“ಟ್ರೈನ್ ಟು ಪಾಕಿಸ್ಥಾನ’ ಕಾದಂಬರಿಯನ್ನು ಆಧರಿಸಿ ರೂಪುಗೊಂಡ ನಾಟಕ “ಕರುಳ ತೆಪ್ಪದ ಮೇಲೆ’. ಯಾವುದೋ ಬೇಡಿಕೆಗಳನ್ನು ಪರಿಗಣಿಸದೆ, ವಿಭಜನೆ ಎನ್ನುವುದು ಹಲವು ಮೂಲ ಆಶಯಗಳನ್ನೂ ವಿನಾಶಗೊಳಿಸುತ್ತಾ ಹೋಗುತ್ತದೆ. ನಮ್ಮ ಅಸ್ತಿತ್ವವೇ ಶ್ರೇಷ್ಠವೆನ್ನುವ ವಿಕೃತಿಯ ವಿಜೃಂಭಣೆಗೆ ಸಾಮಾನ್ಯರ ವಸ್ತು, ಆಸ್ತಿ ಇಂತದ್ದರ ಸಾಬೀತುಗಳೇ “ಕರುಳ ತೆಪ್ಪದ ಮೇಲೆ’
ಸುಮನಸಾ ಕೊಡವೂರು ಉಡುಪಿ ಆಯೋಜಿಸಿದ, “ಅಂತರಂಗ’ ರಂಗ ತರಬೇತಿ ಶಿಬಿರಾರ್ಥಿಗಳ ಅಂತರಂಗ, ಅನುಭವ ಜನ್ಯ ಕಥೆಯು, ಜಾಗೃತಿಯ ಬದುಕನ್ನ ಜೋಡಿಸಿದ ಋಷತ್ ಸಿಂಗ್‌ರ “ಟ್ರೈನ್ ಟು ಪಾಕಿಸ್ಥಾನ’ ಕಾದಂಬರಿಯನ್ನು ಆಧರಿಸಿದ, ಚಿದಾನಂದ ಸಾಲಿಯವರಿಂದ ರೂಪುಗೊಂಡ ನಾಟಕ “ಕರುಳ ತೆಪ್ಪದ ಮೇಲೆ’. ಯಾವುದೋ ಬೇಡಿಕೆಗಳನ್ನು ಪರಿಗಣಿಸದೆ, ವಿಭಜನೆ ಎನ್ನುವುದು ಹಲವು ಮೂಲ ಆಶಯಗಳನ್ನೂ ವಿನಾಶಗೊಳಿಸುತ್ತಾ ಹೋಗುತ್ತದೆ. ನಮ್ಮ ಅಸ್ತಿತ್ವವೇ ಶ್ರೇಷ್ಠವೆನ್ನುವ ವಿಕೃತಿಯ ವಿಜೃಂಭಣೆಗೆ ಸಾಮಾನ್ಯರ ವಸ್ತು, ಆಸ್ತಿ ಇಂತದ್ದರ ಸಾಬೀತುಗಳೇ “ಕರುಳ ತೆಪ್ಪದ ಮೇಲೆ’.
ಎಂ.ಜಿ.ಎಂ.ಕಾಲೇಜಿನ ರವೀಂದ್ರ ಮಂಟಪದಲ್ಲಿ ಈ ನಾಟಕ ಅಭಿನಯಿಸಿದವರು ಶಿಬಿರಾರ್ಥಿಗಳು. ವಿದ್ದು ಉಚ್ಚಿಲ ನಿರ್ದೇಶಿಸಿದ ನಾಟಕ “ಕರುಳ ತೆಪ್ಪದ ಮೇಲೆ’.ರಂಗಭೂಮಿಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಬೆಳೆದಿರುವ ಸಂದರ್ಭದಲ್ಲಿ ಹೀಗೆಯೇ ಆದರೆ ಒಳಿತೆ ನ್ನುವುದನ್ನು ಅರಿಯಲೋಸುಗ ಸುಮನಸಾದಿಂದ ಸಾದರಗೊಂಡ ಅಂತರಂಗ ಪ್ರತಿಭೆಗಳ ಶೋಧ.
ಅನನ್ಯ ಅನ್ಯೋನ್ಯತೆ ಮೆರೆಯುತ್ತಿರುವ ಮನೋ ಮಜ್ರಾ ಹಳ್ಳಿಯ ಪ್ರಚೋದನೆ ಪ್ರೇರಣೆಯ ಕೋಮು ದಳ್ಳುರಿಗೆ ತುತ್ತಾಗಿ, ಹೊರ ಪ್ರಪಂಚದ ಮಾಹಿತಿಯಲ್ಲಿ ಸಿಗುತ್ತಿದ್ದ ಭಾತೃತ್ವದ ಬದುಕಿನ ಅವಿಭಾಜ್ಯ ಅಂಗವಾಗಿದ್ದ ರೈಲ್ವೇ ನಿಲ್ದಾಣವು ಸಾವುನೋವುಗಳ ಕದನ ಕೇಂದ್ರವಾಗುತ್ತದೆ.
ನೂರ್ ಮತ್ತು ಜಗ್ಗನ ನಡುವಿನ ಪ್ರೀತಿ – ಪ್ರೇಮವು ಎಲ್ಲಾ ವಿಕೃತಿಗಳನ್ನು ಮೀರಿ ನಿಂತದ್ದು ಸಾರ್ವಕಾಲಿಕ ಸತ್ಯವೂ ಹೌದು. ಜಿಲ್ಲಾ ಕಲೆಕ್ಟರ್‌ನ ಕುಟಿಲತೆ, ತೆವಲುಗಳು, ಠಾಣಾಧಿಕಾರಿಯ ಜೊಲ್ಲು ಸುರಿಸುವ ಮನೋವಿಕಾರ, ಪಾಕ್ ಅಧಿಕಾರಿಯ ಕುಟಿಲ ಬುದ್ಧಿ ಎಲ್ಲವು ಮನೋಮಜ್ರಾ ಹಳ್ಳಿಯನ್ನು ಧೂಳೀಪಟ ಮಾಡುವ ಅವರ ಕನಸು, ಕನಸಾಗಿ ಉಳಿಯಲು ಜಗ್ಗ ಮತ್ತು ನೂರ್‌ಳ ಪ್ರೇಮವು ಎಲ್ಲವನ್ನು ಗೆಲ್ಲುವ ಮೂಲಕ ಸಾವಿರಾರು ಜೀವಗಳು ಉಳಿದುಕೊಂಡವು.ನೂರ್‌ಳಾಗಿ ಸಿಂಚನಾ, ಜಗ್ಗನಾಗಿ ಕೌಶಿಕ್ ಜಿಲ್ಲಾ ಕಲೆಕ್ಟರನಾಗಿ ದೀಕ್ಷಿತ್, ಠಾಣಾಧಿಕಾರಿಯಾಗಿ ಕಾರ್ತಿಕ್, ಗಣೇಶ ಪೂರ್ಣರಾಜ್, ನೇಹಾಲ್, ಲತೀಫ್, ವೆಂಕಟೇಶ್ ಪ್ರಸಾದ್, ಕಾರ್ತಿಕ್, ಶ್ರೀವತ್ಸ, ಅನ್‌ಸ್ಟನ್, ದಿವ್ಯಾ, ದರ್ಶಿತಾ, ಪ್ರಿಯದರ್ಶಿನಿ, ದೀಕ್ಷಾ, ಕಿರಣ್, ಹೀಗೆ ಎಲ್ಲರ ಅಭಿನಯವೂ ಪಾತ್ರಕ್ಕೆ ಮೆರುಗು ತಂದು ಕೊಟ್ಟಿತು.
ಬೆಳಕು ನಿಕಿಲ್, ಪ್ರಸಾದನ ಜಗದೀಶ್ ಚೆನ್ನಂಗಡಿ, ಸಂಗೀತ ನಿರ್ವಹಣೆ ಸಚಿನ್, ಗಾಯಕರು ಚಿನ್ಮಯಿ ಮಂಗಳೂರು ಮತ್ತು ಮೇಘನಾ ಕುಂದಾಪುರ. ಬೆಳಕು ನಟನೆಗೆ ಅಡ್ಡಿಯಾಗಿರಲಿಲ್ಲ, ಸಂಗೀತ ಕೇಳುವಂತಿತ್ತು. ಮತ್ತು ನಾಟಕಕ್ಕೆ ಪೂರಕವಾಗಿತ್ತು.
ಜಯರಾಂ ನೀಲಾವರ