ್ತಿ ಪ್ರೊ.ಎಲ್‌.ವಿ.ಶಾಂತಕುಮಾರಿ, 2015ನೇ ಸಾಲಿಗೆ ಶ್ರೇಷ್ಠ ವಿದ್ವಾಂಸ ವಿಮಲಾ ರಾಮರಾವ್‌ ಮತ್ತು 2016 ಸಾಲಿಗೆ ಮೈಸೂರಿನ ದಾಸ ಸಾಹಿತ್ಯದ ವಿದ್ವಾಂಸ ಡಾ.ಟಿ.ಎಸ್‌.ನಾಗರತ್ನಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2014 ನೇ ಸಾಲಿನ “ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ್ತಿ ಎ.ಪಂಕಜಾ, 2015 ರ ಸಾಲಿಗೆ ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ ಮತ್ತು 2016ನೇ ಸಾಲಿಗೆ ಬೆಂಗಳೂರಿನ ಪವಿತ್ರಾ ವೈ.ಎಸ್‌. ಪುರಸ್ಕೃತರಾದರು.

2014ನೇ ಸಾಲಿನ “ನಂಜನಗೂಡ ತಿರುಮಲಾಂಬಾ’ ಪ್ರಶಸ್ತಿಗೆ ಶ್ರೇಷ್ಠ ಬಂಗಾಲಿ ಬರಹಗಾರ್ತಿ ಪ್ರೊ. ನಬನೀತಾ ದಾಸ್‌ಸೇನ್‌, 2015ನೇ ಸಾಲಿನ ಪ್ರಶಸ್ತಿಗೆ ಹಿಂದಿಯ ಶ್ರೇಷ್ಠ ಬರಹಗಾರ್ತಿ ಡಾ. ಅಂಜನಾ ಸಂಧೀರ್‌ ಮತ್ತು 2016ನೇ ಸಾಲಿಗೆ ತೆಲುಗಿನ ಶ್ರೇಷ್ಠ ಬರಹಗಾರ್ತಿ ಪ್ರೊ.ಪಿ. ಸತ್ಯವತಿ ಪಶಸ್ತಿ ಪಡೆದವರಲ್ಲಿ ಸೇರಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ಅಧ್ಯಕ್ಷ ಡಾ.ಎಂ.ಕೆ ಪಾಂಡುರಂಗ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next