Advertisement

ಬಳಕೆಯಾಗದ ಪಾರ್ತಿಸುಬ್ಬನ ಪ್ರಸಂಗಗಳ ಪ್ರಸ್ತುತಿ ಆಗಲಿ: ಪ್ರೊ|ಸಾಮಗ

12:32 AM Feb 18, 2020 | sudhir |

ಕಾಸರಗೋಡು: ಶ್ರೀಮಂತವಾದ ಯಕ್ಷಗಾನ ಪರಂಪರೆ, ಪ್ರಸಂಗ ಸಾಹಿತ್ಯಗಳನ್ನು ಕನ್ನಡ ಸಾಹಿತ್ಯದ ಅಂಗವಾಗಿ ಪರಿಗಣಿಸುತ್ತಿಲ್ಲ ಎಂಬ ಅನೇಕ ವರ್ಷಗಳ ತೊಡಕು ಇಂದಿಗೂ ಬಗೆ‌ಹರಿಯದಿರುವುದು ಗಂಭೀರ ಸ್ವರೂಪದ್ದಾಗಿದೆ. ಯಕ್ಷಗಾನ ಸಾಹಿತ್ಯದ ಸಾಹಿತ್ಯಿಕ ಮೌಲ್ಯಗಳನ್ನು ಪರಿಚಯಿಸುವ ವ್ಯವಸ್ಥೆಗಳು ಹೇಗೆ ಎಂಬ ಬಗ್ಗೆ ಚಿಂತನೆಗಳಾಗಬೇಕು. ಯಕ್ಷ ಪಿತಾಮಹ ಪಾರ್ತಿಸುಬ್ಬನ ಜನಪದ ಜೀವನದ ನಾಡಿಹಿಡಿದು ಬರೆದಿರುವ ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಆಳಕ್ಕಿಳಿದು ಅಧ್ಯಯನ ನಡೆಸಿ ಪ್ರತಿಬಿಂಬಿಸುವ ಯತ್ನಗಳಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ವಿದ್ವಾಂಸ ಪ್ರೊ| ಎಂ.ಎಲ್‌. ಸಾಮಗ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಕಣ್ಣೂರು ವಿಶ್ವವಿದ್ಯಾ ನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಈ ಸಂಸ್ಥೆಗಳ ಸಹಯೋಗದೊಂದಿಗೆ ಕಾಸರಗೋಡಿನ ಚಾಲ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಪಾರ್ತಿಸುಬ್ಬ ಬದುಕು ಬರಹ ವಿಚಾರಗೋಷ್ಠಿಯ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.

ಹೃದಯ ತಟ್ಟುವ, ನೇರ ವಾಕ್ಯಗಳ ಮೂಲಕ ಭಾಷೆಯನ್ನು ಕಟ್ಟಿಕೊಡುವ ಪಾರ್ತಿಸುಬ್ಬನ ಪ್ರಸಂಗ ಅತ್ಯಪೂರ್ವವಾದುದು. ಹೆಚ್ಚು ಬಳಕೆಗೆ ಬಾರದ ಪಾರ್ತಿಸುಬ್ಬನ ಇತರ ಪ್ರಸಂಗಗಳ ಪ್ರದರ್ಶನಗಳು ಹೆಚ್ಚೆಚ್ಚು ಆಗಬೇಕು. ಈ ಮೂಲಕ ಹೊಸ ಹೊಳಹುಗಳಿಗೆ ದಾರಿಯೊದ ಗುವುದು ಎಂದು ಈ ಸಂದರ್ಭ ತಿಳಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ ಸಾಲ್ಯಾನ್‌ ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌. ಶಿವರುದ್ರಪ್ಪ, ಯಕ್ಷಗಾನ ಅರ್ಥಧಾರಿ, ಸಾಹಿತಿ ಡಾ| ರಮಾನಂದ ಬನಾರಿ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್‌., ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದರ್ಶಿ ಸಂಕಬೈಲು ಸತೀಶ ಅಡಪ, ಅಕಾಡೆಮಿ ಸದಸ್ಯ ಯೋಗೀಶ ರಾವ್‌ ಚಿಗುರುಪಾದೆ ಉಪಸ್ಥಿತರಿದ್ದು ಮಾತನಾಡಿದರು.

ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ| ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ನಿರ್ದೇಶಕ ಡಾ| ರಾಜೇಶ್‌ ಬೆಜ್ಜಂಗಳ ವಂದಿಸಿದರು. ಸುಜಾತಾ ಎನ್‌. ಕಾರ್ಯಕ್ರಮ ನಿರೂಪಿಸಿದರು.

Advertisement

ಹಿರಿಯ ಯಕ್ಷಗಾನ ವಿದ್ವಾಂಸ, ಅಂಕಣಕಾರ ಡಾ| ಚಂದ್ರಶೇಖರ ದಾಮ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ| ಆನಂದರಾಮ ಉಪಾಧ್ಯ ಅವರು ಪಾರ್ತಿಸುಬ್ಬನ ಕೃತಿ ಪರಿಚಯದ ಬಗ್ಗೆ ಮತ್ತು ಶ್ರೀಧರ ಡಿ.ಎಸ್‌. ಅವರು ಪಾರ್ತಿಸುಬ್ಬನ ಮಟ್ಟುಗಳ ಬಗ್ಗೆ ಉಪನ್ಯಾಸ ನೀಡಿದರು. ಜೊತೆಗೆ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಬಲಿಪ ಶಿವಶಂಕರ ಭಟ್‌ ಅವರಿಂದ ಪಾರ್ತಿಸುಬ್ಬನ ಪ್ರಸಂಗಗಳ ದಾಖಲೀಕರಣ ಪ್ರಾತ್ಯಕ್ಷಿಕೆಗಳ ಪ್ರಸ್ತುತಿ ನಡೆಯಿತು.

ಲವಕುಮಾರ ಐಲ (ಮೃದಂಗ) ಹಾಗೂ ಮಧೂರು ಗೋಪಾಲಕೃಷ್ಣ ನಾವಡ (ಚೆಂಡೆ) ಯಲ್ಲಿ ಸಹಕರಿಸಿದರು.

ಬಳಿಕ ಹಿರಿಯ ವಿದ್ವಾಂಸ ಡಾ| ರಾಘವ ನಂಬಿಯಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು ವಿಷಯದ ಬಗ್ಗೆ ಮಂಗಳೂರು ವಿಶ್ವವಿದ್ಯಾ ನಿಲಯದ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next